Home Breaking Entertainment News Kannada ಕಿರಿಕ್‌ ಬೆಡಗಿಗೆ ಇದೆಯೇ ಈ ಆರೋಗ್ಯ ಸಮಸ್ಯೆ ? ಅಷ್ಟಕ್ಕೂ ಈ ಮ್ಯಾಟರ್‌ ಲೀಕಾದದ್ದು ಹೀಗೆ!

ಕಿರಿಕ್‌ ಬೆಡಗಿಗೆ ಇದೆಯೇ ಈ ಆರೋಗ್ಯ ಸಮಸ್ಯೆ ? ಅಷ್ಟಕ್ಕೂ ಈ ಮ್ಯಾಟರ್‌ ಲೀಕಾದದ್ದು ಹೀಗೆ!

Hindu neighbor gifts plot of land

Hindu neighbour gifts land to Muslim journalist

ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರೋದು ಕಾಮನ್ ಆಗಿಬಿಟ್ಟಿದೆ. ತನ್ನ ಸಿನೆಮಾದ ವಿಚಾರಕ್ಕಿಂತಲೂ ಹೆಚ್ಚಾಗಿ ವಿವಾದಗಳ ಮೂಲಕವೇ ಹೆಚ್ಚು ಗಮನ ಸೆಳೆದಿರುವ ನಟಿ ಎಂದರೂ ತಪ್ಪಾಗಲಾರದು. ಹೀಗಾಗಿ ಹೆಚ್ಚು ಟ್ರೊಲಿಂಗ್ ಆಗುವ ವಿಚಾರದಲ್ಲಿಯೂ ಟಾಪ್ ಲಿಸ್ಟ್ ನಲ್ಲಿದ್ದಾರೆ. ಆದರೆ, ಈ ನಡುವೆ ರಶ್ಮಿಕಾ ಕುರಿತು ಸ್ಫೋಟಕ ಮಾಹಿತಿಯೊಂದು ಬಯಲಾಗಿದೆ.

ಮನುಷ್ಯ ಎಂದ ಮೇಲೆ ರೋಗ ರುಜಿನಗಳು ಕಾಣಿಸಿಕೊಳ್ಳೋದು ಸಹಜ. ಸಿನಿ ರಂಗದಲ್ಲಿ ಗುರುತಿಸಿಕೊಂಡ ಅದೆಷ್ಟೋ ನಟ ನಟಿಯರು ಕ್ಯಾನ್ಸರ್, ಚರ್ಮದ ಸಮಸ್ಯೆ ,ಮಯೋಸೈಟಿಸ್ ಹೀಗೆ ಭೀಕರ ಕಾಯಿಲೆಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಸದ್ಯ, ನಟಿ ಸಮಂತಾ ಮಯೋಸೈಟಿಸ್ ಸಮಸ್ಯೆ ಎದುರಿಸಿ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ!!! ಈ ನಡುವೆ ಕಿರಿಕ್ ಬೆಡಗಿ ಕೂಡ ಯಾವುದೋ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಸುದ್ಧಿ ಎಲ್ಲೆಡೆ ಹಬ್ಬಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

ಅಷ್ಟಕ್ಕೂ ಈ ರೀತಿ ಗಾಸಿಪ್ ಹುಟ್ಟಿ ಕೊಳ್ಳಲು ಕಾರಣವೂ ಇದೆ. ನ್ಯಾಷನಲ್ ಕ್ರಷ್ ಏನೇ ಮಾಡಿದರೂ ಟ್ರೊಲ್ ಮಾಡುವ ಮಂದಿ ಇರುವಂತೆ ಕಿರಿಕ್ ಬೆಡಗಿ ಯನ್ನೂ ಮೆಚ್ಚಿಕೊಂಡು ಸಾಥ್ ನೀಡುವ ಅಭಿಮಾನಿಗಳು ಕೂಡ ಅಷ್ಟೆ ಸಂಖ್ಯೆಯಲ್ಲಿ ದ್ದಾರೆ. ಹೀಗಾಗಿ, ತಮ್ಮ ಪೋಸ್ಟ್ ಫೋಟೊ ಮೂಲಕ ರಶ್ಮಿಕಾ ಅಭಿಮಾನಿಗಳಿಗೆ ಖುಷಿ ಪಡಿಸುವ ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಇದೀಗ, ಒಗಟಾಗಿ ಮಾಡಿರುವ ಪೋಸ್ಟ್ ಒಂದು ಅಭಿಮಾನಿ ವಲಯದಲ್ಲಿಚರ್ಚೆ ಸೃಷ್ಟಿಯಾಗಲು ಕಾರಣವಾಗಿದೆ.

“ಹುಲಿಗೆ ಹಾಲು.. ಸಿಂಹದೊಂದಿಗೆ ಆಟ.. ಹಾವುಗಳ ಜೊತೆ ಸರಸ: ರಶ್ಮಿಕಾ ಮಾತ್ರ ಮಿಸ್ಸಿಂಗ್ಹುಲಿಗೆ ಹಾಲು.. ಸಿಂಹದೊಂದಿಗೆ ಆಟ.. ಹಾವುಗಳ ಜೊತೆ ಸರಸ: ರಶ್ಮಿಕಾ ಮಾತ್ರ ಮಿಸ್ಸಿಂಗ್ “.

