Home Entertainment Ramesh Aravind: ಇಂದು, ಏಪ್ರಿಲ್ 20 ರಂದು ಮುಳಿಯ ಪುತ್ತೂರಿಗೆ ರಮೇಶ್ ಅರವಿಂದ್

Ramesh Aravind: ಇಂದು, ಏಪ್ರಿಲ್ 20 ರಂದು ಮುಳಿಯ ಪುತ್ತೂರಿಗೆ ರಮೇಶ್ ಅರವಿಂದ್

Hindu neighbor gifts plot of land

Hindu neighbour gifts land to Muslim journalist

Puttur: ಇಂದು ಪುತ್ತೂರಿಗೆ ಜನಪ್ರಿಯ ನಟ ರಮೇಶ್ ಅರವಿಂದ್ ಆಗಮಿಸಲಿದ್ದಾರೆ. ಪುತ್ತೂರಿನ ಚಿನ್ನಾಭರಣಗಳ ಶೋರೂಮ್ ಹಲವು ಹೊಸತನದೊಂದಿಗೆ ದಕ್ಷಿಣ ಕನ್ನಡದ ಬೃಹತ್ ಮಳಿಗೆಯಾಗಿ ಇಂದು ಅನಾವರಣಗೊಳ್ಳಲಿದ್ದು, ಭಾರತದ ಜನಪ್ರಿಯ ಸಿನಿಮಾ ನಟ ರಮೇಶ ಅರವಿಂದ್ ಇದನ್ನು ಉದ್ಘಾಟನೆ ಮಾಡುವರು.

ಇಂದು, ಏಪ್ರಿಲ್ 20ರ ಬೆಳಿಗ್ಗೆ 9.30 ಗಂಟೆಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆನಂತರ ದೇವರ ದೀಪದೊಂದಿಗೆ ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಶೋರೂಮ್ಗೆ ಬಂದು ದೀಪ ಬೆಳಗಿಸಿ ಉದ್ಘಾಟಿಸಲಿರುವರು. ಶ್ರೀ ರಮೇಶ್ ಅರವಿಂದ್ ಅವರನ್ನು ತೆರೆದ ವಾಹನದಲ್ಲಿ , ಕೋರ್ಟು ರಸ್ತೆಯಲ್ಲಿರುವ ಮುಳಿಯ ಗೋಲ್ಡ್ & ಡೈಮಂಡ್ ಶೋರೂಮಿಗೆ ಕರೆತರಲಾಗುವುದು.
ಜನಪ್ರಿಯ ನಟ ರಮೇಶ್ ರನ್ನು ಕಂಡು ಮಾತನಾಡಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಮುಖ್ಯವಾಗಿ ಮಹಿಳೆಯರು ಸೇರುವ ಸಂಭವವಿದೆ.