Home Entertainment Ajith Hanumakkanavar: ‘ಹೈವಾನ, ದನ.. ದನ ಇದ್ದಂಗೆ ಇದ್ದಾನೆ’- ನಟ ದರ್ಶನ್ ವಿರುದ್ಧ ಅಜಿತ್ ಹನುಮಕ್ಕನವರ್...

Ajith Hanumakkanavar: ‘ಹೈವಾನ, ದನ.. ದನ ಇದ್ದಂಗೆ ಇದ್ದಾನೆ’- ನಟ ದರ್ಶನ್ ವಿರುದ್ಧ ಅಜಿತ್ ಹನುಮಕ್ಕನವರ್ ವಾಗ್ದಾಳಿ

Ajith Hanumakkanavar

Hindu neighbor gifts plot of land

Hindu neighbour gifts land to Muslim journalist

Ajith Hanumakkanavar: ಕೊಲೆ ಆರೋಪಿ ದರ್ಶನ್ ಪರ ಏನಾದರೂ ಮಾಧ್ಯಮಗಳು ನಿಂತಿದ್ದರೆ ಅಥವಾ ಅವರು ದರ್ಶನ್ ಗೆ ಫೇವರ್ ಆಗಿದ್ದರೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್(Darshan) ನಿರಪರಾಧಿ ಎಂದು ಎಂದೋ ಹೊರಬರುತ್ತಿದ್ದರು. ಇಷ್ಟು ಹೊತ್ತಿರಗೆ ಯಾರಾದರು ನಾಮರ್ದ ರಾಜಕೀಯದ ವ್ಯಕ್ತಿ ಅವರನ್ನು ಬಿಡಿಸಿ ಬಕೆಟ್ ಹಿಡಿಯುತ್ತಿದ್ದ. ಆದರೆ ಮಾಧ್ಯಮಗಳು ನ್ಯಾಯದ ಪರವಾಗಿ, ದರ್ಶನ್ ಅವರ ಉಗ್ರ ರೂಪದ ಎದುರು ಸೆಟೆದು ನಿಂತ ಕಾರಣದಿಂದಲೇ ಇಂದು ಈ ಪ್ರಕರಣ ಇಷ್ಟು ಸ್ಟ್ರಾಂಗ್ ಆಗಿ ಮುನ್ನಡೆಯುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇದು ಸತ್ಯ ಕೂಡ.

ದರ್ಶನ್ ಆರೋಪಿ ಎಂದು ಅರೆಸ್ಟ್ ಆದಾಗಲಿಂದಲೂ ಮಾಧ್ಯಮಗಳು, ನಿರೂಪಕರು ಯರ್ರಾಬಿರ್ರಿ ಅವರ ಜನ್ಮ ಜಾಲಾಡುತ್ತಿದ್ದಾರೆ. ಅದರಲ್ಲೂ ನಿರೂಪಕ ಅಜಿತ್ ಹನುಮಕ್ಕನವರ್(Ajitha Hanumakkanavar) ಅಂತೂ ಮೈ ಮೇಲೆ ಆವೇಷಬಂದಂತೆ ದರ್ಶನ್ ವಿರುದ್ಧ ಹರಿಹಾಯ್ದಿದ್ದಾರೆ. ಏಕವಚನದಲ್ಲೇ ಜಾಡಿಸಿದ್ದಾರೆ. ಹೈವಾನ, ಕಿಲ್ಲಿಂಗ್ ಸ್ಟಾರ್, ದನ ಇದ್ದಾಗೆ ಇದ್ದಾನೆ, ಕೊಲೆಗಡುಕ ಎಂದೆಲ್ಲಾ ಹಿಂಡಿ ಹಿಪ್ಪೆ ಮಾಡಿದ್ದಾರೆ. ಕೆಲವು ದಿನಗಳಿಂದ ಕೊಂಚ ತಣ್ಣಗಾಗಿದ್ದ ಅಜಿತ್ ಇದೀಗ ಜೈಲಲ್ಲಿ ದರ್ಶನ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆ ಮತ್ತೆ ಕೆಂಡಾಮಂಡಲವಾಗಿದ್ದಾರೆ.

ಹೌದು, ಪರಪ್ಪನ ಅಗ್ರಹಾರದಲ್ಲಿ ದರ್ಶನ್ ತೂಗುದೀಪ್ & ಗ್ಯಾಂಗ್ ಕಳ್ಳಾಟದ ಬಗ್ಗೆ ಮತ್ತೊಮ್ಮೆ ಬೆಂಕಿಯೇ ಹೊತ್ತಿದೆ. ಖ್ಯಾತ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಇದೀಗ, ಮತ್ತೆ ದರ್ಶನ್ ತೂಗುದೀಪ್‌ ವಿರುದ್ಧ ಹರಿಹಯ್ದಿದ್ದು ‘ದನ ಇದ್ದಂಗೆ ಇದ್ದಾನೆ..’ ಅಂತಾ ಹೇಳಿದ್ದಾರೆ. ಈ ವಿಡಿಯೋ ಇಂಟರ್‌ನೆಟ್ & ಸೋಷಿಯಲ್ ಮೀಡಿಯಾ ಪೂರ್ತಿ ಸಂಚಲನ ಸೃಷ್ಟಿ ಮಾಡಿದೆ!

ಅಜಿತ್ ಹೇಳಿದ್ದೇನು?
ದರ್ಶನ್ ತೂಗುದೀಪ್ & ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಮಜಾ ಮಾಡುತ್ತಿರುವ ಕುರಿತು ನ್ಯೂಸ್ ಓದುವ ಸಮಯದಲ್ಲಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಅವರು ಗರಂ ಆಗಿದ್ದು, ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ದರ್ಶನ್ ತೂಗುದೀಪ್ ಕೂತಿರುವ ಫೋಟೋ ಬಗ್ಗೆ ಕಮೆಂಟ್ ಮಾಡಿದ್ದಾರೆ. ದರ್ಶನ್ ಅವರು ನಾನು ಸೊರಗಿದ್ದೇನೆ ಅಂತಾ ಕೋರ್ಟ್ ಬಳಿ ಮನವಿ ಮಾಡಿ ಮನೆ ಊಟ ಕೇಳಿದ್ದಾರೆ. ಈ ಫೋಟೋವನ್ನು ಜೂಮ್ ಮಾಡಿ ನೋಡಿದರೆ ಗೊತ್ತಾಗುತ್ತೆ ದರ್ಶನ್ ಸಣ್ಣ ಅಗಿಲ್ಲ ‘ಈ ಹೈವಾನ ದನ ಇದ್ದಂಗೆ ಇದ್ದಾನೆ…’ ಅಂತಾ ಹೇಳಿಕೆ ನೀಡಿದ್ದಾರೆ. ಸದ್ಯ ಅಜಿತ್ ಅವರ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದ್ದು, ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿದೆ.