Home Entertainment Actress Trisha: ತ್ರಿಶಾ ನನ್ನ ಪ್ರೀತಿಯನ್ನು ಅಳಿಸಲು ಪ್ರಯತ್ನಿಸಿದ್ದಾರೆ ಎಂದ ಸೌತ್ ನಟ!

Actress Trisha: ತ್ರಿಶಾ ನನ್ನ ಪ್ರೀತಿಯನ್ನು ಅಳಿಸಲು ಪ್ರಯತ್ನಿಸಿದ್ದಾರೆ ಎಂದ ಸೌತ್ ನಟ!

Hindu neighbor gifts plot of land

Hindu neighbour gifts land to Muslim journalist

Actress Trisha: ತಮಿಳು ನಟಿ ತ್ರಿಶಾ ಸೌತ್ ಸಿನಿಮಾ ಮಾತ್ರವಲ್ಲದೇ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಮಿಂಚಿದ್ದಾರೆ. ಈಕೆಯ ಅಂದ , ಚಾರ್ಮ್‌ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ 40ರ ಹರೆಯದಲ್ಲೂ ಸೌಂದರ್ಯದಲ್ಲಿ ಯುವ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ. ತ್ರಿಶಾ (Trisha) ಚಿತ್ರರಂಗಕ್ಕೆ ಬಂದು ಹೆಚ್ಚು ಕಮ್ಮಿ 25 ವರ್ಷವಾಗುತ್ತಿದೆ. ಇಂದಿಗೂ ನಾಯಕಿಯಾಗಿಯೇ ತೆರೆಮೇಲೆ ರಾರಾಜಿಸುತ್ತಿದ್ದಾರೆ. ಅಲ್ಲದೆ ಅವರ ಬೇಡಿಕೆ ಉಳಿಸಿಕೊಂಡಿದ್ದಾರೆ. ಒಟ್ಟಿನಲ್ಲಿ

ದಕ್ಷಿಣದಲ್ಲಿ ಎರಡು ದಶಕಗಳ ಕಾಲ ಚಿತ್ರರಂಗವನ್ನು ಆಳುತ್ತಿರುವ ನಾಯಕಿ ತ್ರಿಶಾ ಅನ್ನಬಹುದು.

ತ್ರಿಶಾ ಇಂಡಸ್ಟ್ರಿಯಲ್ಲಿ ಅನೇಕರಿಗೆ ಹತ್ತಿರವಾಗಿದ್ದಾರೆ. ಆಕೆ ತನ್ನ ಸಹ ನಟರೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಟಾಲಿವುಡ್ ಹೀರೋ ಶ್ರೀರಾಮ್ ಜೊತೆಗೂ ಉತ್ತಮ ಗೆಳೆತನವನ್ನು ಕಾಪಾಡಿಕೊಂಡಿದ್ದಾರೆ. ಶ್ರೀರಾಮ್ ಮತ್ತು ತ್ರಿಷಾ ಮೊದಲ ಬಾರಿಗೆ ‘ಮನಸೆಲ್ಲಂ’ ಸಿನಿಮಾದಲ್ಲಿ ಒಂದಾಗಿದ್ದರು. 2003 ರಲ್ಲಿ ಬಿಡುಗಡೆಯಾದ ಈ ಚಿತ್ರವು ಕಮರ್ಷಿಯಲ್ ಫ್ಲಾಪ್ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಇವರಿಬ್ಬರು ಒಳ್ಳೆಯ ಸ್ನೇಹಿತರಾದರು.

ಇತ್ತೀಚೆಗಷ್ಟೇ ಶ್ರೀರಾಮ್ ಅವರು ಕಾರ್ಯಕ್ರಮವೊಂದರಲ್ಲಿ ತ್ರಿಶಾ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದಾರೆ. ಅದೇನೆಂದರೆ ತ್ರಿಶಾ ಜೊತೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಲ್ಲದೆ ಪತ್ನಿ ವಂದನಾಗೆ ಪ್ರಪೋಸ್ ಮಾಡಿದರ ಬಗ್ಗೆಯೂ ಹೇಳಿದ್ದರು. ಆದರೆ ತ್ರಿಶಾ ವಂದನಾ ಬಳಿ ಹೋಗಿ ತನ್ನ ಬಗ್ಗೆ ಕೆಟ್ಟದಾಗಿ ಹೇಳಿದ್ದಾರಂತೆ. ಅವನಿಗೆ ಇಂಗ್ಲಿಷ್ ನಾಲೆಜ್ ಇಲ್ಲ, ಆತ ಅವಿದ್ಯಾವಂತ, ಅವನು ಒಳ್ಳೆಯವನಲ್ಲ, ಎಂದು ಶ್ರೀರಾಮ್ ಬಗ್ಗೆ ಕೆಟ್ಟ ಮಾತುಗಳು ಹೇಳಿದ್ದರಂತೆ.

ಬಳಿಕ ವಂದನಾ ಬಂದು ಶ್ರೀರಾಮ್‌ಗೆ ಈ ವಿಷಯ ತಿಳಿಸಿದಾಗ ಅವರು ಆಶ್ಚರ್ಯಗೊಂಡಿದ್ದರು. ಈ ರೀತಿಯಾಗಿ ತ್ರಿಶಾ ತನ್ನ ಬಗ್ಗೆ ಹೀಗೆ ಹೇಳಿದರು ಎಂದು ನಟ ನೆನಪಿಸಿದ್ದಾರೆ. ಆ ಸಮಯದಲ್ಲಿ ತ್ರಿಶಾ ಮುಗುಳ್ನಕ್ಕಿದ್ದರಂತೆ. ಹೀಗೆ ತ್ರಿಶಾ ನನ್ನ ಪ್ರೀತಿಯನ್ನು ಅಳಿಸಲು ಪ್ರಯತ್ನಿಸಿದ್ದಾರೆ  ಎಂದು ತಮಾಷೆಯಾಗಿ ಹೇಳಿದರು.

ಸದ್ಯ ಶ್ರೀರಾಮ್ ವಂದನಾಳನ್ನು ಪ್ರೀತಿಸಿ 2008ರಲ್ಲಿ ವಿವಾಹವಾಗಿ, ಅವರ ಪ್ರೀತಿಯ ಸಂಕೇತವಾಗಿ ಇಬ್ಬರು ಮಕ್ಕಳಿದ್ದಾರೆ.