Home Entertainment Divya Uruduga: ಮದುವೆ ಸಂದರ್ಭದ ಫೋಟೋ ಹಂಚಿಕೊಂಡ ದಿವ್ಯಾ ಉರುಡುಗ; ಹಾಗಿದ್ರೆ ಅರವಿಂದ್ ಏನಾದ್ರು?!

Divya Uruduga: ಮದುವೆ ಸಂದರ್ಭದ ಫೋಟೋ ಹಂಚಿಕೊಂಡ ದಿವ್ಯಾ ಉರುಡುಗ; ಹಾಗಿದ್ರೆ ಅರವಿಂದ್ ಏನಾದ್ರು?!

Hindu neighbor gifts plot of land

Hindu neighbour gifts land to Muslim journalist

Divya Uruduga: ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಬಗ್ಗೆ ನಿಮಗೆ ಗೊತ್ತೇ ಇದೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರ ಮಧ್ಯೆ ಬಿಗ್ ಬಾಸ್​ನಲ್ಲಿ ಪ್ರೀತಿ ಹುಟ್ಟಿ ಅವರ ಸಂಬಂಧ ಗಟ್ಟಿಯಾಗಿದೆ. ಆದ್ರೆ ಈ ಮದುವೆ ಫೋಟೋ ನೋಡಿ ನಿಮಗೆಲ್ಲ ಶಾಕ್ ಆಗಬೇಕಿಲ್ಲ. ಯಾಕಂದ್ರೆ ಈ ಫೋಟೋ ಧಾರಾವಾಹಿಯಲ್ಲಿ ನಡೆದ ಮದುವೆ ಆಗಿದೆ.

ಹೌದು, ದಿವ್ಯ ಉರುಡುಗ (Divya Uruduga) ಅವರು ‘ನಿನಗಾಗಿ’ ಧಾರಾವಾಹಿಯಲ್ಲಿ ರಚನಾ ಹೆಸರಿನ ಪಾತ್ರ ಮಾಡಿದ್ದಾರೆ. ರುತ್ವಿಕ್ ಅವರು ಜೀವ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಇನ್ನು ಕಿಶನ್ ಬೆಳಗಲಿ ಅಶ್ವಿನ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ.

ನಿನಗಾಗಿ ಧಾರವಾಹಿಯಲ್ಲಿ ರಚನಾ ಹಾಗೂ ಅಶ್ವಿನ್ ಮಧ್ಯೆ ಕುಟುಂಬದವರು ಮದುವೆ ಫಿಕ್ಸ್ ಮಾಡಿದ್ದಾರೆ. ಆದರೆ, ಮದುವೆ ನಡೆಯುವಾಗ ಕಂಕಣ ಹೋಗಿ ಅಗ್ನಿಯಲ್ಲಿ ಬಿದ್ದು ಹೋಗಿದೆ. ಇದರಿಂದ ಮದುವೆ ಅರ್ಧಕ್ಕೆ ನಿಂತಿದೆ. ಇದರಿಂದ ರಚನಾಗೆ ಖುಷಿ ಆಗಿದೆ.

ಯಾಕೆಂದರೆ ರಚನಾ ಹಾಗೂ ಹೀರೋ ಜೀವ ಮಧ್ಯೆ ಮದುವೆ ನಡೆಯಬೇಕಿದೆ. ಈ ಕಾರಣದಿಂದ ರಚನಾ ಹಾಗೂ ಅಶ್ವಿನ್ ವಿವಾಹ ಅರ್ಧಕ್ಕೆ ನಿಂತು ಹೋಗಿದೆ. ಇದು ರಚನಾ ಅವರ ಮನೆಯವರಿಗೆ ಶಾಕಿಂಗ್ ಎನಿಸಿದೆ.
ಸದ್ಯದ ಮಟ್ಟಿಗೆ ವಿವಾಹ ಮುಂದಕ್ಕೆ ಹೋಗಿದೆ. ಇದೇ ಫೋಟೋ ಗಳನ್ನು ಕಿಶನ್ ಹಾಗೂ ದಿವ್ಯಾ ಉರುಡುಗ ಅವರು ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿಗೆ ಸಂಬಂಧಿಸಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಶಾಕ್ ಆಗಿದ್ದಾರೆ.