Home Entertainment ಗಿಚ್ಚಿ ಗಿಲಿಗಿಲಿ ಜಗಪ್ಪ- ಸುಶ್ಮಿತಾ ಮದುವೆ ! ಇವರಿಬ್ಬರು ಒಂದಾಗಲು ಮೂಲ ಕಾರಣ ಈ ನಟಿಯೇ...

ಗಿಚ್ಚಿ ಗಿಲಿಗಿಲಿ ಜಗಪ್ಪ- ಸುಶ್ಮಿತಾ ಮದುವೆ ! ಇವರಿಬ್ಬರು ಒಂದಾಗಲು ಮೂಲ ಕಾರಣ ಈ ನಟಿಯೇ ನೋಡಿ !!

Hindu neighbor gifts plot of land

Hindu neighbour gifts land to Muslim journalist

Gitchi Giligili : ಖ್ಯಾತ ಕಾಮಿಡಿ ಶೋ ಆಗಿರುವ ಮಜಾ ಭಾರತ ಮತ್ತು ಗಿಚ್ಚಿ ಗಿಲಿಗಿಲಿ(Gitchi Giligili)ಕಾಮಿಡಿ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರುವ ಸುಶ್ಮಿತಾ ಮತ್ತು ಜಗಪ್ಪ ಮದುವೆಯಾಗುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಹೊಸ ತಿರುವು ಪಡೆದುಕೊಂಡಿದೆ.

 

ಹೌದು, ಇದೀಗ ಈ ವಿಚಾರದ ಬಗ್ಗೆ ಸುಶ್ಮಿತಾ ಸ್ಪಷ್ಟನೆ ಕೊಟ್ಟಿದ್ದಾರೆ. ಅಯ್ಯೋ ಏನಿದು ಹರಿದಾಡುತ್ತಿರುವುದು. ಇದೆಲ್ಲಾ ಸುಳ್ಳು ಸುದ್ದಿ. ಮೊದಲನೇ ಸೀಸನ್‌ನಿಂದಲೂ ಶೋ ನಲ್ಲಿ ಜನರು ನಮ್ಮನ್ನು ತುಂಬಾ ಜೋಡಿಯಾಗಿ ನೋಡಿದ್ದಾರ. ಪರಿಣಾಮ ರಿಯಲ್ ಜೀವನದಲ್ಲೂ ಜೋಡಿ ಅಂದುಕೊಂಡಿದ್ದಾರೆ’ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

 

ಇನ್ನು ‘ರಚಿತಾ ರಾಮ್ (Rachitha Ram) ಮೇಡಂ ಲವ್ ಮದ್ವೆ ಮಾಡಿಸುತ್ತಾರೆ ಅನ್ನೋ ವಿಚಾರ ಇತ್ತು. ಪಾಪ ಅವರು ಅಡ್ಡ ಬಂದಿಲ್ಲ ಅವರಿಂದ ನಾವು ಒಳ್ಳೆ ಒಳ್ಳೆ ಸ್ಕಿಟ್‌ಗಳನ್ನು ಮಾಡಿದ್ದೀವಿ. ರಚ್ಚು ಸ್ವೀಟ್ ಹಾರ್ಟ್‌ ಯಾವಾಗಲೂ ಮಾತನಾಡಿಸುತ್ತಿರುತ್ತಾರೆ ಬರ್ತಡೇಗೆ ಹೋಗಿ ವಿಶ್ ಮಾಡಿದ್ದೀವಿ. ಅವರು ಯಾವ ರೀತಿನೂ ಅಡ್ಡ ಬಂದಿಲ್ಲ ಆದರೆ ಒಂದು ಮಾಡಲು ತುಂಬಾ ಪ್ರಯತ್ನ ಪಟ್ಟರು ನಾವೇ ಬೇರೆ ಬೇರೆ ಆಗ್ಬಿಟ್ವಿ. ಎಂದು ಸುಶ್ಮಿತಾ ಹೇಳಿದ್ದಾರೆ.

 

ಟಿವಿಯಲ್ಲಿ ಸ್ಕಿಟ್‌ಗೆ ನಮ್ಮನ್ನು ಪದೇ ಪದೇ ಜೋಡಿ ಮಾಡಿ ಮಾಡಿ ನನಗೆ ಹುಡುಗ ಸಿಗುತ್ತಿಲ್ಲ ಜಗಪ್ಪನಿಗೆ ಹುಡುಕಿ ಸಿಗುತ್ತಿಲ್ಲ. ಜನರೇ ನಮ್ಮ ಜೀವನ ಸಂಗಾತಿ ಬಗ್ಗೆ ಫಿಕ್ಸ್‌ ಆಗಿ ಬಿಟ್ಟಿದ್ದಾರೆ.

 

ಹೆಚ್ಚಾಗಿ ಆನ್‌ಸ್ಕ್ರೀನ್‌ ಜೋಡಿ ಸಾಮಾನ್ಯವಾಗಿ ಜನರಿಗೆ ಇಷ್ಟ ಆಗುವುದು ಕಡಿಮೆನೇ ಅದರಲ್ಲೂ ನಮ್ಮ ಜುಗಲ್ ಬಂದಿ ಇಷ್ಟ ಪಡುತ್ತಾರೆ ಅಂದ್ರೆ ಇನ್ನೂ ಖುಷಿ ಆಗುತ್ತೆ ಆರಂಭದಿಂದ ಈ ಕ್ಷಣದವರೆಗೂ ನಮ್ಮ ಕಾಂಬಿನೇಷನ್‌ ಸ್ಕಿಟ್‌ನ ಜನರು ಇಷ್ಟ ಪಡುತ್ತಿದ್ದಾರೆ.

 

ಒಟ್ಟಿನಲ್ಲಿ ಕಲಾವಿದೆ ಆಗಬೇಕು ನಟನೆ ಮಾಡಬೇಕು ಅನ್ನೋ ಆಸೆ ತುಂಬಾ ವರ್ಷಗಳಿಂದ ಇತ್ತು ಆದರೆ ಇಷ್ಟು ದೂರ ಜರ್ನಿ ಕರೆದುಕೊಂಡು ಬರುತ್ತೆ ಬದುಕು ಎಂದು ಗೊತ್ತಿರಲಿಲ್ಲ. ಮಜಾ ಭಾರತ ವೇದಿಕೆ ಸಿಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ನಟನೆ ಕ್ಷೇತ್ರದಲ್ಲಿ ಯಾವ ಆಸೆನೂ ಇಲ್ಲದೆ ಕೆಲಸ ಬಂದಾಗ ಕೆಲಸ ಮಾಡುತ್ತಿದ್ದೆ’ ಎಂದು ಸುಶ್ಮಿತಾ ಹೇಳಿದ್ದಾರೆ.