Home Entertainment ದಿರಿಸಿನ ಜೊತೆ ವಿರಸ, ಹೆಬ್ಬಾವಿನ ಜೊತೆ ಸರಸ, ಈ ನಟಿಯ ಹೊಸ ಅವತಾರಕ್ಕೆ ಜನ ಬೇಸ್ತು...

ದಿರಿಸಿನ ಜೊತೆ ವಿರಸ, ಹೆಬ್ಬಾವಿನ ಜೊತೆ ಸರಸ, ಈ ನಟಿಯ ಹೊಸ ಅವತಾರಕ್ಕೆ ಜನ ಬೇಸ್ತು !

urfi Javed

Hindu neighbor gifts plot of land

Hindu neighbour gifts land to Muslim journalist

Urfi Javed : ಯುವಕರ ನಿದ್ದೆಗೆಡಿಸಿದ ಉರ್ಫಿ ಜಾವೇದ್( Urfi Javed) ಹೆಬ್ಬಾವಿನ ಸರಸಾಟದೊಂದಿಗೆ ಮತ್ತೆ ಪ್ರತ್ಯಕ್ಷ, ಯಥಾ ಪ್ರಕಾರ ದಿರಿಸು ಅಪ್ರತ್ಯಕ್ಷ !

ಈ ಬಾರಿ ಬೃಹತ್ ಹೆಬ್ಬಾವೊಂದು ಉರ್ಫಿಯ ಎದೆಯೇರಿ ಕುಳಿತಿದೆ. ಇದೀಗ ಪಟ್ಟೆ ಪಟ್ಟೆಯ ಹೆಬ್ಬಾವು ಆಕೆಯ ಮೃದುಲ ಸುನೀತ ಜಾಗಗಳ ಜತೆ ಪ್ರದೇಶ ಹಂಚಿಕೊಂಡಿದೆ. ಈಕೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಡ್ರಸ್ಸಿಂಗ್ ಹಾಗೂ ಡಿಸೈನಿಂಗ್ ಮೂಲಕವೇ ಗಮನ ಸೆಳೆಯುವ ಉರ್ಫಿ ಜಾವೇದ್ ಬಗ್ಗೆ “ಆಡು ಮುಟ್ಟದ ಸೊಪ್ಪಿಲ್ಲ ಉರ್ಫಿ ಧರಿಸದ ದಿರಿಸಿಲ್ಲ” ಅಂತಾನೆ ಹೇಳಬಹುದು. ಈ ಹಿಂದೆ ಕೈಗಡಿಯಾರವನ್ನು ಕಟ್ಟಿಕೊಂಡು, ಚಕ್ಕುಲಿಯನ್ನು ತಗುಲಿಸಿಕೊಂಡು, ಗೋಣಿಚೀಲವನ್ನು ಹೊದ್ದುಕೊಂಡು, ಹೀಗೆ ಹಲವು ವಿಭಿನ್ನಗಳನ್ನು ಬಳಸಿ ಅರೆಬರೆ ಮೈ ಮುಚ್ಚಿಕೊಂಡು ಬಿಚ್ಚಿಕೊಂಡು ಬರುತ್ತಿದ್ದ ಉರ್ಫಿ, ಡಿಸೈನಿಂಗ್ ಜಗತ್ತನ್ನೇ ತನ್ನ ಕಾಸ್ಟ್ಯೂಮ್ ಕಾನ್ಸೆಪ್ಟ್ ನಿಂದ ಅಲುಗಾಡಿಸಿರುವುದಂತೂ ಸುಳ್ಳಲ್ಲ.

ಇತ್ತೀಚಿಗೆ ನಡೆದ ರೇಡಿಯೋ ನಶಾ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉರ್ಫಿ ಜಾವೇದ್, ಹೆಬ್ಬಾವನ್ನು ಹೋಲುವ ವಿನ್ಯಾಸದ ಬಟ್ಟೆ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಫಕ್ಕನೆ ನೋಡಿದಾಗ ಜನರ ನಶೆ ಸರಕ್ಕನೆ ಏರಿತ್ತು. ಎದೆ ತೆರೆದುಕೊಂಡು ಆಕೆ ನಿಂತಿದ್ದಾಳೆ. ಹೆಬ್ಬಾವು ‘ ಆ ‘ ಜಾಗದಲ್ಲಿ ಅವಕಾಶಕ್ಕಾಗಿ ಹೊಂಚು ಹಾಕಿದ ಹಾಗೆ ತಲೆ ಇಟ್ಟು ಮಲಗಿದೆ !

