Home Entertainment Pavitra Lokesh: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವೆ ಡೇಟಿಂಗ್ ಅಗ್ರಿಮೆಂಟ್, ತಿಂಗಳಿಗೆ ಲಕ್ಷಗಟ್ಟಲೆ ಬಿಚ್ಬೇಕು,...

Pavitra Lokesh: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಡುವೆ ಡೇಟಿಂಗ್ ಅಗ್ರಿಮೆಂಟ್, ತಿಂಗಳಿಗೆ ಲಕ್ಷಗಟ್ಟಲೆ ಬಿಚ್ಬೇಕು, ಕೈ ಕೊಟ್ರೆ ಸುರೀಬೇಕು ಕೋಟಿ, ಕೋಟಿ ?!

Hindu neighbor gifts plot of land

Hindu neighbour gifts land to Muslim journalist

ಜನಪ್ರಿಯ, ಜಗ ಮೆಚ್ಚಿದ ಜೋಡಿ ನರೇಶ್ – ಪವಿತ್ರಾ ಲೋಕೇಶ್ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಅವರಿಬ್ಬರ  ಸಂಬಂಧದ ಬಗ್ಗೆ ಇಂಡಸ್ಟ್ರಿಯಲ್ಲಿ ಚರ್ಚೆ ಶುರುವಾಗಿತ್ತು. ಅದು ನಿಲ್ಲದ ಮುಂಗಾರು ಮಳೆಯ ಥರ ಆಗಿ ಹೋಗಿದೆ. ಹನಿ ಕಡಿಯುತ್ತಿಲ್ಲ. ನಿರಂತರ ಸುದ್ದಿಗಳು ಒಂದರ ಮೇಲೊಂದು ಬಂದು ಬೀಳುತ್ತಿವೆ. ಈಗ ಆದೆಲ್ಲವನ್ನೋ ಮೀರಿಸುವಂತಹ ಬ್ರೇಕಿಂಗ್ ನ್ಯೂಸ್ ನಮ್ಮ ಹೊಸಕನ್ನಡದ ಓದುಗರಿಗಾಗಿ ಈಗ ಬಂದಿದೆ.

ನರೇಶ್ ತೆಲುಗಿನ ನಟ. ಹಿರಿಯ ನಾಯಕಿ, ನಿರ್ದೇಶಕಿ ನಿರ್ಮಾಪಕಿ ವಿಜಯನಿರ್ಮಲಾ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ನರೇಶ್, ಈ ಹಿಂದೆ ಹಲವು ಹಿಟ್ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಹೀರೋ ಆಗುವ ಅವಕಾಶಗಳು ಕಡಿಮೆಯಾದ ಮೇಲೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಎಂಟ್ರಿಕೊಟ್ಟು ಅಪ್ಪ, ಚಿಕ್ಕಪ್ಪನ ಪಾತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ವೈಯಕ್ತಿಕ ಜೀವನದಲ್ಲಿ ಒಂದಲ್ಲ, ಎರಡಲ್ಲ, ಮೂರು ಬಾರಿ ಮದುವೆಯಾಗಿ, ಎಲ್ಲಾ. ಮದುವೆಗಳೂ ಬೊರಾಗಿ ಮೂವರ ಸಂಬಂಧವನ್ನು ಮುರಿದುಕೊಂಡಿರುವ ನರೋತ್ತಮ ನರೇಶ್ ಗಾರು! ಈಗ ನರೇಶ್ ಗಾರು ಅವರ ಅಗ್ರಿಮೆಂಟ್ ನ್ಯೂಸ್ ವಚ್ಚಿಂದಿ !!

