Home Entertainment Director Guruprasad: ಬರ್ತ್‌ಡೇ ಮುನ್ನವೇ ಡೆತ್‌ ಡೇ ಮಾಡಿದ ನಿರ್ದೇಶಕ ಗುರುಪ್ರಸಾದ್‌

Director Guruprasad: ಬರ್ತ್‌ಡೇ ಮುನ್ನವೇ ಡೆತ್‌ ಡೇ ಮಾಡಿದ ನಿರ್ದೇಶಕ ಗುರುಪ್ರಸಾದ್‌

Hindu neighbor gifts plot of land

Hindu neighbour gifts land to Muslim journalist

Director Guruprasad: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮಠ ಸಿನಿಮಾ ಮೂಲಕ ಗ್ರ್ಯಾಂಡ್‌ ಎಂಟ್ರಿ ನೀಡಿ ಸಕ್ಸಸ್‌ ಕಂಡ ನಿರ್ದೇಶಕ ಡೈರೆಕ್ಟರ್‌ ಅವರು ಮೂಲತಃ ರಾಮನಗರದವರು. ಇವರು ನವೆಂಬರ್‌ 2, 1972 ರಂದು ಜನಿಸಿದ್ದು, ಇದೀಗ ಇವರು ಜನ್ಮದಿನದ ಮೊದಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಲ್ಕೈದು ದಿನದಿಂದ ಅವರು ತಮ್ಮ ಅಪಾರ್ಟ್‌ಮೆಂಟ್‌ನಿಂದ ಹೊರಗೆ ಬಂದಿಲ್ಲ ಎನ್ನುವುದು ತಿಳಿದು ಬಂದಿಲ್ಲ. ಹಾಗಾದರೆ ಅವರು ನಾಲ್ಕೈದು ದಿನದ ಹಿಂದೆನೇ ಆತ್ಮಹತ್ಯೆಗೆ ಶರಣಾದ್ರ ಎನ್ನುವ ಸಂಶಯ ಮೂಡಿದೆ.

ಸಾಲಗಾರರ ಕಿರುಕುಳ, ಹಣಕಾಸಿನ ತೊಂದರೆಯಿಂದಲೇ ಆತ್ಮಹತ್ಯೆಗೆ ಶರಣಾದ್ರ ? ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ.

ಇಂದು ಅಪಾರ್ಟ್‌ಮೆಂಟ್‌ನಿಂದ ವಾಸನೆ ಬರುತ್ತಿರುವುದನ್ನು ಅಕ್ಕಪಕ್ಕದವರು ಗಮನಿಸಿ ಬಾಗಿಲು ತೆಗೆದು ನೋಡಿದಾಗ, ಗುರುಪ್ರಸಾದ್‌ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾದರೆ ಇವರು ಆತ್ಮಹತ್ಯೆ ಮಾಡಿಕೊಂಡಿರುವುದು ಯಾವಾಗ? ಎನ್ನುವುದು ಪೋಸ್ಟ್‌ಮಾರ್ಟಂ ಮೂಲಕ ತಿಳಿದು ಬರಲಿದೆ.

ನಿರ್ದೇಶಕ ಗುರುಪ್ರಸಾದ್‌ ಅವರು ಒಬ್ಬರೇ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇವರ ಜೊತೆ ಯಾರೂ ಇರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮೃತದೇಹ ಡಿಕಂಪೋಸ್‌ ಆಗಿದೆ ಎಂದು ಹೇಳಿದ್ದಾರೆ. ವಿಪರೀತ ಕುಡಿತಕ್ಕೆ ದಾಸರಾಗಿದ್ದ ಗುರುಪ್ರಸಾದ್‌ ಅವರು ತಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೂ ಹಣವನ್ನು ದುಶ್ಚಟಕ್ಕೆ ಬಳಸುತ್ತಿದ್ದರು ಎನ್ನಲಾಗಿದೆ.

ಬರ್ತಾ ಇರೋ ಹಣವನ್ನೆಲ್ಲ ಕುಡಿತಕ್ಕೆ ಬಳಕೆ ಮಾಡುತ್ತಿದ್ದರು. ಹೆಚ್ಚು ಮದ್ಯಪಾನ ಮಾಡುತ್ತಿದ್ದರು. ಇತ್ತೀಚೆಗೆ ಎದ್ದೇಳು ಮಂಜುನಾಥ-2 ಸಿನಿಮಾ ಮಾಡ್ತಿದ್ದರು. ಕ್ರೌಡ್‌ ಫಂಡಿಂಗ್‌ ಮೂಲಕ ಸಿನಿಮಾ ಮಾಡ್ತಿದ್ದರು. ಗುರುಪ್ರಸಾದ್‌ ತುಂಬಾ ಸಾಲ ಮಾಡಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಅವರು ಆಪ್ತರು ಹೇಳಿದ್ದಾರೆ.