Home Entertainment ಹಾಸನ ನಿವೇಶನ ವಿವಾದ: ನಟ ಯಶ್‌ ತಾಯಿ ಪುಷ್ಪಾ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ

ಹಾಸನ ನಿವೇಶನ ವಿವಾದ: ನಟ ಯಶ್‌ ತಾಯಿ ಪುಷ್ಪಾ ಅವರಿಗೆ ನ್ಯಾಯಾಲಯದಲ್ಲಿ ಹಿನ್ನಡೆ

Hindu neighbor gifts plot of land

Hindu neighbour gifts land to Muslim journalist

ಹಾಸನದಲ್ಲಿನ ನಿವೇಶನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯದ ಮೊರೆ ಹೋಗಿದ್ದ ನಿರ್ಮಾಪಕಿ ಪುಷ್ಪಾ ಅರುಣ್‌ ಅವರಿಗೆ ಹಿನ್ನಡೆಯಾಗಿದೆ. ಜೆಎಂಎಫ್‌ಸಿ ಕೋರ್ಟ್‌ ಆದೇಶಕ್ಕೆ ತಡೆಯಾಜ್ಞೆ ಕೋರಿ ಹಾಸನದ ನಾಲ್ಕನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ದೇವರಾಜು ಎನ್ನುವವರು ನ್ಯಾಯಾಲಯದ ಮೊರೆ ಹೋಗಿದ್ದು, ನಿವೇಶನದ ಮೂಲ ವಾರಸುದಾರರಾದ ಲಕ್ಷ್ಮಮ್ಮ ಎಂಬುವವರಿಂದ ದೇವರಾಜು ಜಿಪಿಎ ಪಡೆದುಕೊಂಡಿದ್ದರು. ನ್ಯಾಯಾಲಯದಲ್ಲಿ ದಾಖಲೆಗಳನ್ನು ಸಲ್ಲಿಸಲು ವಿಫಲಗೊಂಡ ಹಿನ್ನೆಲೆ ದೇವರಾಜು ಅವರ ಪರವಾಗಿ ನ್ಯಾಯಾಲಯವು ಆದೇಶವನ್ನು ನೀಡಿತ್ತು.

ಈ ಆದೇಶದನ್ವಯ ಜ.4 ರಂದು ಅಕ್ರಮವಾಗಿ ಹಾಕಲಾಗಿದ್ದ ಕಾಂಪೌಂಡನ್ನು ದೇವರಾಜು ತೆರವು ಮಾಡಿದ್ದರು. ನಂತರ ನಮ್ಮ ಒಡೆತನದ ನಿವೇಶನ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ದೇವರಾಜು ನ್ಯಾಯಾಲಯದ ಮೊರೆ ಹೋಗಿದ್ದರು. ಇಲ್ಲಿ ದೇವರಾಜು ಪರವಾಗಿ ನ್ಯಾಯಾಲಯದ ಆದೇಶ ಬಂದಿತ್ತು. ಈ ಆದೇಶಕ್ಕೆ ಶಾಶ್ವತ ತಡೆ ಕೋರಿ ಪುಷ್ಪಾ ಅವರು ಕೋರ್ಟ್‌ ಮೊರೆ ಹೋಗಿದ್ದರು.

ಈ ಕುರಿತು ಪುಷ್ಪಾ ಮತ್ತು ನಟರಾಜ್‌ ಅವರು ಎರಡು ಪ್ರತ್ಯೇಕ ದೂರು ದಾಖಲು ಮಾಡಿದ್ದರು. ಎರಡೂ ಪ್ರಕರಣವನ್ನು ಆಲಿಸಿದ ನ್ಯಾಯಾಲಯವು ಪ್ರತಿವಾದಿ ದೇವರಾಜು ಅವರಿಗೆ ಜನವರಿ 31 ರಂದು ಹಾಜರಾಗಲು ಆದೇಶ ನೀಡಿದೆ.