ಇತ್ತೀಚೆಗೆ ನಟಿ ಪವಿತ್ರಾ ಲೋಕೇಶ್ ಜತೆ ಅವರದು ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಮಾತು ಕೇಳಿಬರುತ್ತಿತ್ತು. ಅವರಿಬ್ಬರೂ ಮೈಸೂರಿನ ಹೋಟೆಲಿನಲ್ಲಿ ಡಬ್ಬಲ್ ಬೆಡ್ಡಿನ ಸಿಂಗಲ್ ರೂಮಿನಲ್ಲಿ ಸಿಕ್ಕಿ ಬಿದ್ದಾಗ ಅವರ ನಿಕಟತೆ, ಅದರ ಹಿಂದಿನ ಉತ್ಕಟತೆ ಮತ್ತು.ಆ ಸಂಬಂಧದ ಉಚಿತತೆ ಎಲ್ಲವೂ ಖಚಿತತೆಗೆ ತಲುಪಿತು. ಹಾಗೆ ರೂಮಿನಲ್ಲಿ ಸಿಕ್ಕಿಬಿದ್ದರು ಕೂಡಾ ಮೀಸೆ ಮಣ್ಣಾಗಲಿಲ್ಲ, ಅಥವಾ ಮೀಸೆ ಮುರಿಯಲಿಲ್ಲ ಅನ್ನೋ ಥರ ನರೇಶ್ ಮಾಧ್ಯಮದವರಿಗೆ ವಿಶ್ ಮಾಡುತ್ತಾ, ಅಳಿದುಳಿದ ಕೇಶ ಸವರಿಕೊಳ್ಳುತ್ತಾ, ವಿಷಲ್ ಹೊಡೆಯುತ್ತಾ ರೂಮಿನಿಂದ ಹೊರಕ್ಕೆ ಬಂದಿದ್ದ, ಪವಿತ್ರಾ ಲೋಕೇಶ್ ಜತೆಗೆ. ಅವರಿಬ್ಬರೂ ಮದ್ವೆ ಆಗ್ತಾರೆ ಎನ್ನುವ ಸುದ್ದಿ ಆಗ ಹಳೆಯದಾಗಿ, ‘ ಮದ್ವೆ ಆಗ್ತಾರೋ ಬಿಡ್ತಾರೋ, ಮದ್ವೆಯ ನಂತರದ್ದು ಮಾಡ್ತಾರೋ… ‘ ಅಂತ ಜನ ಆಡಿಕೊಳ್ಳಲು ಶುರು ಮಾಡಿದರು. ಈಗ ಅವೆಲ್ಲ ಹಳೆಯದಾಗಿದೆ. ಎಲ್ಲರಿಗೂ ಎಲ್ಲವೂ ಕನ್ಫರ್ಮ್ ಆಗಿದೆ. ಇವತ್ತಿಗೆ ಒಂದು ಹೊಸ ಸ್ಟೋರಿ ಹುಟ್ಟಿಕೊಂಡಿದೆ. ಅದು ಪವಿತ್ರಾ ಮತ್ತು ನರೇಶ್ ನಡುವಿನ ಅಗ್ರಿಮೆಂಟ್ ವಿಷ್ಯ. ಹಾಗಂತ ತೆಲುಗಿನ ಚಾನೆಲ್ಲುಗಳು ಸುದ್ದಿ ಮಾಡುತ್ತಿವೆ.

