Home Entertainment Kantara: ಕಾಂತಾರ ಶೂಟಿಂಗ್‌ ವೇಳೆ ಮಗುಚಿದ ದೋಣಿ: ಚಿತ್ರತಂಡಕ್ಕೆ ಜಲಕಂಟಕ?

Kantara: ಕಾಂತಾರ ಶೂಟಿಂಗ್‌ ವೇಳೆ ಮಗುಚಿದ ದೋಣಿ: ಚಿತ್ರತಂಡಕ್ಕೆ ಜಲಕಂಟಕ?

Hindu neighbor gifts plot of land

Hindu neighbour gifts land to Muslim journalist

Kantara: ಕಾಂತಾರ ಸಿನಿಮಾ-1 ಸಿನಿಮಾ ಶೂಟಿಂಗ್‌ ಆರಂಭವಾದಾಗಿನಿಂದ ಒಂದಲ್ಲ ಒಂದು ಸಂಕಷ್ಟ ಎದುರಾಗುತ್ತಿರುವ ಸಂದರ್ಭ ಈಗಾಗಲೇ ಬಂದಿದೆ. ಇದೀಗ ಇನ್ನೊಂದು ಅವಘಡ ಸಂಭವಿಸಿದೆ.

ರಿಷಬ್‌ ಶೆಟ್ಟಿ ಸಿನಿಮಾದ ಶೂಟಿಂಗ್‌ ಸೆಟ್‌ನಲ್ಲಿ ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಶೂಟಿಂಗ್‌ ದೋಣಿಯೇ ಮಗುಚಿ ಹೋಗಿದೆ. ಕ್ಯಾಮೆರಾಮ್ಯಾನ್‌, ನಟ ರಿಷಬ್‌ ಶೆಟ್ಟಿ ಸೇರಿ 30 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಅದರಲ್ಲೂ ಇತ್ತೀಚೆಗಷ್ಟೇ ಕೇರಳ ಮೂಲದ ಕಪಿಲ್‌ ಎನ್ನುವ ಕಲಾವಿದ ಕಾಂತಾರ ಚಿತ್ರೀಕರಣಕ್ಕೆಂದು ಬಂದು ಸೌಪರ್ಣಿಕಾ ನದಿಯಲ್ಲಿ ಮುಳುಗಿ ಸಾವಾದ ಘಟನೆಯು ಸಂಭವಿಸಿತ್ತು. ಇದೀಗ ನಾಯಕ ನಿರ್ದೇಶಕ ರಿಷಬ್‌ ಶೆಟ್ಟಿ ಕೂಡಾ ಭಾಗಿಯಾಗಿದ್ದಂತಹ ದೃಶ್ಯದಲ್ಲಿ ದೋಣಿ ಮಗುಚಿ ಬಿದ್ದಿದೆ. 30 ಮಂದಿ ಅಪಾಯದಿಂದ ಪಾರಾಗಿದ್ದರೂ ಕೂಡಾ ಚಿತ್ರತಂಡಕ್ಕೆ ಜಲಕಂಟಕ ಎದುರಾಗಿದೆ ಎನ್ನುವ ಮಾತು ಕೇಳಿ ಬರುತ್ತಿರುವುದು ಸುಳ್ಳಲ್ಲ.

ದೋಣಿ ಬಿದ್ದ ನಂತರ ಕಲಾವಿದರು ಹಾಗೂ ತಂತ್ರಜ್ಞರು ಈಜುತ್ತಲೇ ದಡ ಸೇರಿದ್ದಾರೆ. ಕಳೆದ ವಾರವಷ್ಟೇ ವಿಜು ವಿ.ಕೆ. ನಿಧನದ ನಂತರ ಸಿನಿಮಾದ ಕೊನೆಯ ಹಂತದ ಶೂಟಿಂಗ್‌ ಮುಂದುವರಿದಿದ್ದು, ಮಾಣಿ ಜಲಾಶಯದ ಬಳಿ 15 ದಿನಗಳ ನಂತರ ಶೂಟಿಂಗ್‌ ಮಾಡಲು ಯೋಜನೆ ಮಾಡಲಾಗಿತ್ತು.

ಕ್ಯಾಮೆರಾ ಸೇರಿ ಬೋಟ್‌ನಲ್ಲಿದ್ದ ಎಲ್ಲಾ ವಸ್ತುಗಳು ನೀರುಪಾಲಾಗಿದೆ.