Home Entertainment Renukaswamy Case: ಸ್ವಾಮಿ ಕೊಲೆ ಕೇಸ್‌ನಲ್ಲಿ ಚಿಕ್ಕಣ್ಣನಿಗೆ ಸಂಕಷ್ಟ! ಕೊಲೆಗೆ ಸಾಕ್ಷಿಯಾಗಲಿದೆ ಚಿಕ್ಕಣ್ಣ ಹೇಳಿಕೆ?

Renukaswamy Case: ಸ್ವಾಮಿ ಕೊಲೆ ಕೇಸ್‌ನಲ್ಲಿ ಚಿಕ್ಕಣ್ಣನಿಗೆ ಸಂಕಷ್ಟ! ಕೊಲೆಗೆ ಸಾಕ್ಷಿಯಾಗಲಿದೆ ಚಿಕ್ಕಣ್ಣ ಹೇಳಿಕೆ?

Hindu neighbor gifts plot of land

Hindu neighbour gifts land to Muslim journalist

Renukaswamy Case: ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ (Renukaswamy Case) ನಟ ದರ್ಶನ್‌ ಬಂಧನ ಆಗಿ ಎರಡು ತಿಂಗಳು ಆಗಿದೆ. ದರ್ಶನ್ ಬಿಡುಗಡೆಗೆ ಏನೇ ಪ್ರಯತ್ನ ಮಾಡಿದರು ವಿಫಲ ಫಲ ನೀಡುತ್ತಿದೆ.
ಇದರ ಬೆನ್ನಲ್ಲೇ ಈಗ ನಟ ಚಿಕ್ಕಣ್ಣ ಅವರಿಗೆ ಸಂಕಷ್ಟ ಎದುರಾಗಿದೆ.

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು CrPC 164ರ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ನಡೆದ ದಿನ ಚಿಕ್ಕಣ್ಣ ಅವರು ದರ್ಶನ್ ಅವರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದರಂತೆ. ಅಂದು ಪಾರ್ಟಿಯಲ್ಲಿ ಏನೆಲ್ಲಾ ಆಯ್ತು? ದರ್ಶನ್ ಯಾವಾಗ ಬಂದಿದ್ದರು, ಯಾವಾಗ ಹೋದರು, ಆ ವೇಳೆ ಏನೆಲ್ಲಾ ಚರ್ಚೆ ಆಯ್ತು ಎಂಬ ಬಗ್ಗೆ ಪೊಲೀಸರು ಚಿಕ್ಕಣ್ಣ ಅವರನ್ನು ಕರೆದು ಈ ಹಿಂದೆ ವಿಚಾರಣೆ ನಡೆಸಿದ್ದರು.

ಆದರೆ ಈಗ CrPC 164ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಿಕೊಂಡಿದ್ದು, ನ್ಯಾಯಾಲಯದ ಎದುರು ಹೇಳಿಕೆ ದಾಖಲಾಗಿರುವ ಕಾರಣ ಪ್ರಕರಣದಲ್ಲಿ ಇದು ಕೂಡ ಪ್ರಮುಖ ಸಾಕ್ಷಿಯಾಗಲಿದೆಯಂತೆ. ಮುಂದಿನ ದಿನಗಳಲ್ಲಿ ಹೇಳಿಕೆ ಬದಲಾಗದಂತೆ ಮಾಡಲು ಚಿಕ್ಕಣ್ಣ ಅವರ ಹೇಳಿಕೆಯನ್ನು ನ್ಯಾಯಾಧೀಶರ ಎದುರು ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.

ಜೂ.8ರ ರಾತ್ರಿ ದರ್ಶನ್‌ ಜೊತೆ ಇದ್ದೆ, ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿದ್ದೆ. ನಮ್ಮ ಜೊತೆ ವಿನಯ್, ಪ್ರದೂಶ್ ಇದ್ದರು. ಊಟ ಮಾಡುವಾಗ ದರ್ಶನ್‌ಗೆ ಫೋನ್ ಬಂತು, ದರ್ಶನ್ ಸ್ವಲ್ಪ ಟೆನ್ಷನ್ ಆದಂತೆ ಇತ್ತು. ದರ್ಶನ್ ತಕ್ಷಣ ಎದ್ದು ಹೋದರು. ಆಮೇಲೆ ಏನಾಯಿತು ಎಂದು ಗೊತ್ತಿಲ್ಲ. ಕೊಲೆ ಕೇಸ್‌ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.