Home Entertainment Kamal Haasan: “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ”: ಚೆನ್ನೈನಲ್ಲಿ ಕಮಲ್‌ ಪರ ಎಲ್ಲೆಡೆ ರಾರಾಜಿಸಿದ ಪೋಸ್ಟರ್‌

Kamal Haasan: “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ”: ಚೆನ್ನೈನಲ್ಲಿ ಕಮಲ್‌ ಪರ ಎಲ್ಲೆಡೆ ರಾರಾಜಿಸಿದ ಪೋಸ್ಟರ್‌

Hindu neighbor gifts plot of land

Hindu neighbour gifts land to Muslim journalist

Kamal Haasan: ಕನ್ನಡ ಭಾಷೆಯ ಕುರಿತು ಹೇಳಿಕೆ ನೀಡಿದ ನಟ ಕಮಲ್‌ ಹಾಸನ್‌ ಅವರಿಗೆ ಮಕ್ಕಳ್‌ ನೀಧಿ ಮೈಯಂ ಪಕ್ಷ (ಎಂಎನ್‌ಎಂ)ವು ಬೆಂಬಲ ನೀಡಿದೆ. ನಟನ ಹೇಳಿಕೆಯನ್ನು ಬೆಂಬಲಿಸಿ “ಸತ್ಯಕ್ಕೆ ಕ್ಷಮೆಯ ಅಗತ್ಯವಿಲ್ಲ” ಎಂಬ ಪೋಸ್ಟರ್‌ಗಳನ್ನು ಚೆನ್ನೈನೆಲ್ಲೆಡೆ ಮಂಗಳವಾರ ಹಾಕಿದೆ.

ಜಗತ್ತಿಗೆ ತಿಳಿದಿರುವುದನ್ನೇ ಕಮಲಹಾಸನ್‌ ಹೇಳಿದ್ದಾರೆ. ಎರಡು ಭಾಷೆಗಳ ನಡುವಿನ ಸಂಬಂಧ ಏನಿದೆ ಎಂದು ಅವರು ತಿಳಿಸಿದ್ದಾರೆ. ಪ್ರೀತಿಯು ಯಾವತ್ತಿಗೂ ಕ್ಷಮೆ ಕೋರುವುದಿಲ್ಲ. ಸತ್ಯವು ಯಾವತ್ತೂ ತನ್ನ ತಲೆ ಬಾಗಿಸುವುದಿಲ್ಲ ಎಂಬ ಒಕ್ಕಣೆಯ ಪೋಸ್ಟರ್‌ಗಳನ್ನು ಕಲಮ ಹಾಸನ್‌ರಿಂದ ಸ್ಥಾಪಿತಗೊಂಎ ಎಂಎನ್‌ಎಂ ಪಕ್ಷ ಕಾರ್ಯಕರ್ತರು ಚೆನ್ನೈನಾದ್ಯಂತ ಹಾಕಿದ್ದಾರೆ.

ಕನ್ನಡವು ತಮಿಳಿನಿಂದ ಹುಟ್ಟಿದೆ ಎನ್ನುವ ಹೇಳಿಕೆ ಕುರಿತು ಕನ್ನಡಪರ ಸಂಘಟನೆಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದವು. ಇದರ ಜೊತೆಗೆ ಇದಕ್ಕೆ ಕ್ಷಮೆ ಕೋರಬೇಕು ಇಲ್ಲದಿದ್ದರೆ ಕಮಲಹಾಸನ್‌ ನಟನೆಯ ಥಗ್‌ ಲೈಫ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಹೇಳಿದ್ದವು.

ಇದೀಗ ಎಂಎನ್‌ಎಂ ಪಕ್ಷದ ಕಾರ್ಯಕರ್ತರು ಯಾವುದೇ ಕಾರಣಕ್ಕೂ ತಮ್ಮ ಹೇಳಿಕೆ ಸಂಬಂಧ ಕ್ಷಮೆ ಕೋರಬೇಕೆಂದೇನಿಲ್ಲ ಎಂದು ಸಂದೇಶ ರವಾನೆ ಮಾಡಿದ್ದಾರೆ.