Home Entertainment Jasmine Bhasin: ನಟಿ, ಬಿಗ್‌ಬಾಸ್‌ ಸ್ಪರ್ಧಿಯ ಕಣ್ಣಿಗೆ ತೀವ್ರ ಹಾನಿ; ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆಯಿಂದ ಕಾರ್ನಿಯಾಗೆ...

Jasmine Bhasin: ನಟಿ, ಬಿಗ್‌ಬಾಸ್‌ ಸ್ಪರ್ಧಿಯ ಕಣ್ಣಿಗೆ ತೀವ್ರ ಹಾನಿ; ಕಾಂಟ್ಯಾಕ್ಟ್‌ ಲೆನ್ಸ್‌ ಬಳಕೆಯಿಂದ ಕಾರ್ನಿಯಾಗೆ ಹಾನಿ?

Jasmine Bhasin

Hindu neighbor gifts plot of land

Hindu neighbour gifts land to Muslim journalist

Jasmine Bhasin: ಕಿರುತೆರೆ ನಟಿ, ಬಿಗ್‌ಬಾಸ್‌ ಸ್ಪರ್ಧಿ, ನಟ ಆಲಿಗೋನಿಯ ಪ್ರಿಯತಮೆ ಜಾಸ್ಮಿನ್ ಭಾಸಿನ್ ಅವರ ಕಣ್ಣಿಗೆ ಹಾನಿ ಉಂಟಾಗಿದೆ. ಕಾಂಟ್ಯಾಕ್ಟ್ ಲೆನ್ಸ್‌ಗಳಿಂದ ನಟಿಯ ಕಾರ್ನಿಯಾ ಹಾನಿಗೊಳಗಾಗಿದೆ, ಇದರಿಂದಾಗಿ ಅವರು ಏನನ್ನೂ ನೋಡಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ಕಿರುತೆರೆಯ ಖ್ಯಾತ ನಟಿ ಜಾಸ್ಮಿನ್ ಭಾಸಿನ್ ಬಗ್ಗೆ ದೊಡ್ಡ ಮಾಹಿತಿಯೊಂದು ಬೆಳಕಿಗೆ ಬಂದಿದೆ. ನಟಿಯ ಕಣ್ಣಿಗೆ ಗಾಯವಾಗಿದ್ದು, ಏನನ್ನೂ ನೋಡಲು ಸಾಧ್ಯವಾಗುತ್ತಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೊರಡಲುನುವಾದಾಗ ಕಣ್ಣಿಗೆ ಹಾಕಿದ್ದ ಕಾಂಟ್ಯಾಕ್ಟ್ ಲೆನ್ಸ್‌ನಿಂದ ಕಾರ್ನಿಯಾ ಹಾನಿಯಾಗಿದೆ ಎಂದು ವರದಿಯಾಗಿದೆ.

ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು, ಎರಡೂ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕಾಂಟ್ಯಾಕ್ಟ್ ಲೆನ್ಸ್ ಧರಿಸಿ ನವದೆಹಲಿಗೆ ತೆರಳಿದ್ದರು. ಅಂದಿನಿಂದ ಅವರು ಕಣ್ಣಿನ ಸಮಸ್ಯೆ ಪ್ರಾರಂಭವಾಗಿದೆ. ವರದಿಗಳ ಪ್ರಕಾರ, ಆಕೆಗೆ ಒಂದು ಹಂತದಲ್ಲಿ ಕಣ್ಣಿನ ನೋವು ತುಂಬಾ ಹೆಚ್ಚಾಗಿದ್ದು, ನಂತರ ಏನೂ ಕಾಣದೇ, ಕತ್ತಲೆ ಆವರಿಸಿದ ಹಾಗೆ ಆಗಿತ್ತು ಎಂದು ಹೇಳಲಾಗಿದೆ.

ಕಣ್ಣಿನ ತಜ್ಞ ಪರೀಕ್ಷೆಯ ನಂತರ ಅವರ ಕಾರ್ನಿಯಾ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರು ನಟಿಗೆ ಚಿಕಿತ್ಸೆ ನೀಡಿದರು ಮತ್ತು ಆಕೆಯ ಕಣ್ಣುಗಳಿಗೆ ಬಟ್ಟೆ ಕಟ್ಟಿದ್ದಾರೆ. ಇದಾದ ನಂತರ ಜಾಸ್ಮಿನ್ ತನ್ನ ಕಣ್ಣುಗಳಿಗೆ ಚಿಕಿತ್ಸೆ ಪಡೆಯಲು ಮುಂಬೈಗೆ ತೆರಳಿದ್ದಾರೆ. ಮಾಹಿತಿಯ ಪ್ರಕಾರ, ಮುಂದಿನ ನಾಲ್ಕೈದು ದಿನಗಳಲ್ಲಿ ನಟಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ, ಆದರೆ ಈ ಸಮಯದಲ್ಲಿ ಅವರು ತಮ್ಮ ಕಣ್ಣುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.

ಜಾಸ್ಮಿನ್ ಅವರು ‘ತಶನ್-ಎ-ಇಷ್ಕ್’ ಮತ್ತು ‘ದಿಲ್ ಸೆ ದಿಲ್ ತಕ್’ ನಂತಹ ಟಿವಿ ಶೋಗಳಲ್ಲಿ ತಮ್ಮ ಅದ್ಭುತ ಅಭಿನಯಿಸಿದರ ಜೊತೆಗೆ ಬಿಗ್‌ಬಾಸ್‌ ಹಿಂದಿಯಲ್ಲಿ ಕೂಡಾ ಭಾಗವಹಿಸಿ ಹೆಸರುವಾಸಿಯಾಗಿದ್ದಾರೆ.