Home Entertainment ರವಿಕೆ ಹಾಕದೆ, ಬಾಂಬೆ ಕ್ಯಾಂಡಿಯಿಂದ ಎದೆಯ ಮಿದುವನ್ನು ಅಲಂಕರಿಸಿಕೊಂಡು ಬಂದು ನಿಂತ ನಟಿ | ಬಾಂಬೆ...

ರವಿಕೆ ಹಾಕದೆ, ಬಾಂಬೆ ಕ್ಯಾಂಡಿಯಿಂದ ಎದೆಯ ಮಿದುವನ್ನು ಅಲಂಕರಿಸಿಕೊಂಡು ಬಂದು ನಿಂತ ನಟಿ | ಬಾಂಬೆ ಕ್ಯಾಂಡಿ ಉರ್ಫಿ ಜಾವೇದ್ ಳ ಹೊಸ ಅವತಾರ !!

Hindu neighbor gifts plot of land

Hindu neighbour gifts land to Muslim journalist

ಬಾಂಬೆ ಮಿಠಾಯಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಜಾತ್ರೆ ಸಮಾರಂಭಗಳಲ್ಲಿ ಹಾಗೆನೇ ಅಲ್ಲಲ್ಲಿ ಕೆಲವು ಕಡೆ ದಾರಿ ಬದಿಯಲ್ಲಿ ಈ ಸಿಹಿ ತಿಂಡಿ ಮಾರಾಟ ಮಾಡುವವರನ್ನು ನಾವು ಕಾಣುತ್ತೇವೆ. ಬಾಯಲ್ಲಿಟ್ಟರೆ ಹಾಗೆನೇ ಕರಗುವಂತಹ ಒಂದು ರೀತಿಯ ಮೋಹಕ ಸಿಹಿ ಪದಾರ್ಥ ಇದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡಾ ಈ ಸಿಹಿಯನ್ನು ತಿನ್ನದೇ ಇರೋರಿಲ್ಲ. ಈಗ ಯಾಕೆ ಬಾಂಬೆ ಮಿಠಾಯಿ ವಿಷಯ ಅಂತೀರಾ? ಅದಕ್ಕೊಂದು ಕಾರಣವಿದೆ.

ಸಕ್ಕರೆಯಿಂದ ಮಾಡುವ ಈ ತಿನಿಸನ್ನು ಡ್ರೆಸ್ ಮಾಡಿಕೊಳ್ಳಬಹುದು ಎನ್ನುವ ಕಲ್ಪನೆಯೂ ಯಾರಿಗೂ ಬಂದಿರಲಿಕ್ಕಿಲ್ಲ. ಆದರೆ, ಹೀಗೊಂದು ಐಡಿಯಾ ಉರ್ಫಿ ತಲೆಯಲ್ಲಿ ಹೊಕ್ಕಿದೆ. ಉರ್ಫಿ ಜಾವೇದ್ ಯಾರು ಅಂತ ನೀವ್ ಹೇಗೆ ತಾನೇ ಮರೆತೀರಾ ? ಅದೇ, ಅಂದು ಬಿಗ್ ಬಾಸ್ ಮನೆಯಿಂದ ಹೊರಕ್ಕೆ ಕಾಲಿಟ್ಟ ನಂತರ ತನ್ನ ಚಿತ್ರ ವಿಚಿತ್ರ ಡ್ರೆಸ್ ನಿಂದ ಲೈಮ್ ಲೈಟ್ ನಲ್ಲಿರೋ ನಟಿ.
ಆಕೆ ಹಾಕುವ ಬಟ್ಟೆಗಳು ಆಕೆಗೇ ಪ್ರೀತಿ; ಆಕೆ ಬಟ್ಟೆ ಹಾಕದೆ ಖಾಲಿ ಬಿಟ್ಟ ಜಾಗಗಳು ಆಕೆಯ ಪಡ್ಡೆ ಹುಡುಗರಿಗೆ ಮೋಹಕ ಪ್ರೀತಿ.! ಹೀಗೆ ಬಟ್ಟೆ ವಿಚಾರದಲ್ಲಿ ಉರ್ಫಿ ಸಾಕಷ್ಟು ಟ್ರೋಲ್ ಗೆ ಒಳಗಾಗಿದ್ದಾರೆ. ಡ್ರೆಸ್ ವಿಚಾರದಲ್ಲಿ ಅವರ ವೇಷಗಳು ದಿನ ಕಳೆದಂತೆ ಬದಲಾಗುತ್ತಲೇ ಇವೆ. ಅದರ ಜತೆಗೆ ಆಕೆ ತನ್ನ ಕ್ರಿಯೇಟಿವಿಟಿಯನ್ನೂ ತೋರ್ಪಡಿಸುವ ಕೆಲಸ ಮಾಡಿದ್ದಾಳೆ.

