Home Entertainment Actress Meena: ಅವರೇನೋ ಕೇಳಿದ್ರು, ಆದರೆ ನನಗೆ ರೂಂ ನಿಂದ ಹೊರಗೆ ಬರಲಾಗಲಿಲ್ಲ-ನಟಿ ಮೀನಾ ಖುಲ್ಲಂ...

Actress Meena: ಅವರೇನೋ ಕೇಳಿದ್ರು, ಆದರೆ ನನಗೆ ರೂಂ ನಿಂದ ಹೊರಗೆ ಬರಲಾಗಲಿಲ್ಲ-ನಟಿ ಮೀನಾ ಖುಲ್ಲಂ ಖುಲ್ಲ ಮಾತು!!!

Hindu neighbor gifts plot of land

Hindu neighbour gifts land to Muslim journalist

Actress Meena: ಬಹುಭಾಷಾ ನಟಿ ಮೀನಾ(actress Meena)ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಅನೇಕ ಸೂಪರ್ ಸ್ಟಾರ್ಗಳ ಜೊತೆ ನಟಿಸಿರುವ ಮೀನಾ, ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವಾಗ ಆಗುವ ಅನುಭವದ ಬಗ್ಗೆ ಮಾಹಿತಿ ನೀಡಿದ್ದಾರೆ.

ಖ್ಯಾತ ಬಹುಭಾಷಾ ನಟಿ ಹಾಗೂ 90ರ ದಶಕದಲ್ಲಿ ದಕ್ಷಿಣ ಭಾರತದ ಸಿನಿ ರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ಮೀನಾ, ಇಂದಿಗೂ ಸಿನಿರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಕೇವಲ ಸಾಂಪ್ರದಾಯಿಕ ಪಾತ್ರಗಳು ಮಾತ್ರವಲ್ಲದೇ, ಬೋಲ್ಡ್ ಪಾತ್ರಗಳಲ್ಲಿ ನಟಿ ಮೀನಾ ನಟಿಸಿದ್ದಾರೆ. ಈಜುಡುಗೆ ತೊಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸಿದ್ದ ನಟಿ ಮೀನಾ, ತಮ್ಮ ಆಗದ ಈಜುಡುಗೆ ತೊಟ್ಟ ಅನುಭವವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮೀನಾ ಬೋಲ್ಡ್ ಸೀನ್ ಗಳ ಬಗ್ಗೆ ಮಾತಾಡಿದ್ದು, ನಾನು ಗ್ಲಾಮರ್ ಶಾಟ್ ಗಳನ್ನು ತಪ್ಪಿಸುತ್ತಿದ್ದಾಗ ನನ್ನ ಸುತ್ತಮುತ್ತಲಿನವರು ಗ್ಲಾಮರ್ ರೋಲ್ ಅನ್ನು ಏಕೆ ಟ್ರೈ ಮಾಡಬಾರದು ಎಂದು ಕೇಳುತ್ತಿದ್ದರು. ಹೀಗಾಗಿ, ಪ್ರಭುದೇವ ಚಿತ್ರದಲ್ಲಿ ಸ್ವಿಮ್ಮಿಂಗ್ ಡ್ರೆಸ್ ಹಾಕಲು ಒಪ್ಪಿಗೆ ಸೂಚಿಸಿದೆ. ಸ್ವಿಮ್ಮಿಂಗ್ ಡ್ರೆಸ್ ಧರಿಸಿದ ಬಳಿಕ ಮೇಕಪ್ ರೂಮ್‌ನಿಂದ ಹೊರಗೆ ಬರುವುದಕ್ಕೆ ಆಗುತ್ತಿರಲಿಲ್ಲ. ತುಂಬಾ ಟೈಟ್ ಆಗಿರುತ್ತಿತ್ತು. ಈ ವೇಷದಲ್ಲಿ ಹೊರಗೆ ಹೋಗೋದು ಹೇಗೆ ಎಂಬುದೇ ಅವರ ಚಿಂತೆಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಗ್ಲಾಮರಸ್ ಮತ್ತು ಮಾದಕ ದೃಶ್ಯಗಳಲ್ಲಿ ನಟಿಸುವ ನಟಿಯರ ಕಾಲಿಗೆ ನಮಸ್ಕರಿಸಬೇಕೆಂಬ ಆಲೋಚನೆ ಬಂದಿದ್ದು ಸುಳ್ಳಲ್ಲ ಎಂದು ನಟಿ ಮೀನಾ ತಮ್ಮ ಹಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.