Home Entertainment Samantha: ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿಯಿಂದ ನಟಿ ಸಮಂತಾ ಎರಡನೇ ಮದುವೆ ಕುರಿತು ಭವಿಷ್ಯವಾಣಿ!!!

Samantha: ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿಯಿಂದ ನಟಿ ಸಮಂತಾ ಎರಡನೇ ಮದುವೆ ಕುರಿತು ಭವಿಷ್ಯವಾಣಿ!!!

Image Credit Source: TV5 Telugu

Hindu neighbor gifts plot of land

Hindu neighbour gifts land to Muslim journalist

ಟಾಲಿವುಡ್‌ನ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ (Venu Swamy) ಹಲವು ಸೆಲೆಬ್ರಿಟಿಗಳ ಮದುವೆ, ಮದುವೆ ನಂತರದ ಭವಿಷ್ಯ, ಪ್ರೇಮ, ವೃತ್ತಿ ಕುರಿತು ಹಲವು ಮಾಹಿತಿಗಳ ಬಗ್ಗೆ ಕೆಲ ವರ್ಷಗಳಲ್ಲಿ ಹೇಳುತ್ತಾ ಬರುತ್ತಿದ್ದು, ಇದರ ಕುರಿತು ಚರ್ಚೆಗಳು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವಂತಹ ವರದಿಯನ್ನು ಅವರನ್ನು ಹೇಳುತ್ತಾರೆ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಕೂಡಾ ಅವರು ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದ ವೇಣು ಸ್ವಾಮಿ ಅವರು ಈಗ ನಟಿ ಸಮಂತಾ (Samantha) ಕುರಿತು ಮದುವೆಯ ಬಗ್ಗೆ ಹೇಳಿರುವ ವೀಡಿಯೋವೊಂದು ವೈರಲ್‌ ಆಗಿದೆ.

ಸಮಂತಾ, ಪವನ್‌ ಕಲ್ಯಾಣ್‌, ಚಿರಂಜೀವಿ ಪುತ್ರಿ ಮರು ಮದುವೆ, ನಾಗಚೈತನ್ಯ ಸಹೋದರ ಅಖಿಲ್‌ ಮದುವೆ ಕುರಿತು ಈ ಹಳೆಯ ವೀಡಿಯೋದಲ್ಲಿ ಮಾತನಾಡಿದ್ದಾರೆ. ಸಮಂತಾ ಹಾಗೂ ನಾಗಚೈತನ್ಯ ಎರಡನೇ ಮದುವೆ ಆಗಲಿದ್ದಾರೆ ಎಂಬ ಮಾತನ್ನು ಅವರು ಹೇಳಿದ್ದಾರೆ. ತೆಲುಗು ನಟ ಪವನ್‌ ಕಲ್ಯಾಣ್‌ ಮೂರು ಮದುವೆ ಆಗಿರುವುದಕ್ಕೆ ಕಾರಣ ಗುರುವಿನ ಸ್ಥಾನವೇ ಪ್ರಮುಖವಾಗಿರುವುದ. ಇಲ್ಲಿ ವೈವಾಹಿಕ ಜೀವನಕ್ಕೆ ಗುರುವಿನ ಸ್ಥಾನ ಪ್ರಮುಖ ಎಂದು ಹೇಳಿದ್ದಾರೆ. ಚಿರಂಜೀವಿ ಪುತ್ರಿ ಶ್ರಿಜಾ ಬಗ್ಗೆ ಹೇಳಿದ ಅವರು ಎರಡು ಮದುವೆ ಈಗಾಗಲೇ ಆಕೆ ಆಗಿದ್ದು, ಆಕೆ ಇನ್ನೂ ಎರಡು ಮದುವೆಯಾಗುತ್ತಾರೆ ಎಂದು ಹೇಳಿದ್ದಾರೆ.

ಹಳೆಯ ಸಂದರ್ಶನದ ಈ ವೀಡಿಯೋದಲ್ಲಿ ಅವರು ಮಾತು ಮುಂದುವರಿಸುತ್ತಾ, ವೇಣು ಸ್ವಾಮಿ ಅವರು ನಾಗಾರ್ಜುನ ಕುಟುಂಬದಲ್ಲಿ ವಿಚ್ಛೇದನ ಸಹಜವಾಗಿದೆ. ಇದು ಅವರ ಜಾತಕದಲ್ಲಿಯೇ ಇದೆ. ಇನ್ನು ಹೇಳುವುದಾದರೆ ಮದುವೆ ಆಗದಿರುವ ಅಖಿಲ್‌ ಸಹ ಮುಂದೆ ಮದುವೆ ಆದಾಗ ವಿಚ್ಛೇದನ ಪಡೆಯುತ್ತಾರೆ. ಅಖಿಲ್ ಜಾತಕದಲ್ಲಿ ವೈಯಕ್ತಿಕ, ವೃತ್ತಿ ಜೀವನದಲ್ಲಿ ಅಭಿವೃದ್ಧಿ ಕಷ್ಟ ಎಂದು ಹೇಳಿದ್ದಾರೆ.