

Viral News: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಲ್ಲ ಒಂದು ವಿಚಾರಗಳು ವೈರಲ್ ಆಗುತ್ತಲೇ ಇರುತ್ತದೆ. ಅಂತೆಯೇ ಇದೀಗ ತುಂಬಾ ಸುಂದರವಾದ ಫೋಟೋ ವೈರಲ್ (Viral News) ಆಗಿದೆ. ಹೌದು, ಟೈ ಕಟ್ಟಲು ಪರದಾಡುತ್ತಿದ್ದ ಹುಡುಗನ ಸಹಾಯಕ್ಕೆ ಅಜ್ಜಿ ಧಾವಿಸಿದ್ದು, ಅಜ್ಜನ ತಿವಿದು ಯೂವಕನಿಗೆ ಟೈ ಕಟ್ಟಿಸಿದ್ದಾಳೆ. ಜೊತೆಗೆ ಯಾರೂ ನೋಡದಿರಲು ಅಜ್ಜಿ ಗೋಡೆಯೃ ಆಗಿದ್ದಾಳೆ. ಈ ದೃಶ್ಯ ಫೋಟೋದಲ್ಲಿ ಸೆರೆಯಾಗಿದೆ.
ಯುವಕ ಉದ್ಯೋಗದ ಸಂದರ್ಶನಕ್ಕೆ ಹೊರಟಿದ್ದು, ಮೆಟ್ರೋದಲ್ಲಿ ಶುಭ್ರವಾದ ಬಟ್ಟೆ ಧರಿಸಿ ಕುಳಿತಿದ್ದಾನೆ. ಆತನ ಪಕ್ಕದಲ್ಲಿ ಅಜ್ಜಿ ಅಜ್ಜಿ ಕುಳಿತಿರುತ್ತಾರೆ. ಸಂದರ್ಶನ ಅಂದ್ರೆ ಎಲ್ಲವೂ ಪರ್ಫೆಕ್ಟ್ ಇರಬೇಕು. ಆದರೆ, ಯುವಕ ಟೈ ಕಟ್ಟಿದ್ದು ಕೊಂಚ ಸರಿಯಾಗಿರಲಿಲ್ಲ. ಹಾಗಾಗಿ ಆತ ಮತ್ತೆ ಬಿಚ್ಚಿ ಕಟ್ಟಲು ಪ್ರಯತ್ನಿಸುತ್ತಿದ್ದ. ಇದನ್ನು ಗಮನಿಸಿದ ಅಲ್ಲೇ ಇದ್ದ ಅಜ್ಜಿ ಆತನಿಗೆ ಸಹಾಯಮಾಡಿದ್ದಾರೆ.
https://twitter.com/mhdksafa/status/1668309383955066906?s=20
ಅಜ್ಜಿ ತನ್ನ ಜೊತೆಗಿದ್ದ ಗಂಡನ ಮೊಣಕೈಗೆ ತಿವಿದು ಯುವಕನ ಕಡೆ ನೋಡುವಂತೆ ಹೇಳಿದ್ದಾರೆ. ಯುವಕ ಟೈ ಕಟ್ಟಲು ಪರದಾಡುತ್ತಿರುವುದನ್ನು ತೋರಿಸಿದ್ದಾರೆ. ನಂತರ ಅಜ್ಜ ಯುವಕನೆಡೆ ಧಾವಿಸಿ ಟೈ ಕಟ್ಟಲು ಕೈ ಜೋಡಿಸಿದ್ದಾರೆ. ಟೈ ಕಟ್ಟಿಕೊಳ್ಳುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಅಜ್ಜ ಯುವಕನಿಗೆ ಟೈ ಕಟ್ಟುವಾಗ ಅಜ್ಜಿ ಯಾರಿಗೂ ಕಾಣಬಾರದು ಎಂದು ಅಡ್ಡವಾಗಿ ನಿಂತಿರುವ ದೃಶ್ಯ ಫೋಟೋದಲ್ಲಿ ನೋಡಬಹುದು. ಫೋಟೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಭಿನ್ನ ಕಾಮೆಂಟ್ ಮಾಡಿದ್ದಾರೆ. ಈ ಸುಂದರ ಫೋಟೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ :ಬಾರ್ಡರ್ ಪೊಲೀಸ್ ಫೋರ್ಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ !ಇಲ್ಲಿದೆ ಎಲ್ಲಾ ವಿವರ













