Home Entertainment Langoti man: ದೊಡ್ಡ ಪರದೆ ಮೇಲೆ ಲಂಗೋಟಿ ನೇತು ಹಾಕಿದ ‘ಲಂಗೋಟಿ ಮ್ಯಾನ್’: ವ್ಯಾಪಕ ವಿರೋಧ!

Langoti man: ದೊಡ್ಡ ಪರದೆ ಮೇಲೆ ಲಂಗೋಟಿ ನೇತು ಹಾಕಿದ ‘ಲಂಗೋಟಿ ಮ್ಯಾನ್’: ವ್ಯಾಪಕ ವಿರೋಧ!

Langoti man

Hindu neighbor gifts plot of land

Hindu neighbour gifts land to Muslim journalist

Langoti man: ಈ ಲಂಗೋಟಿಯನ್ನು ನೇತು ಹಾಕಿದವರು ಸಂಜೋತಾ ಭಂಡಾರಿ(Sanjotha Bhandari). ಲಂಗೋಟಿ, ಆಕಾಶ್ ‌ರ‍್ಯಾಂಬೊ(Akash Rambo) ಅವರದ್ದು. ಈ ಲಂಗೋಟಿಯನ್ನು ಅನಾವರಣ ಮಾಡಿದವರು ನಟ ಶರಣ್(Actor Sharan). ಅವರಿಗೆ ಈ ಬಗ್ಗೆ ತುಂಬಾ ಹೆಮ್ಮೆ ಇದೆ. ಆದರೆ ಜನ ಯಾಕೋ ಈ ಬಗ್ಗೆ ತೀವ್ರ ಬೇಸರ ಹಾಗೂ ವಿರೋಧ ವ್ಯಕ್ತಿಪಡಿಸಿದ್ದಾರೆ. ಹೌದು, ನಿಮಗೆ ಬ್ಯಾಟ್ ಮ್ಯಾನ್(Bat Man), ಸೂಪರ್ ಮ್ಯಾನ್(Super Man), ಸ್ಪೈಡರ್ ಮ್ಯಾನ್(Spider Man) ಸಿನಿಮಾಗಳ ಬಗ್ಗೆ ಗೊತ್ತು. ಆದರೆ ಈ ಲಂಗೋಟಿ ಮ್ಯಾನ್‌(Langoti Man) ಬಗ್ಗೆ ಗೊತ್ತಾ..?

ಹೊಸದಾಗಿ ಲಂಗೋಟಿ ಮ್ಯಾನ್ ಎಂಬ ಸಿನಿಮಾದ ಟೀಸರನ್ನು(Cinema Teaser) ಅಧಿಕೃತವಾಗಿ ನಟ ಶರಣ್ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಲಂಗೋಟಿಯನ್ನು ಇಟ್ಟುಕೊಂಡು ಒಂದು ಹೊಸ ಕಾಮಿಡಿ ಸಿನಿಮಾ ಬರುತ್ತಿದೆ. ಇನ್ನೇನು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸೋದು ಪಕ್ಕಾ ಅಂತಿದೆ ಈ ಟೈಟಲ್.‌ ಈ ಸಿನಿಮಾವನ್ನು ಈ ಹಿಂದೆ ಮಿರ್ಚಿ ಮಂಡಕಿ ಚಾಯ್ ನಿರ್ದೇಶಿಸಿದ್ದ ಸಂಜೋತಾ ಭಂಡಾರಿ ನಿರ್ದೇಶನ ಮಾಡಿದ್ದಾರೆ. ಆಕಾಶ್ ‌ರ‍್ಯಾಂಬೊ ಅನ್ನೋ ಹೊಸ ನಾಯಕ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇವರು ಲಂಗೋಟಿ ಧರಿಸಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಲಾಂಗೋಟಿ, ಸಾಂಪ್ರದಾಯಿಕ ಭಾರತೀಯ ಒಳ ಉಡುಪು. ಇದೊಂದು ತುಂಡು ಕಾಟನ್‌ ಬಟ್ಟೆ. ಆದರೆ ಅದರಲ್ಲೇ ಇದ್ದಿದ್ದು ಕಂಫರ್ಟ್‌, ಆರೋಗ್ಯ. ಇದೀಗ ಇದೇ ಹೆಸರನ್ನು ಇಟ್ಟುಕೊಂಡು ಚಿತ್ರತಂಡ ಕುತೂಹಲಕಾರಿ ಟೀಸರನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕನ ಸಾಂಪ್ರದಾಯಿಕ ವೇಷಭೂಷಣ ಭಿನ್ನವಾಗಿದೆ. ಲಂಗೋಟಿ ಮ್ಯಾನ್ ಸೂಪರ್ ಹೀರೋ ತರ ತಾಜಾ ಹಾಸ್ಯದೊಂದಿಗೆ ಸಂಯೋಜನೆಗೊಂಡಿದೆ.