ಕಿರಿಕ್ ಬೆಡಗಿಯ ಈ ಪೋಸ್ಟ್ನ ಒಳಾರ್ಥ ಏನು ಎಂಬ ಪ್ರಶ್ನೆ ಸಹಜವಾಗಿ ಹೆಚ್ಚಿನವರಿಗೆ ಕಾಡಿದ್ದು, ಆದರೆ ಕೊಡಗಿನ ಬೆಡಗಿ ಎಲ್ಲಿಯೂ ಕೂಡ ತಮ್ಮ ಆರೋಗ್ಯ ಸಮಸ್ಯೆ ಕುರಿತು ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ, ರಶ್ಮಿಕಾ ಅವರ ಇನ್‌ಸ್ಟಾಗ್ರಾಂ ಸ್ಟೋರಿಯ ಮೂಲಕ ಅಭಿಮಾನಿಗಳಿಗೆ ಕಿರಿಕ್ ಬೆಡಗಿ ಯಾವುದೋ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ಹಿಂಟ್ ಲಭ್ಯವಾಗಿದೆ. ಸಾಮಾನ್ಯವಾಗಿ ನ್ಯಾಷನಲ್ ಕ್ರಷ್ ತಮ್ಮ ಪ್ರತಿದಿನದ ದಿನಚರಿಯನ್ನು ಕೆಲವೊಮ್ಮೆ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಾರೆ.

ಈ ರೀತಿ, ಇತ್ತೀಚೆಗಷ್ಟೇ, ತಮ್ಮ ದಿನಚರಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ‘ಡಿಯರ್ ಡೈರಿ.. ಈ ದಿನ ಬಹಳ ಇಂಟ್ರೆಸ್ಟಿಂಗ್ ಆಗಿತ್ತು. ಬೆಳಗ್ಗೆ ಏಳುತ್ತಿದ್ದಂತೆ ಕಾರ್ಡಿಯೋ ವರ್ಕ್‌ಔಟ್ ಮಾಡಿ ಬಳಿಕ ತಿಂಡಿ ತಿಂದು ನಾಳಿನ ಶೆಡ್ಯೂಲ್‌ಗಾಗಿ ಬ್ಯಾಗ್ ಸಿದ್ಧಪಡಿಸಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಎಂದಿನಂತೆ ನನ್ನ ಸುತ್ತಲಿನ ವಾತಾವರಣ, ಮಂಜು ನಾನು ಹೊರಗೆ ಹೋಗದಂತೆ ನಟಿಸಿದ್ದು, ‘ಬ್ಯಾಗ್ ಎಲ್ಲಾ ಪ್ಯಾಕ್ ಅಪ್ ಮಾಡಿಕೊಂಡ ಬಳಿಕ ಮತ್ತೆ ವರ್ಕೌಟ್‌ ಮಾಡಿ ಡಿನ್ನರ್ ಮುಗಿಸಿದ ಬಳಿಕ ಡೆರ್ಮಟ್ (ಡೆರ್ಮಟಾಲಜಿ) ಅಪಾಯಿಂಟ್‌ಮೆಂಟ್ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ತನಗೆ ಮುಖ್ಯವಾದ ಮೀಟಿಂಗ್ ಇದ್ದರೂ ಕೂಡ ಕ್ಯಾನ್ಸಲ್ ಮಾಡಿ ಮರಳಿ ಮನೆಗೆ ವಾಪಸ್ ಬಂದುಬಿಟ್ಟೆ. ಗುಡ್‌ನೈಟ್’ ಎಂದು ಲವ್ ಸಿಂಬಲ್ ಹಾಕಿ ಬರೆದುಕೊಂಡಿದ್ದು, ಈ ಪೋಸ್ಟ್‌ನಲ್ಲಿ ಡೆರ್ಮಟ್ ಅಂದರೆ ಡೆರ್ಮಟಾಲಜಿಸ್ಟ್ ಎನ್ನುವಂತೆ ಇದ್ದು ಇದನ್ನು ನೋಡಿ ಅಭಿಮಾನಿಗಳು ರಶ್ಮಿಕಾ ಅವರಿಗೆ ಏನಾಯ್ತಪ್ಪ ಎಂದು ತಲೆ ಕೆಡಿಸಿಕೊಳ್ಳುವ ಹಾಗೆ ಆಗಿಬಿಟ್ಟಿದೆ. ಡೆರ್ಮಟಾಲಜಿಸ್ಟ್ ಅಪಾಯಿಂಟ್‌ಮೆಂಟ್ ಯಾಕೆ?? ಆಕೆಗೆ ಚರ್ಮದ ಸಮಸ್ಯೆ ಎದುರಿಸುತ್ತಿದ್ದಾರಾ?? ಎಂಬೆಲ್ಲ ಅನೇಕ ಪ್ರಶ್ನೆಗಳು ಅಭಿಮಾನಿ ವಲಯದಲ್ಲಿ ಹುಟ್ಟಿಕೊಂಡಿದೆ. ಇನ್ನು ಈ ಕುರಿತಂತೆ ನ್ಯಾಷನಲ್ ಕ್ರಷ್ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಂಡ ಬಳಿಕವಷ್ಟೇ ಅಭಿಮಾನಿಗಳ ಗೊಂದಲ ಬಗೆಹರಿಯಬೇಕಾಗಿದೆ.