

Mukul Dev Death: ಬಾಲಿವುಡ್ ನಟ ಮುಕುಲ್ ದೇವ್ ಶನಿವಾರ ನಿಧನರಾಗಿದ್ದಾರೆ. ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮುಕುಲ್ ದೇವ್. ಮುಕುಲ್ ದೇವ್ ಅವರು ನಟ ಹಾಗೂ ಮಾಡೆಲ್ ರಾಹುಲ್ ದೇವ್ ಅವರ ಸಹೋದರ.
ಮುಕುಲ್ ದೇವ್ ಅವರು ಕನ್ನಡದ ಉಪೇಂದ್ರ ನಟನೆಯ ʼರಜನಿʼ ಸಿನಿಮಾದಲ್ಲಿ ಖಲನಟನಾಗಿ ಅಭಿನಯಿಸಿದ್ದರು.













