Home Entertainment ಹೋಮ್ ಮಿನಿಸ್ಟರ್ ಚಿತ್ರದ ಬಗ್ಗೆ ಶಿವಣ್ಣ ಹೇಳಿದ ಮಾತುಗಳೇನು ?

ಹೋಮ್ ಮಿನಿಸ್ಟರ್ ಚಿತ್ರದ ಬಗ್ಗೆ ಶಿವಣ್ಣ ಹೇಳಿದ ಮಾತುಗಳೇನು ?

Hindu neighbor gifts plot of land

Hindu neighbour gifts land to Muslim journalist

ಉಪೇಂದ್ರ ಹಾಗೂ ವೇದಿಕಾ ನಟನೆಯ ‘ಹೋಮ್ ಮಿನಿಸ್ಟರ್’ ಶುಕ್ರವಾರ ರಾಜ್ಯಾದ್ಯಂತ ರಿಲೀಸ್ ಆಗಿದೆ.‌ ಅಭಿಮಾನಿಗಳಿಂದ ಒಳ್ಳೆಯ ರಿವ್ಯೂ ಸಿಗುತ್ತಿದೆ. ಈ ಚಿತ್ರವನ್ನು ಸುಜಯ್ ಕೆ ಶ್ರೀಹರಿ ನಿರ್ದೇಶಿಸಿದ್ದು, ಸಾಧು ಕೋಕಿಲ, ತಾನ್ಯಾ ಹೋಪ್, ಅವಿನಾಶ್ ಮೊದಲಾದ ತಾರಾಗಣ ಚಿತ್ರದಲ್ಲಿದೆ.

ಇದೀಗ ಚಿತ್ರದ ಸೆಲೆಬ್ರಿಟಿ ಶೋ ನಡೆದಿದ್ದು, ಶಿವರಾಜ್​ಕುಮಾರ್, ಹಲವು ತಾರಾಗಣ ಚಿತ್ರ ವೀಕ್ಷಿಸಿದ್ದಾರೆ. ಚಿತ್ರವೀಕ್ಷಿಸಿದ ಶಿವರಾಜ್​ಕುಮಾರ್ ಹೋಮ್ ಮಿನಿಸ್ಟರ್ ಚಿತ್ರದ ಬಗ್ಗೆ , ಉಪ್ಪಿ ಬಗ್ಗೆ ಹೇಳಿದ್ದೇನು ಗೊತ್ತೆ ? ಇಲ್ಲಿದೆ ನೋಡಿ

ಉಪೇಂದ್ರ ಅವರ ಇಮೇಜ್​ಗಳಿಂದ ಭಿನ್ನವಾದ ಚಿತ್ರ ಇದು. ‘ಹೋಮ್ ಮಿನಿಸ್ಟರ್’ ಮನರಂಜನೆಯಿಂದ ಕೂಡಿದ್ದು, ಗಂಡ- ಹೆಂಡತಿ ಹೇಗಿರಬೇಕು ಎನ್ನುವುದನ್ನು ಉತ್ತಮವಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಕುಟುಂಬವೆಂದಾಗ ಅದರಲ್ಲಿ ಒಬ್ಬರು ಬಿಟ್ಟುಕೊಡಬೇಕು- ಒಬ್ಬರು ತೆಗೆದುಕೊಳ್ಳುವಂತಹ ಸಂಬಂಧ ಇರಬೇಕು. ಅದನ್ನು ಬಹಳ ಚೆನ್ನಾಗಿ ಸಿನಿಮಾದಲ್ಲಿ ಹೇಳಲಾಗಿದೆ. ಎಂದಿದ್ದಾರೆ

ವೇದಿಕಾ ಗ್ಲಾಮರಸ್ ಹೊರತಾಗಿ ಕಾಣಿಸಿಕೊಂಡಿದ್ದಾರೆ. ಸಣ್ಣ ಸಣ್ಣ ಪಾತ್ರಗಳೂ ಬಹಳ ಅಚ್ಚುಕಟ್ಟಾಗಿವೆ. ಒಟ್ಟಾರೆ ನಾನು ನಕ್ಕು ನಕ್ಕು ಸಿನಿಮಾ ನೋಡಿದ್ದೇನೆ. ಇದೊಂದು ಮಸ್ಟ್ ವಾಚ್ ಚಿತ್ರ”. ಎಂದು ಅಭಿಪ್ರಾಯ ಪಟ್ಟಿದ್ದಾರೆ ಶಿವಣ್ಣ.