Home Entertainment Toxic : ಟಾಕ್ಸಿಕ್ ಟೀಸರ್ ರಿಲೀಸ್ – ಕಾರೊಳಗೆ ಯಶ್ ಜೊತೆ ಹಾಟ್ ಆಗಿ ಕಾಣಿಸಿಕೊಂಡ...

Toxic : ಟಾಕ್ಸಿಕ್ ಟೀಸರ್ ರಿಲೀಸ್ – ಕಾರೊಳಗೆ ಯಶ್ ಜೊತೆ ಹಾಟ್ ಆಗಿ ಕಾಣಿಸಿಕೊಂಡ ಬ್ಯೂಟಿ ಯಾರು?

Hindu neighbor gifts plot of land

Hindu neighbour gifts land to Muslim journalist

Toxic : ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸಿನಿಮಾ ಬಿಡುಗಡೆಗೆ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ನಡುವೆ ಚಿತ್ರತಂಡವು ಟೀಸರ್ ಅನ್ನು ರಿಲೀಸ್ ಮಾಡಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಅಲ್ಲದೆ ಭಾರಿ ಕುತೂಹಲ ಕೆರಳಿಸಿರುವ ವಿಚಾರ ಎಂದರೆ ಯಶ್ ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸುಂದರಿ ಯಾರು ಎಂಬುದು.

ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ನಟ ಯಶ್‌ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಸದ್ಯ, ಯಶ್‌ ಜೊತೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸುಂದರಿ ಯಾರೆಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ.

ಯಸ್, ಟೀಸರ್​​ನಲ್ಲಿ ಯಶ್​​ ಕಾರೊಂದರಲ್ಲಿ ಯುವತಿಯೊಟ್ಟಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಯುವತಿಯ ಕೆಲವು ಹಾಟ್ ದೃಶ್ಯಗಳು ಟೀಸರ್​​ನಲ್ಲಿ ಇವೆ. ಯಶ್ ಜೊತೆಗೆ ಇರುವ ನಟಿಯ ಹೆಸರು ನಟೇಲಿ ಬರ್ನ್. ಈ ನಟಿ ಮೂಲತಃ ಉಕ್ರೇನ್​​ವರು ಆದರೆ ಹಾಲಿವುಡ್​ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ನಟಿ, ರೂಪದರ್ಶಿ, ಬರಹಗಾರ್ತಿ ಮತ್ತು ನಿರ್ಮಾಪಕಿ ಕೂಡ ಆಗಿದ್ದಾರೆ. ನಟಾಲಿಯಾ ಬರ್ನ್ ‘7ಹೆವೆನ್ ಪ್ರೊಡಕ್ಷನ್ಸ್’ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ದಿ ಆಕ್ಟರ್ಸ್ ಸ್ಟುಡಿಯೊ’ ಮತ್ತು ‘ದಿ ಟೆಲಿವಿಷನ್ ಅಕಾಡೆಮಿ’ ಸದಸ್ಯೆ ಎಂದು ಬರೆದುಕೊಂಡಿದ್ದಾರೆ.

ಹಾಲಿವುಡ್‌ನ ಸಿನಿಮಾಗಳಲ್ಲಿ ನಟಿಸಿರುವ ನಟಾಲಿಯಾ ಬರ್ನ್ ಇದೀಗ ಟಾಕ್ಸಿಕ್‌ ಸಿನಿಮಾದ ವಿಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಉಕ್ರೇನ್-ಅಮೆರಿಕನ್ ನಟಿಯಾಗಿರುವ ಈಕೆ ಯಾರೆಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಶುರು ಮಾಡಿದ್ದಾರೆ.