Home Entertainment Actor Vinayakan: ನಟ ವಿನಾಯಕನ್‌ ಮತ್ತೆ ಕಿರಿಕ್‌, ಬಂಧನ!

Actor Vinayakan: ನಟ ವಿನಾಯಕನ್‌ ಮತ್ತೆ ಕಿರಿಕ್‌, ಬಂಧನ!

Actor Vinayakan
Image source: The new Indian express

Hindu neighbor gifts plot of land

Hindu neighbour gifts land to Muslim journalist

Actor Vinayakan: ಮಲಯಾಳಂ ನಟ ವಿನಾಯಕನ್‌ ಅವರು ಕುಡಿದ ಮತ್ತಿನಲ್ಲಿ ಕಿರಿಕ್‌ ಮಾಡಿಕೊಂಡಿದ್ದು, ಗುರುವಾರ (ಮೇ.09) ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೇರಳದ ಅಂಚಲುಮ್ಮೂಡು ಭಾಗದಲ್ಲಿ ಈ ಘಟನೆ ನಡೆದಿದೆ.

ಮೇ 02 ರಿಂದ ವಿನಾಯಕನ್‌ ಅವರು ಅಂಚಲುಮ್ಮೂಡು ಭಾಗದ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಸಿನಿಮಾ ಶೂಟ್‌ ಹಿನ್ನೆಲೆಯಲ್ಲಿ ಇಲ್ಲೇ ಇದ್ದಾರೆ. ಗುರುವಾರ ಹೋಟೆಲ್‌ನಿಂದ ಚೆಕ್‌ಔಟ್‌ ಆಗುವಾಗ ಕಿರಿಕ್‌ ಮಾಡಿಕೊಂಡಿದ್ದು, ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡಿದ್ದಾರೆ. ವಿನಾಯಕನ್‌ ಅವರನ್ನು ವೈದ್ಯಕೀಯ ಚೆಕಪ್‌ಗೆ ಕರೆದುಕೊಂಡು ಹೋದಾಗ ಅವರು ಮಿತಿಮೀರಿ ಮದ್ಯ ಸೇವನೆ ಮಾಡಿದ್ದು ತಿಳಿದು ಬಂದಿದೆ.

ನಟ ವಿನಾಯಕನ್‌ ವಿರುದ್ಧ ಸೆಕ್ಷನ್‌ 118(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಪೊಲೀಸರು ಬಂಧನ ಮಾಡಿದಾಗಲೂ ಅವರ ವಿರುದ್ಧವೂ ಕೂಗಾಡಿ, ಅವಾಜ್‌ ಹಾಕಿದ್ದಾರೆ. ಸ್ಟೇಷನ್‌ ಜಾಮೀನು ನೀಡಿ ಕಳುಹಿಸಲಾಗಿದೆ.