Home Entertainment Renuka Swamy Murder Case: ನಟ ದರ್ಶನ್‌ಗೆ ಕಾಡ್ತಿದೆಯಾ ಪಶ್ಚಾತ್ತಾಪ? ದುಃಖದಲ್ಲಿ ನಟ ಹೇಳಿದ್ದೇನು?

Renuka Swamy Murder Case: ನಟ ದರ್ಶನ್‌ಗೆ ಕಾಡ್ತಿದೆಯಾ ಪಶ್ಚಾತ್ತಾಪ? ದುಃಖದಲ್ಲಿ ನಟ ಹೇಳಿದ್ದೇನು?

Renuka Swamy Murder Case

Hindu neighbor gifts plot of land

Hindu neighbour gifts land to Muslim journalist

Renuka Swamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ವ್ಯಕ್ತಿ ಕೊಲೆ ಆರೋಪದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್‌ ಇದೀಗ ಕೃತ್ಯದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. ತನ್ನಿಂದ ತಪ್ಪಾಯ್ತು ಎಂದು ಪರಿಚಯಸ್ಥ ಅಧಿಕಾರಿಗಳ ಬಳಿ ಹೇಳಿಕೊಂಡಿರುವ ಕುರಿತು ವರದಿಯಾಗಿದೆ.

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಟ ದರ್ಶನ್ ಸ್ಪರ್ಧೆಗೆ ಫ್ಲಾನ್ ?ಯಾವ ಪಕ್ಷದಿಂದ, ಪ್ಲಾನಿಂಗ್ ಏನು ?

ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್‌ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ.

ಪರಿಚಯಸ್ಥ ಅಧಿಕಾರಿಗಳ ಬಳಿ ತಪ್ಪಾಯ್ತು ಎಂದು ಹೇಳಿರುವುದಾಗಿ ವರದಿಯಾಗಿದೆ. ಉಗುರಲ್ಲಿ ಹೊಡೆದು ಹೋಗೋ ಸಮಸ್ಯೆಯನ್ನು ಕೊಡಲಿ ತಗೊಂಡು ಹೊಡೆದೆ ಎನ್ನುವ ರೀತಿಯಲ್ಲಾಗಿದೆ ದರ್ಶನ್‌ ಪರಿಸ್ಥಿತಿ. ನನ್ನಿಂದಲೇ ಸಹಚರರ ಜೀವನ ಕೂಡಾ ಹಾಳಾಯ್ತು ಎಂದಿರುವ ಅವರು ಈ ಕುರಿತು ಕೊರಗುತ್ತಿದ್ದಾರೆ. ಅಭಿಮಾನಿಗಳು, ಚಿತ್ರರಂಗದ ಗಣ್ಯರನ್ನು ಮುಂದೆ ಎದುರಿಸುವ ಕುರಿತು ಕೂಡಾ ದರ್ಶನ್‌ಗೆ ಚಿಂತೆ ಕಾಡ್ತಿರಬಹುದು.

ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಕೂಡಾ ರೇಣುಕಾಸ್ವಾಮಿ ಅಶ್ಲೀಲ ಮೆಸೇಜನ್ನು ಸೈಬರ್‌ ಕ್ರೈಂ ಗೆ ದೂರು ನೀಡಿದ್ದರೆ ಇಷ್ಟೆ ಲ್ಲ ಆಗ್ತಿರಲಿಲ್ಲ ಎಂದು ತಮ್ಮ ಆಪ್ತರ ಬಳಿ ದುಃಖ ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ನಟ ದರ್ಶನ್‌, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳ ಭವಿಷ್ಯ ಇಂದು (ಜೂ.15) ನಿರ್ಧಾರವಾಗಲಿದೆ. ಬಹುತೇಕ ಜೈಲು ಶಿಕ್ಷೆ ಖಚಿತ ಎನ್ನಲಾಗಿದೆ. ಕೋರಮಂಗಲದ ಜಡ್ಜ್‌ ನಿವಾಸದಲ್ಲಿ ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದು, ಮಧ್ಯಾಹ್ನದ ವೇಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ಎ1 ಆರೋಪಿ ಪವಿತ್ರಾ ಗೌಡ ಅವರು ಈಗಾಗಲೇ ಮಹಿಳಾ ಸಾಂತ್ವನ ಕೇಂದ್ರದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಗೆ ಕರೆತರಲಾಗಿದ್ದು, ಪರಪ್ಪನ ಅಗ್ರಹಾರಕ್ಕೆ ಇಂದೇ ಹೋಗೋ ಸಾಧ್ಯತೆ ಇರಲಿದೆ ಎನ್ನಲಾಗಿದೆ. ಹಾಗಾಗಿ ಬಟ್ಟೆ, ಬ್ಯಾಗ್‌ ಸಮೇತ ಠಾಣೆಗೆ ಬಂದಿರುವ ಕುರಿತು ವರದಿಯಾಗಿದೆ.

ಬಿಎಸ್‌ ಯಡಿಯೂರಪ್ಪ ಬಂಧಿಸದಂತೆ ಹೈಕೋರ್ಟ್‌ ಆದೇಶ