Home Entertainment ಕಾಂತಾರ 1 ‘ಕನಕವತಿ’: ಸೇನೆಯಿಂದ ಸಿನಿಮಾಕ್ಕೆ- ಮ.ಅಶೋಕ ಚಕ್ರ ಪಡೆದವರ ಪುತ್ರಿ ರುಕ್ಮಿಣಿ ವಸಂತ್!

ಕಾಂತಾರ 1 ‘ಕನಕವತಿ’: ಸೇನೆಯಿಂದ ಸಿನಿಮಾಕ್ಕೆ- ಮ.ಅಶೋಕ ಚಕ್ರ ಪಡೆದವರ ಪುತ್ರಿ ರುಕ್ಮಿಣಿ ವಸಂತ್!

Hindu neighbor gifts plot of land

Hindu neighbour gifts land to Muslim journalist

Actress Rukmini Vasanth: ರುಕ್ಮಿಣಿ ವಸಂತ್ ಕಾಂತಾರ 1 ರ ಮೂಲಕ ಮತ್ತೊಮ್ಮೆ ಯುವ ಸಮುದಾಯದ ಕಣ್ಣುಗಳಲ್ಲಿ ಹೊಳಪು ಮೂಡಿಸಿದ್ದಾಳೆ. ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡಿರುವ ಈಕೆ ಮೊದಲಿಗೆ ಬೀರ್ಬಲ್ (2019) ಚಿತ್ರದ ಮೂಲಕ ಸಿನೆಮಾ ರಂಗಕ್ಕೆ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. 2023 ರಲ್ಲಿ ಸಪ್ತ ಸಾಗರದಾಚೆ ಎಲ್ಲೋ 1 ಮತ್ತು 2ರ ಮೂಲಕ ರುಕ್ಮಿಣಿ ತಮ್ಮ ನಟನಾ ಪ್ರತಿಭೆಯಲ್ಲಿ ನಿಧಾನಕ್ಕೆ ಪ್ರಗತಿಯನ್ನು ಸಾಧಿಸಿದವಳು. ಈ ಚಿತ್ರಕ್ಕಾಗಿ ಆಕೆ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಕೂಡಾ ಗೆದ್ದಿದ್ದಾರೆ. ಇದೀಗ 2025 ರಲ್ಲಿ ಆಕೆ ಕಾಂತಾರ: ಅಧ್ಯಾಯ 1 ರಲ್ಲಿ ನಟಿಸಿದ್ದು, ಕಾಂತಾರ 1 ಚಿತ್ರ ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಕಾರಣ, ಈ ರುಕ್ಮಿಣಿ ವಸಂತ್ ಯಾರು? ಎಂಬ ಬಗ್ಗೆ ಇಂಟರ್ ನೆಟ್ ನಲ್ಲಿ ಭಾರಿ ಹುಡುಕಾಟ ಸಾಗಿದೆ.

ಮರಣೋತ್ತರ ಅಶೋಕ ಚಕ್ರ ಪಡೆದವರ ಮಗಳು

ರುಕ್ಮಿಣಿ ವಸಂತ್ ಡಿಸೆಂಬರ್ 10, 1996 ರಂದು ಹುಟ್ಟಿದ್ದು, ಅದು ಬೆಂಗಳೂರಿನ ಕನ್ನಡ ಕುಟುಂಬ. ಆಕೆಯ ತಂದೆ, ಕರ್ನಲ್ ವಸಂತ್ ವೇಣುಗೋಪಾಲ್, ಭಾರತದ ಅತ್ಯುನ್ನತ ಶಾಂತಿ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ಕರ್ನಾಟಕದಲ್ಲಿ ಮೊದಲ ಸ್ವೀಕರಿಸಿದವರು. 2007ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ವಿದ್ವಂಸಕ ಕೃತ್ಯದ ನೆನಪು ನಮ್ಮಲ್ಲಿ ಮಾಡುವ ಸಂದರ್ಭವೇ ಇಲ್ಲ. ಅಂದು ಉರಿಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ಗಡಿಯನ್ನು ದಾಟಲು ಭಾರೀ ಶಸ್ತ್ರಸಜ್ಜಿತ ಗುಂಪು ದಾಳಿ ಇಟ್ಟಾಗ, ಆ ಕಾರ್ಯಾಚರಣೆಯಲ್ಲಿ ಹುತಾತ್ಮರಾದವರು ಇದೇ ರುಕ್ಮಿಣಿ ವಸಂತ್ ಅಪ್ಪ. ಅವತ್ತಿನ ಅವರ ಶೋಯರ್ಯಕ್ಕಾಗಿ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಅಶೋಕ ಚಕ್ರ ಮರಣೋತ್ತರವಾಗಿ ದೊರೆಯಿತು. ಆಕೆಯ ತಾಯಿ ಸುಭಾಷಿಣಿ ವಸಂತ್ ಒಬ್ಬ ನಿಪುಣ ಭರತನಾಟ್ಯ ನೃತ್ಯಗಾರ್ತಿ. ಇದೀಗ ತಾಯಿ ಸುಭಾಷಿಣಿ ವಸಂತ್ ರವರು ಕರ್ನಾಟಕದಲ್ಲಿ ಯುದ್ಧ ವಿಧವೆಯರನ್ನು ಬೆಂಬಲಿಸಲು ಒಂದು ಪ್ರತಿಷ್ಠಾನವನ್ನು ಕೂಡಾ ಸ್ಥಾಪಿಸಿದ್ದಾರೆ.

