Home Entertainment Kichcha Sudeep: ಕಿಚ್ಚನ 50ನೇ ಸಿನಿಮಾಗೆ ‘ಕಾಂತಾರ’ ನಟನ ನಿರ್ದೇಶನ? ಇಲ್ಲಿದೆ ಎಕ್ಸ್ಲೂಸಿವ್ ನ್ಯೂಸ್!!!

Kichcha Sudeep: ಕಿಚ್ಚನ 50ನೇ ಸಿನಿಮಾಗೆ ‘ಕಾಂತಾರ’ ನಟನ ನಿರ್ದೇಶನ? ಇಲ್ಲಿದೆ ಎಕ್ಸ್ಲೂಸಿವ್ ನ್ಯೂಸ್!!!

Hindu neighbor gifts plot of land

Hindu neighbour gifts land to Muslim journalist

Kichcha Sudeep: ಕನ್ನಡದ ಅಭಿನಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿರುವ ನಟ ಕಿಚ್ಚ ಸುದೀಪ್ (Kichcha Sudeep) ಇತ್ತೀಚೆಗಷ್ಟೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಮುಗಿಸಿದ್ದು, ಇದೀಗ, ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲು ರೆಡಿ ಆಗಿದ್ದಾರೆ.

ಕಿಚ್ಚ ಸುದೀಪ್‌ ಅವರ 50ನೇ ಸಿನಿಮಾವನ್ನು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ವರದಿಯಾಗಿದೆ.ಆದರೆ ಈ ವಿಚಾರದ ಕುರಿತಾಗಿ ರಿಷಬ್‌ ಆಗಲಿ ಕಿಚ್ಚ ಸುದೀಪ್‌ ಆಗಲಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಈ ಚಿತ್ರದಲ್ಲಿ ಗದರ್ -2 ನಟಿ ಸಿಮ್ರತ್ ಕೌರ್ ( Simrat Kaur) ‘ಕಿಚ್ಚ 46 ‘ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಯಾಗಿ ಪರದೆ ಹಂಚಿಕೊಳ್ಳುವ ಸಂಭವ ಹೆಚ್ಚಿದೆ ಎಂದು ವರದಿಯಾಗಿದೆ.’ ಕಿಚ್ಚ 46 ‘ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಇದೊಂದು ಥ್ರಿಲ್ಲರ್ ಸಿನಿಮಾ ಎಂಬ ಸುದ್ದಿ ಕೂಡ ಹರಿದಾಡುತ್ತಿವೆ. ಆದರೆ ಈ ಕುರಿತು ಚಿತ್ರತಂಡ ಯಾವ ಮಾಹಿತಿ ಕೂಡ ಬಹಿರಂಗ ಪಡಿಸಿಲ್ಲ.

ಕಿಚ್ಚ ಸುದೀಪ್‌ (Kichcha Sudeep) ಅವರ ಕೈಯಲ್ಲಿ ಈಗಾಗಲೇ ಅನೇಕ ಸಿನಿಮಾಗಳಿವೆಯಂತೆ. ಕಿಚ್ಚ 46 ಸಿನಿಮಾದ ಬಗ್ಗೆ ಆಗಾಗ ಮಾಹಿತಿ ನೀಡುತ್ತಿರುತ್ತಾರೆ. ಸುದೀಪ್ ಅವರ 47ನೇ ಸಿನಿಮಾಗೆ ಕಿಚ್ಚ ಅವರ ಮೈ ಆಟೋಗ್ರಾಫ್ ಚಿತ್ರದ ನಿರ್ದೇಶಕರಾದ ಚೇರನ್ ಜೊತೆಗೆ ಕೈಜೋಡಿಸಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ. 49ನೇ ಸಿನಿಮಾ ಕಬ್ಜ ಚಂದ್ರು ಡೈರೆಕ್ಷನ್‌ನಲ್ಲಿ ಸಿನಿಮಾ ಆರಂಭವಾಗಲಿದ್ದು,ಆ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಅವರ ಕಥೆ-ಚಿತ್ರಕಥೆ ಇರಲಿದ್ದು, ಇದಾದ ಬಳಿಕ 50ನೇ ಚಿತ್ರದ ಪ್ಲ್ಯಾನ್ ಈಗಾಗಲೇ ರೆಡಿಯಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಕಿಚ್ಚ ಸುದೀಪ್‌ ಅವರ 50ನೇ ಸಿನಿಮಾ ಆ್ಯಕ್ಷನ್ ಕಟ್‌ ಹೇಳಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ರಿಷಬ್‌ ಆಗಲಿ ಕಿಚ್ಚ ಸುದೀಪ್‌ ಆಗಲಿ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.