Home Entertainment ಈ ಚತುರ್ಥ ಪಾತ್ರಗಳು ಕೆಜಿಎಫ್2 ನಲ್ಲಿ ಇಲ್ಲ !

ಈ ಚತುರ್ಥ ಪಾತ್ರಗಳು ಕೆಜಿಎಫ್2 ನಲ್ಲಿ ಇಲ್ಲ !

Hindu neighbor gifts plot of land

Hindu neighbour gifts land to Muslim journalist

ಕೆಜಿಎಫ್; ಚಾಪ್ಟರ್ 1′ ಸಿನಿಮಾದಲ್ಲಿ ಆನಂದ್ ಇಂಗಳಗಿ ಪಾತ್ರದಲ್ಲಿ ನಟಿಸಿದ್ದ ಅನಂತ್ ನಾಗ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿಲ್ಲ. ಅನಂತ್‌ನಾಗ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸದೆ ಇರುವುದು ಬಹಳ ಸುದ್ದಿಯೂ ಆಗಿದೆ. ಆದರೆ ‘ಕೆಜಿಎಫ್ 2’ ಸಿನಿಮಾದಲ್ಲಿ ಅನಂತ್‌ನಾಗ್ ಮಾತ್ರವೇ ಅಲ್ಲ ಇನ್ನೂ ಹಲವು ಪಾತ್ರಗಳು ಮಿಸ್ ಆಗಿವೆ. ಪಾತ್ರಗಳ ಪಟ್ಟಿ ಇಲ್ಲಿದೆ.

ಕೆಜಿಎಫ್​ ಚಾಪ್ಟರ್​ 1 ಸಿನಿಮಾದಲ್ಲಿ ಕುಲಕರ್ಣಿ ಎಂಬ ಪಾತ್ರವೊಂದಿತ್ತು. ಸದಾ ಗರುಡನ ಜೊತೆ ಇರುತ್ತಿದ್ದ ಪಾತ್ರವೇ ಕುಲಕರ್ಣಿ. ಕೊನೆಗೆ ಗರುಡನ ಜೊತೆಯಾಗಿದ್ದುಕೊಂಡೆ ಅವನನ್ನು ಹೊಡೆಯಲು ಸ್ಕೆಚ್ ಹಾಕಿದ್ದ ತಂಡಕ್ಕೆ ಬೆಂಬಲ ನೀಡುತ್ತಿತ್ತು. ಈ ಪಾತ್ರದಲ್ಲಿ ಅಶ್ವತ್ಥ್ ನೀನಾಸಂ ನಟಿಸಿದ್ದರು. ಆದರೆ ಈ ಪಾತ್ರ ಸಹ ‘ಕೆಜಿಎಫ್ 2’ ಸಿನಿಮಾದಲ್ಲಿ ಇಲ್ಲ. 

ಕೆಜಿಎಫ್; ಚಾಪ್ಟರ್ 1′ ಸಿನಿಮಾದಲ್ಲಿ ಕತೆ ಹೇಳುವ ಹುಚ್ಚನೊಬ್ಬನಿದ್ದ. ಹೆಣ್ಣು ಮಕ್ಕಳು ಹುಟ್ಟಿದರೆ ತೆಗೆದುಕೊಂಡು ಹೋಗಿ ಮಣ್ಣು ಮಾಡುವ ಕೆಲಸವೂ ಅವನದ್ದೇ. ಈ ಹುಚ್ಚನ ‘ಕೆಜಿಎಫ್ 2′ ಸಿನಿಮಾದಲ್ಲಿಲ್ಲ. ಕೆಜಿಎಫ್; ಚಾಪ್ಟರ್ 1’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಅನಾರೋಗ್ಯದಿಂದ ಆ ವ್ಯಕ್ತಿ ಮೃತ ಪಟ್ಟಿದ್ದರು.

‘ಕೆಜಿಎಫ್; ಚಾಪ್ಟರ್ 1’ ಸಿನಿಮಾದಲ್ಲಿ ಹುಚ್ಚನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ ನಿಧನ ಹೊಂದಿದ ಕಾರಣ ಅವನ ಪಾತ್ರವನ್ನು ಮುಂದುವರೆಸಲು ನಿರ್ದೇಶಕರಿಂದ ಸಾಧ್ಯವಾಗಲಿಲ್ಲ.

ಕೆಜಿಎಫ್​ ಮೊದಲ ಭಾಗದಲ್ಲಿ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದು ಬಿ.ಸುರೇಶ್. ನರಾಚಿಯ ನರಕದಲ್ಲಿಯೇ ಬಹಳ ವರ್ಷಗಳ ಕಾಲದಿಂದಲೂ ಇದ್ದು, ಅಲ್ಲಿನ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡುತ್ತಾ, ಆ ನತದೃಷ್ಟ ಜನಗಳ ಮುಂದಾಳತ್ವ ವಹಿಸಿರುವ ವಿಠಲ್ ಪಾತ್ರದಲ್ಲಿ ನಟಿಸಿದ್ದರು. ಆದರೆ ‘ಕೆಜಿಎಫ್ 2’ ಸಿನಿಮಾದಲ್ಲಿ ಬಿ ಸುರೇಶ್ ನಟಿಸಿಲ್ಲ.ಈ ಪಾತ್ರದ ಬದಲಾಗಿ ಕೆಜಿಎಫ್​ ಮೊದಲ ಭಾಗದಲ್ಲಿ ಬಿ ಸುರೇಶ್​ ಪಾತ್ರದ ಜೊತೆ ಇದ್ದ ಟಿ ಎನ್​ ನರಸಿಂಹಮೂರ್ತಿ ಪಾತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಕೆಜಿಎಫ್; ಚಾಪ್ಟರ್ 1′ ಸಿನಿಮಾದಲ್ಲಿ ಬಹಳ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಅನಂತ್‌ನಾಗ್ ‘ಕೆಜಿಎಫ್ 2’ ಸಿನಿಮಾದಲ್ಲಿ ನಟಿಸಿಲ್ಲ. ಪ್ರಕಾಶ್ ರೈ ಅವರನ್ನು ಅನಂತ್ ನಾಗ್ ಪಾತ್ರದ ಪುತ್ರನ ಪಾತ್ರದಲ್ಲಿ ಪರಿಚಯ ಮಾಡಲಾಗಿದೆ.