ಇದನ್ನೂ ಓದಿ: ಕಾಂತಾರ 1 ಇದ್ದದ್ದು ಇದ್ದ ಹಾಗೆ ವಿಮರ್ಶೆ , ಕಥೆ ಕಮ್ಮಿಯಾಗಿ, ಕದ್ದ ಸರಕು ತುರುಕಿದರೆ ಏನಾಗುತ್ತದೆ?

ತನ್ನ ಪ್ರಾಥಮಿಕ ಓದನ್ನು ರುಕ್ಮಿಣಿ ಆರ್ಮಿ ಸ್ಕೂಲ್, ಏರ್ ಫೋರ್ಸ್ ಸ್ಕೂಲ್ ಮತ್ತು ಸೆಂಟರ್ ಫಾರ್ ಲರ್ನಿಂಗ್‌ನಲ್ಲಿ ಪಡೆದರು. ನಂತರ ಲಂಡನ್‌ನ ಬ್ಲೂಮ್ಸ್‌ಬರಿಯಲ್ಲಿರುವ ರಾಯಲ್ ಅಕಾಡೆಮಿ ಆಫ್ ಡ್ರಾಮ್ಯಾಟಿಕ್ ಆರ್ಟ್ಸ್‌ನಿಂದ ನಟನಾ ಪದವಿ ಪಡೆದರು.

ಸಿನಿ ಜೀವನ
*2019 ರ ಕನ್ನಡ ಚಲನಚಿತ್ರ ಬೀರ್ಬಲ್, ಚೊಚ್ಚಲ ಅನುಭವ
*2023 ರ ಚಲನಚಿತ್ರಗಳಾದ ಸಪ್ತ ಸಾಗರದಾಚೆ ಎಲ್ಲೋ – 1 ಮತ್ತು ಸಪ್ತ ಸಾಗರದಾಚೆ ಎಲ್ಲೋ – 2 ನಲ್ಲಿ ರಕ್ಷಿತ್ ಶೆಟ್ಟಿ ಜತೆ,
ಇದು ಕಮರ್ಷಿಯಲ್ ಯಶಸ್ಸನ್ನು ಕಂಡ ಸಿನಿಮಾ. ಈ ಪಾತ್ರಕ್ಕಾಗಿ, ಆಕೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಯನ್ನು ಕನ್ನಡದ ಅತ್ಯುತ್ತಮ ನಟಿಗಾಗಿ ಗೆದ್ದರು ಅಲ್ಲದೆ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಳು.
*ಅದೇ ವರ್ಷ ಗಣೇಶ್ ಎದುರು ಬಾನದಾರಿ ಸಿನಿಮಾ
*2024 ರಲ್ಲಿ, ರುಕ್ಮಿಣಿ ಎರಡು ಕನ್ನಡ ಚಿತ್ರಗಳಲ್ಲಿ ನಟನೆ: ಶ್ರೀಮುರಳಿ ಎದುರು ಭಗೀರಾ ಮತ್ತು ಶಿವ ರಾಜ್‌ಕುಮಾರ್ ಎದುರು ಭೈರತಿ ರಣಗಲ್
*ನಿಖಿಲ್ ಸಿದ್ಧಾರ್ಥ ಅವರ ಜೊತೆ ‘ಅಪ್ಪುಡೋ ಇಪ್ಪುಡೋ ಎಪ್ಪುಡೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ
*2025 ರಲ್ಲಿ, ಏಸ್‌ ಚಿತ್ರದೊಂದಿಗೆ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ, ದಿಗ್ಗಜ ನಟ ವಿಜಯ್ ಸೇತುಪತಿ ಎದುರು ರುಕ್ಕು ಪಾತ್ರ. ಮತ್ತೆ ಮದರಾಸಿ, ಇದೀಗ ಕಾಂತಾರ 1 ಜತೆಗೆ ಟಾಕ್ಸಿಕ್ ಸಿನಿಮಾಗಳು ಆಕೆಯ ಕೈಯಲ್ಲಿವೆ. ಒಟ್ಟಾರೆಯಾಗಿ ಏರುಗತಿಯ ಬೆಳವಣಿಗೆಯಲ್ಲಿದ್ದಾರೆ 28ರ ಹರೆಯದ ರುಕ್ಮಿಣಿ ವಸಂತ್!

ಇದನ್ನೂ ಓದಿ:ಕಾಂತಾರ 1 ಇದ್ದದ್ದು ಇದ್ದ ಹಾಗೆ ವಿಮರ್ಶೆ: ಕಥೆ ಕಮ್ಮಿಯಾಗಿ, ಕದ್ದ ಸರಕು ತುರುಕಿದರೆ ಏನಾಗುತ್ತದೆ?