Home Food ಚಾಕಲೇಟ್ ಪ್ರಿಯರಿಗೆ ಕಹಿ ಸುದ್ದಿ ಅಪಾಯಕಾರಿ ಸೋಂಕು ಹರಡುತ್ತಿದೆ ಎಚ್ಚರ

ಚಾಕಲೇಟ್ ಪ್ರಿಯರಿಗೆ ಕಹಿ ಸುದ್ದಿ ಅಪಾಯಕಾರಿ ಸೋಂಕು ಹರಡುತ್ತಿದೆ ಎಚ್ಚರ

Hindu neighbor gifts plot of land

Hindu neighbour gifts land to Muslim journalist

ಚಾಕೋಲೇಟ್ ಅಂದ್ರೆ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರಿಗೂ ಇಷ್ಟ. ಆದರೆ ಚಾಕಲೇಟ್ ಕುರಿತು ಆತಂಕಕಾರಿ ವಿಷಯವೊಂದು ಪತ್ತೆಯಾಗಿದೆ. ವಿಶ್ವದ ಅತ್ಯಂತ ಫೇಮಸ್ ಚಾಕೊಲೇಟ್ ಬ್ರ್ಯಾಂಡ್‌ನಲ್ಲಿ ಬ್ಯಾಕ್ಟಿರೀಯಾ ಪತ್ತೆಯಾಗಿದೆ!

ಬೆಲ್ಜಿಯಂನ ವೈಜ್ ಪಟ್ಟಣದಲ್ಲಿ ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಚಾಕೊಲೇಟ್ ಸ್ಥಾವರದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಬ್ಯಾಕ್ಟಿರೀಯಾ ಪತ್ತೆಯಾದ ನಂತರ ತಯಾರಿಸಲಾದ ಎಲ್ಲಾ ಉತ್ಪನ್ನಗಳನ್ನು ನಿರ್ಬಂಧಿಸಲಾಗಿದೆ ಎಂದು ಸಂಸ್ಥೆಯ ವಕ್ತಾರ ಕಾರ್ನೀಲ್ ವಾರ್ಲೋಪ್ ಹೇಳಿದ್ದಾರೆ.

ಬೆಲ್ಜಿಯಂ ದೇಶದಲ್ಲಿ ಉತ್ಪಾದನೆಯಾದ ಚಾಕೋಲೇಟ್‌ ಇಡೀ ವಿಶ್ವಕ್ಕೆ ಸಂಕಷ್ಟ ತಂದೊಡ್ಡಿದೆ. ಕನಿಷ್ಠ 113 ದೇಶಗಳಿಗೆ ರವಾನೆಯಾಗಿರುವ ಚಾಕೋಲೇಟ್‌ ಗಳಲ್ಲಿ ಸಾಲ್ಮೊನೆಲ್ಲಾ ಟೈಫಿಮುರಿಯಮ್‌ ಎನ್ನುವ ಸೋಂಕು ಕಂಡುಬಂದಿದೆ. 

ಮಿಠಾಯಿ ತಯಾರಿಸುವ 73 ಗ್ರಾಹಕರಿಗೆ ಸಗಟು ಬ್ಯಾಚ್‌ಗಳಲ್ಲಿ ದ್ರವ ಚಾಕೊಲೇಟ್ ಅನ್ನು ಉತ್ಪಾದಿಸುವ ಕಾರ್ಖಾನೆಯಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ವಿಸ್ ದೈತ್ಯ ಬ್ಯಾರಿ ಕ್ಯಾಲೆಬಾಟ್ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ವೈಜ್‌ನಲ್ಲಿ ಚಾಕೊಲೇಟ್ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ.

ಬ್ರಸೆಲ್ಸ್‌ನ ವಾಯುವ್ಯದಲ್ಲಿರುವ ಫ್ಲಾಂಡರ್ಸ್‌ನಲ್ಲಿರುವ ಈ ವೈಜ್ ಸ್ಥಾವರಕ್ಕೆ ಜೂನ್ 25 ರಿಂದ ಅವರು ತಯಾರಿಸಿದ ಚಾಕೊಲೇಟ್‌ನಿಂದ ಮಾಡಿದ ಯಾವುದೇ ಉತ್ಪನ್ನಗಳನ್ನು ರವಾನಿಸದಂತೆ ಕೇಳಿಕೊಂಡಿದೆ.