Home Entertainment ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋನಿಂದ ‘ಪುಟ್ಟಗೌರಿ’ ಔಟ್; ಕಾರಣ ಪ್ರಸಾರ ಮಾಡಿಲ್ಲ ಯಾಕೆ?

ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋನಿಂದ ‘ಪುಟ್ಟಗೌರಿ’ ಔಟ್; ಕಾರಣ ಪ್ರಸಾರ ಮಾಡಿಲ್ಲ ಯಾಕೆ?

Hindu neighbor gifts plot of land

Hindu neighbour gifts land to Muslim journalist

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ, ಅಕುಲ್ ಬಾಲಾಜಿ ನಿರೂಪಣೆ ಹೊಣೆ ಹೊತ್ತಿರುವ “ಡ್ಯಾನ್ಸಿಂಗ್ ಚಾಂಪಿಯನ್ ” ಸಖತ್ ಫೇಮಸ್ ಆಗಿ ಮೂಡಿ ಬರುತ್ತಿದೆ. ಈ ಶೋ ಮೂಲಕ ಕಿರುತೆರೆಯಲ್ಲಿ ಖ್ಯಾತಿ ಪಡೆದ ಸೀರಿಯಲ್ ‘ ಪುಟ್ಟ ಗೌರಿ’ ಆಗಿ ಗುರುತಿಸಿಕೊಂಡಿದ್ದ ಸಾನ್ಯಾ ಐಯ್ಯರ್ ಉತ್ತಮ ಡ್ಯಾನ್ಸ್ ಪ್ರದರ್ಶನ ನೀಡಿ, ಜನಮನ ಗೆದ್ದಿದ್ದರೂ ಕೂಡಾ.

ಅದ್ಭುತ ಪರ್ಫಾರ್ಮೆನ್ಸ್ ಕೊಟ್ಟು ವಾರ ವಾರವೂ ಅತಿ ಹೆಚ್ಚು ವೋಟ್ ಪಡೆದುಕೊಂಡಿದ್ದ ಜೋಡಿ ಇದ್ದಕ್ಕಿದ್ದಂತೆ ಶೋನಿಂದ ಮಿಸ್ಸಿಂಗ್. ಇದು ವೀಕ್ಷಕರಿಗೆ ಬಹಳ ಬೇಸರ ತಂದಿತ್ತು‌. ಇದಕ್ಕೆ ಸಾನ್ಯಾ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾನ್ಯಾ ಆಕ್ಟಿವ್ ಆಗಿರುವ ಕಾರಣ ನೆಟ್ಟಿಗರು ಪರ್ಸನಲ್ ಆಗಿ ಕೂಡಾ ಮೆಸೇಜ್ ಮಾಡಿ ಪ್ರಶ್ನೆ ಮಾಡಿದ್ದಾರೆ. ಪ್ರತಿಯೊಬ್ಬರಿಗೂ ಉತ್ತರ ಕೊಡಲು ಆಗುವುದಿಲ್ಲ ಎಂದು ಸಾನ್ಯಾ ಹಂಚಿಕೊಂಡಿದ್ದಾರೆ. ವಿಡಿಯೋ ಹಂಚಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಅನೇಕರು ನನಗೆ ಮೆಸೇಜ್ ಮಾಡಿ ನಾವು ಯಾಕೆ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ.ಅವರಿಗೆ ಈ ವಿಡಿಯೋ ಮೂಲಕ ಕಾರಣ ತಿಳಿಸುತ್ತಿರುವೆ. ಈ ವಿಡಿಯೋ ಯಾಕೆ ಟಿವಿಯಲ್ಲಿ ಪ್ರಸಾರ ಆಗಲಿಲ್ಲ ಎಂದು ನನಗೆ ಗೊತ್ತಿಲ್ಲ. ನನ್ನ ಡ್ಯಾನ್ಸಿಂಗ್ ಪಾರ್ಟನರ್ ನಿಹಾಲ್ ಅವರು ಮದುವೆಯಾಗುತ್ತಿದ್ದಾರೆ, ಅವರ ಜೀವನದ ಬಹು ಮುಖ್ಯವಾದ ಘಟನೆ ಇದು ಹೀಗಾಗಿ ನಾನು ಏನೂ ಮಾಡುವುದಕ್ಕೆ ಆಗೋಲ್ಲ ಒಪ್ಪಿಕೊಳ್ಳಬೇಕು. ಫಿನಾಲೆ ಹಂತ ತಲುಪುವುದಕ್ಕೆ ನಮಗೆ ಕೇವಲ ನಾಲ್ಕು ಎಪಿಸೋಡ್ ಇತ್ತು. ಪಾರ್ಟನರ್ ಬದಲಾಯಿಸಬೇಕು ಎಂದು ಮನವಿ ಮಾಡಿಕೊಂಡೆ ಆದರೆ ಆಗಲಿಲ್ಲ. ಕೆಲವೊಮ್ಮೆ ಕೆಲವೊಂದು ಘಟನೆಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಬದಲಾವಣೆಗಳನು ಒಪಿಕೊಂಡು ಮುಂದೆ ಸಾಗಬೇಕು’ ಎಂದು ಸಾನ್ಯಾ ಬರೆದುಕೊಂಡಿದ್ದಾರೆ.

‘ನೀವೆಲ್ಲರು ತೀರಿಸಿರುವ ಪ್ರೀತಿ ಮತ್ತು ಸಪೋರ್ಟ್‌ಗೆ ಧನ್ಯವಾದಗಳು. ನನ್ನ ಪ್ರತಿಭೆಯನ್ನು ತೋರಿಸುವುದಕ್ಕೆ ಒಳ್ಳೆಯ ಅವಕಾಶ ಇದಾಗಿತ್ತು. ಈಗ ನನ್ನ ಜರ್ನಿ ಶುರುವಾಗಿದೆ’ ಎಂದಿದ್ದಾರೆ ಸಾನ್ಯಾ.