‘ಬಿಗ್ ಬಾಸ್ ಒಟಿಟಿ’ಯಲ್ಲಿ ಸ್ಪರ್ಧಿಯಾಗಿದ್ದ ಸಂದರ್ಭದಲ್ಲಿ ಕಸದ ಚೀಲದಿಂದ ಬಟ್ಟೆ ಮಾಡಕೊಂಡ ವಿಚಾರವಂತೂ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಅನಂತರ ಹೀಗೆಯೇ ಚಿತ್ರವಿಚಿತ್ರ ಉಡುಗೆ ತೊಟ್ಟು ಸಾರ್ವಜನಿಕವಾಗಿ ಕಾಣುತ್ತಾರೆ. ಈಗ ಅವರು ಬಾಂಬೆ ಮಿಠಾಯಿಯಿಂದ ಡ್ರೆಸ್ ಮಾಡಿಕೊಂಡು ಸುತ್ತಾಡಿದ್ದಾರೆ. ಕಸದಿಂದಲೆ ರಸ ತೆಗೆದವಳು ಈಕೆ. ಬಾಂಬೆ ಮಿಠಾಯಿ ಸಿಕ್ರೆ ಬಿಡ್ತಾಳಾ ?! ಸರಿಯಾಗೇ ಅಳತೆ ಹಾಕಿ ಕ್ಯಾಂಡಿಯ ರವಿಕೆ ಹಾಕಿಕೊಂಡು ಸಂಭ್ರಮಿಸಿದ್ದಾಳೆ.
ಅಷ್ಟೇ ಅಲ್ಲದೆ, ಈ ಕಾಟನ್ ಕ್ಯಾಂಡಿಯ ಒಂದು ಸಣ್ಣ ತುಣುಕನ್ನು ಈ ನಟಿ ಸ್ವಲ್ಪವೇ ತೆಗೆದುಕೊಂಡು ಬಾಯಿ ಚಪ್ಪರಿಸಿದ್ದಾಳೆ. ಅದನ್ನು, ಬಾಯಿಬಾಯಿ ತೆರೆದು ಜೊಲ್ಲು ಸುರಿಸುತ್ತ ನೋಡಿದ ಆಕೆಯ ಅಭಿಮಾನಿಯೊಬ್ಬ, ‘ನಮಗೂ ಅದನ್ನು ತಿನ್ನೋಕೆ ಅವಕಾಶ ಕೊಡಿ. ನಾವು ಬಾಂಬೆ ಮಿಠಾಯಿಯನ್ನು ಪೂರ್ತಿಯಾಗಿ ಖಾಲಿ ಮಾಡುತ್ತೇವೆ’ ಎಂದು ಕಮೆಂಟ್ ಮಾಡಿದ್ದಾನೆ.
ಇನ್ನೂ ಕೆಲವರು ಉರ್ಫಿ ಐಡಿಯಾಗೆ ಮೆಚ್ಚುಗೆ ಸೂಚಿಸಿದ್ದಾರೆ.’ನಿಮ್ಮ ಐಡಿಯಾಗೆ ಸರಿಸಾಟಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ” ಎಂಬ ಕಮೆಂಟ್ ಕೂಡಾ ಮಾಡಿದ್ದಾರೆ. ಒಟ್ಟಾರೆ ಉರ್ಫಿ ಊರಲ್ಲಿದ್ದಾಳೆ ಅಂತ ಪದೇ ಪದೇ ಇಂತಹ ಕ್ರಿಯೇಟಿವ್ ಐಡಿಯಾ ಗಳ ಡ್ರೆಸ್ ಹಾಕ್ಕೊಂಡು ಬಂದು ನೆನಪಿಸಿಬಿಡ್ತಾಳೆ.