ಇತ್ತೀಚೆಗೆ, ಕಿರುತೆರೆಯಲ್ಲೂ ನಾಗಿಣಿ ಧಾರಾವಾಹಿಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಹಾಗಾಗಿ ಉರ್ಫಿಯ ಈ ಅವತಾರ ಕಂಡಿರುವ ನೆಟ್ಟಿಗರು, ಈಕೆ ನಾಗಿನ್ ಧಾರವಾಹಿಗೆ ಎಲ್ಲಾದರೂ ಆಡಿಷನ್ ನೀಡಲು ಹೋಗ್ತಿದ್ದಾರಾ ಎಂದು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಒಮ್ಮೆ ಮಯೂರದ ಕಂಠದ ನೀಲಿ ಬಣ್ಣದ ದಾರದ ಉಡುಗೆಯನ್ನು ತೊಟ್ಟು ಅಭಿಮಾನಿಗಳ ಕಣ್ಣನ್ನು ಸೆಳೆದ ಉರ್ಫಿ ಈಗ, ಹೆಬ್ಬಾವು ಮರದ ಕೊಂಬೆಯ ಮೇಲೆ ಹಾಯಾಗಿ ಮಲಗುವ ರೀತಿಯಲ್ಲೇ ತನ್ನ ಎದೆಯ ಮೇಲೆ ಹೆಬ್ಬಾವು ಮಲಗಿದಂತೆ ಕಾಣೋ ಉಡುಗೆಯನ್ನು ತೊಟ್ಟು ಜನರ ಕಣ್ಣನ್ನು ಇನ್ನಷ್ಟು ಮುದಗೊಳಿಸಿದ್ದಾಳೆ.

ಈ ಥರದ ವಿಡಿಯೋ ಜನರಿಗೇನೂ ಹೊಸತಲ್ಲ. ಇಂತಹ ಅರೆಬರೆ ಬಟ್ಟೆಗಳನ್ನೇ ಧರಿಸಿ ಪ್ರತ್ಯಕ್ಷವಾಗೋ ಉರ್ಫಿ ಜಾವೇದ್ ರ ಹೊಸ ಅವತಾರ ಇದು. ಆಕೆ ನಗ್ನವಾಗಿ ಇರದಿದ್ದರೂ, ಥಟ್ ಎಂದು ನೋಡಿದಾಗ ಆಕೆ ಏನೂ ಧರಿಸಿಲ್ಲವೇನೋ ಎಂಬಂತೆ ಕಾಣೋದೇ ಉರ್ಫಿಯ ವಿಶೇಷತೆ. ಈಕೆಯ ಉಡುಗೆಯ ಶೈಲಿಗೆ ಮತ್ತಾರೂ ಸರಿಸಾಟಿಯೇ ಇಲ್ಲ ಎನ್ನುವಂತೆ ಆಕೆಗೆ ಆಕೆಯೇ ಸರಿ ಸಾಟಿಯಾಗಿ ಎಲ್ಲ ರೀತಿಯ ವಸ್ತ್ರವನ್ನು ಧರಿಸಿ ವಿಡಿಯೋ ಅನ್ನೂ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾಳೆ. ಸ್ವಲ್ಪ ಜನ ಹೋಗಳ್ತಾರೆ, ಒಂದಷ್ಟು ಜನ ಬೈತಾರೆ : ಆದ್ರೆ ಕೊನೆಗೆ ಎರಡೂ ಕೆಟಗರಿಯ ಜನ ಉರ್ಫಿ ಫ್ಯಾಷನ್ ಎಕ್ಸ್ಪರಿ ಮೆಂಟ್ ಅನ್ನು. ನೋಡಿಯೇ ನೋಡ್ತಾರೆ. ಅದೇ ಉರ್ಫಿ ಜಾವೆದ್ ಸ್ಪೆಷಾಲಿಟಿ !!!

 

View this post on Instagram

 

A post shared by Uorfi (@urf7i)