ಆದರೆ ಬ್ರಾಹ್ಮಣ ಸಮುದಾಯದ ಕೆಲವು ವರ್ಗಗಳಿಂದ ಲಂಗೋಟಿ ಮ್ಯಾನ್ ಟೈಟಲ್ ಹಾಗೂ ಟೀಸರ್ ಗೆ ವಿರೋಧ ವ್ಯಕ್ತವಾಗಿದೆ. ಇದೀಗ ಕೊಂಚ ಹಿನ್ನಡೆಯನ್ನು ಎದುರಿಸುತ್ತಿದೆ. ಟೀಸರ್‌ನಲ್ಲಿ ನೀಡಿರುವ ಶೀರ್ಷಿಕೆ ಹಾಗೂ ಕೆಲ ದೃಶ್ಯದಿಂದ ವಿವಾದ ಉಂಟಾಗಿದೆ. ಟೀಸರ್ ನಲ್ಲಿ ನಾಯಕ, ಆಕಾಶ್ ರಾಂಬೋ, ತೀರ್ಥ ಕುಮಾರ್ ಎಂಬ ಪಾತ್ರ ಮಾಡಿದ್ದು ಅಲ್ಲಿ ಅವರು ಲಂಗೋಟಿ (ಬಟ್ಟೆಯ ತುಂಡು) ಧರಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು ಓಡುವುದನ್ನು ತೋರಿಸಲಾಗಿದೆ. ಈ ದೃಶ್ಯ ಕೆಲವರಿಗೆ ಇಷ್ಟವಾಗಿಲ್ಲ ಎಂಬ ಮಾತು ಕೇಳಿ ಬರ್ತಿದೆ.

ನಿರ್ದೇಶಕ ಸಂಜೋತಾ ಭಂಡಾರಿ ಈ ವಿರೋಧಕ್ಕೆ ಪ್ರತಿಕ್ರಿಯಿಸಿದ್ದು, ನನ್ನ ಚಿತ್ರದ ಪರಿಕಲ್ಪನೆಗೆ ನಾನು ಬದ್ಧನಾಗಿದ್ದೇನೆ. ಚಿತ್ರ ನೋಡಿದ ಮೇಲೆ ತೀರ್ಮಾನ, ವಿರೋಧ ವ್ಯಕ್ತಪಡಿಸುವ ಮೊದಲು ಚಿತ್ರದ ಆಳವಾದ ಅರ್ಥವನ್ನು ಅನ್ವೇಷಿಸಿ ಈ ಬಗ್ಗೆ ಅಭಿಪ್ರಾಯ ತಿಳಿಸಲು ವೀಕ್ಷಕರನ್ನು ನಿರ್ದೇಶಕರು ಆಹ್ವಾನಿಸಿದ್ದಾರೆ. ಲಂಗೋಟಿ ಮ್ಯಾನ್ ಭಾವನೆಗಳಿಗೆ ಯಾವುದೇ ಧಕ್ಕೆ ಉಂಟುಮಾಡಲ್ಲ. ಹಾಗೆ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಂಪ್ರದಾಯಕ್ಕೆ ಕೆಡುಕು ಉಂಟು ಮಾಡಲ್ಲ, ಇದು ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುವ ಚಿತ್ರ ಮಾಹಿತಿ ನೀಡಿದ್ದಾರೆ. ‘ಲಂಗೋಟಿ ಮ್ಯಾನ್’ ಚಿತ್ರದಲ್ಲಿ ಧೀರೇಂದ್ರ, ಮಹಾಲಕ್ಷ್ಮಿ, ಸಂಹಿತಾ ವಿನಯ, ಹುಲಿ ಕಾರ್ತಿಕ್, ಗಿಲ್ಲಿ ನಟ, ಸ್ನೇಹಾ ರಿಷಿ, ಆಟೋ ನಾಗರಾಜ್ ಮತ್ತು ಪವನ್ ಮುಂತಾದವರು ತಾರಾಗಣದಲ್ಲಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸದ ಹಂತದಲ್ಲಿದ್ದು, ಚಿತ್ರತಂಡ ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನದ ಬಗ್ಗೆ ಮಾಹಿತಿ ನೀಡಲಿದೆ.