ಈಗ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ಮತ್ತೊಂದು ಕುತೂಹಲಕಾರಿ ಸುದ್ದಿ ವೈರಲ್ ಆಗುತ್ತಿದೆ. ಈಗ ಇವರಿಬ್ಬರು ಡೇಟಿಂಗ್ ವಿಚಾರವಾಗಿ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಬರುತ್ತಿರುವ ಮಾಹಿತಿಗಳ ಪ್ರಕಾರ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರು ಪರಸ್ಪರ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆ ಅಗ್ರಿಮೆಂಟ್ ಪ್ರಕಾರ ನರೇಶ್ ಪವಿತ್ರಾಗೆ ತಿಂಗಳಿಗೆ 25 ಲಕ್ಷ ನೀಡಬೇಕು. ಹಾಗೆ ಪ್ರತಿ ತಿಂಗಳೂ 25 ಲಕ್ಷ ಆಕೆಗೆ ನೀಡುತ್ತಾ ಹೋಗಬೇಕು. ಅಗ್ರಿಮೆಂಟು ಎಷ್ಟು ಸಮಯದ್ದೆಂದು ಇದೀಗ ಮಾಹಿತಿ ಇಲ್ಲ. ಒಂದು ವೇಳೆ, ಈ ಮಧ್ಯೆ ನರೇಶ್ ಗೆ ಪವಿತ್ರ ಲೋಕೇಶ್ ಕೂಡ ಬೇಡವೆನಿಸಿದರೆ ಅಥವಾ ಈ ಮಧ್ಯೆ ಇನ್ಯಾವುದೋ ಹೊಸ ಸಂಬಂಧಗಳ ಹಿಂದೆ ನರೇಶ ನುಗ್ಗಿದರೆ, ಆಗ ಆತ ಪವಿತ್ರಾ ಲೋಕೇಶ್ ಗೆ ಒನ್ ಟೈಮ್ ಸೆಟಲ್ ಮೆಂಟ್ ಕೊಡಬೇಕಾಗುತ್ತದೆ. ಸಿನೆಮಾಗಳಲ್ಲಿ ಲೋಕೇಷನ್ – ಶಿಫ್ಟ್ ಅಂತ ಹೇಳಿ ಹೇಗೆ ಡೈರೆಕ್ಟರ್  ಪ್ಯಾಕಪ್ ಮಾಡಿಸ್ತಾರೋ, ಹಾಗೆ ಇಲ್ಲಿ ನರೇಶ್ ಏಕಾಏಕಿ ಪವಿತ್ರಾ ಲೋಕೇಶ್ ನ ಬಿಟ್ಟು ಬೇರೆ ‘ ಲೋಕೇಷನ್’ ಹುಡ್ಕೊಂಡ್ರೆ ಅಂತ ಈ ಮುಂಜಾಗರೂಕತೆ. ಕಟ್ಟಿಕೊಂಡ ಹೆಂಡತಿಯರನ್ನು ಬಿಟ್ಟು ದುಂಬಿಗಳ ಹಿಂದೆ ಬೀಳುವ ನರೇಶ್ ಬಗ್ಗೆ ಪವಿತ್ರಾ ಲೋಕೇಶ್ ಗೆ ಇರುವ ಈ ಅಪನಂಬಿಕೆಯಿಂದ ಈ ಅಗ್ರಿಮೆಂಟ್ ‘ ಸೈನ್ ಆಫ್ ‘ ಆಗಿದೆ ಎನ್ನಲಾಗಿದೆ. 

ಈ ಅಗ್ರಿಮೆಂಟ್ ಅನ್ನು ನರೇಶ್ ಲಟಕ್ಕ ಅಂತ ಮುರಿದರೆ, ಆತ ದೊಡ್ಡ ಮೊತ್ತವನ್ನು ಪವಿತ್ರಾ ಲೋಕೇಶ್ ಗೆ ತೆರಬೇಕಾಗುತ್ತದೆ. ಈ ಮೊತ್ತ ಕೇಳಿದ್ರೆ ನೀವು ಬೆಚ್ಚಿ ಬೀಳಬಹುದು. ಅದು 50 ಕೋಟಿ ಮೊತ್ತದ ದೊಡ್ಡ ದುಡ್ಡು !! ಇದು ಸದ್ಯ ತೆಲುಗು ಚಿತ್ರರಂಗ ಮತ್ತು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ. ಇದರ ಹಿಂದಿನ ಅಸಲಿಯತ್ತು ಇನ್ನು ಕೆಲವೇ ದಿನಗಳಲ್ಲಿ ಸ್ಪಷ್ಟ ಆಗಲಿದೆ.