Home Entertainment Rakshita Prem: ‘ಕಾಮಿಡಿ ಕಿಲಾಡಿಗಳು’ ಶೋ ನಿಂದ ನಟಿ ರಕ್ಷಿತಾ ಪ್ರೇಮ್ ಹೊರಬಂದಿದ್ದೇಕೆ? ಕಾರಣ...

Rakshita Prem: ‘ಕಾಮಿಡಿ ಕಿಲಾಡಿಗಳು’ ಶೋ ನಿಂದ ನಟಿ ರಕ್ಷಿತಾ ಪ್ರೇಮ್ ಹೊರಬಂದಿದ್ದೇಕೆ? ಕಾರಣ ಬಹಿರಂಗ!!

Hindu neighbor gifts plot of land

Hindu neighbour gifts land to Muslim journalist

Rakshita Prem : ಕಾಮಿಡಿ ಕಿಲಾಡಿಗಳು ಸೀಸನ್ 5 ಅಕ್ಟೋಬರ್ 25ರಿಂದ ಅಂದರೆ ಇಂದಿನಿಂದ ಗ್ರಾಂಡ್ ಓಪನಿಂಗ್ ಪಡೆದು ಕನ್ನಡಿಗರನ್ನು ನಕ್ಕು ನಗಿಸಲು ತಯಾರಾಗಿ ನಿಂತಿದೆ. ಆದರೆ, ಬರೋಬ್ಬರಿ 9 ವರ್ಷಗಳ ಕಾಲ ತೀರ್ಪುಗಾರರಾಗಿದ್ದ ನಟಿ ರಕ್ಷಿತಾ ‍ಪ್ರೇಮ್ ಏಕಾಏಕಿ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋನಿಂದ ಹೊರ ಬಂದಿದ್ದಾರೆ. ಹೀಗಾಗಿ ರಕ್ಷಿತಾ ಅವರು ಶೋನಿಂದ ಹೊರಬರಲು ಕಾರಣವೇನೆಂದು ಸಾಕಷ್ಟು ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ರಕ್ಷಿತಾ ಅವರು ತಾನೇಕೆ ಶೋ ನಿಂದ ಹೊರಬಂದೆ ಎಂದು ಕಾರಣ ನೀಡಿದ್ದಾರೆ.

ಹೌದು, ಈ ಬಗ್ಗೆ ಖುದ್ದು ನಟಿ ರಕ್ಷಿತಾ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹೀಗೆ ಬರೆದುಕೊಂಡಿದ್ದು, ‘ನಾನು ಕಳೆದ 9 ವರ್ಷದಿಂದ ಕೆಲಸ ಮಾಡುತ್ತಿದ್ದ, ಒಂದು ನಿರ್ದಿಷ್ಟ ಚಾನಲ್‌ನ ಒಂದು ನಿಖರದ ಕಾರ್ಯಕ್ರಮಕ್ಕೆ ನನ್ನ ಟ್ಯಾಗ್ ಮಾಡುತ್ತಿರುವ ಎಲ್ಲರಿಗೂ ನಾನು ಸ್ಪಷ್ಟನೆ ಕೊಡೋಕೆ ಇಷ್ಟಪಡುತ್ತೇನೆ. ನನ್ನ ಜೀವನದಲ್ಲಿ ಹೊಸದನ್ನೇನಾದರೂ ಪ್ರಯತ್ನಿಸಲು ಬದಲಾವಣೆ ಬಯಸಿದ್ದು ಹಾಗೂ ನಾನು ಇನ್ನು ಮುಂದೆ ಆ ಚಾನೆಲ್‌ನ ಭಾಗವಾಗಿರುವುದಿಲ್ಲ’ ಎಂದು ಹೇಳಿದ್ದಾರೆ.

ಅಲ್ಲದೆ ‘ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷದ ಪ್ರಯಾಣದಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಮತ್ತು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ ಅಥವಾ ಸಿನಿಮಾದಲ್ಲಿ ಮತ್ತೆ ನಿಮ್ಮ ಮುಂದೆ ಬಂದರು ಇದೆ ರೀತಿಯ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲಿರುತ್ತದೆ ಎಂದು ಭಾವಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.