Home Entertainment ನಟ ನಾಗಚೈತನ್ಯ ಕಾರನ್ನು ತಡೆದ ಸಂಚಾರಿ ಪೊಲೀಸರು | ರೂ.700 ದಂಡ ವಿಧಿಸಿದ ಪೊಲೀಸರ ಕ್ರಮಕ್ಕೆ...

ನಟ ನಾಗಚೈತನ್ಯ ಕಾರನ್ನು ತಡೆದ ಸಂಚಾರಿ ಪೊಲೀಸರು | ರೂ.700 ದಂಡ ವಿಧಿಸಿದ ಪೊಲೀಸರ ಕ್ರಮಕ್ಕೆ ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ !!!

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಷ್ಟೇ ನಟ ಅಲ್ಲು ಅರ್ಜುನ್ ಅವರ ಕಾರನ್ನು ಸಂಚಾರಿ ಪೊಲೀಸರು ತಡೆದು ದಂಡದ ಬಿಸಿಯನ್ನು ಮುಟ್ಟಿಸಿದ್ದರು. ಈಗ ನಾಗಚೈತನ್ಯ ಕಾರನ್ನು ಕೂಡಾ ಸಂಚಾರಿ ಪೊಲೀಸರು ತಡೆದ ಘಟನೆಯೊಂದು ನಡೆದಿದೆ.

ಸರ್ಕಾರದಿಂದ ಭದ್ರತಾ ಪಡೆದವರನ್ನು ಹೊರತುಪಡಿಸಿ ಯಾರೊಬ್ಬರು ಕಾರಿನ ಗಾಜಿನ ಮೇಲೆ ಕಪ್ಪು ಸ್ಕ್ರೀನ್ ಅಳವಡಿಸಿರಬಾರದು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದಾದ ನಂತರ ಹೈದರಾಬಾದ್ ಸಂಚಾರಿ ಪೊಲೀಸರು ಕಾರ್ಯಪ್ರವೃತರಾಗಿದ್ದಾರೆ. ವಿವಿಐಪಿ, ಸೆಲೆಬ್ರಿಟಿಗಳೆನ್ನದೆ ಕಪ್ಪು ಸ್ಕ್ರೀನ್ ಅಳವಡಿಸಿದವರನ್ನು ತಡೆದು ದಂಡ ವಿಧಿಸುತ್ತಿದ್ದಾರೆ.

ಪೊಲೀಸರ ತಪಾಸಣೆ ವೇಳೆ ಈಗಾಗಲೇ ಅಲ್ಲು ಅರ್ಜುನ್, ಕಲ್ಯಾಣ್ ರಾಮ್, ಮಂಚು ಮನೋಜ್ ಹಾಗೂ ತ್ರಿವಿಕ್ರಮ ಸೇರಿದಂತೆ ಅನೇಕ ಸೆಲೆಬ್ರಿಟಿಗಳಿಗೆ ದಂಡದ ಬಿಸಿ ಕೊಟ್ಟಿದ್ದಾರೆ. ಅಷ್ಟು ಮಾತ್ರವಲ್ಲದೇ, ಕಪ್ಪು ಸ್ಕ್ರೀನ್‌ಗಳನ್ನು ಕಳಚಿದ್ದಾರೆ. ಇದೀಗ ಆ ಸಾಲಿಗೆ ಸಮಂತಾ ಮಾಜಿ ಪತಿ ಹಾಗೂ ನಟ ನಾಗಚೈತನ್ಯ ಸೇರಿಕೊಂಡಿದ್ದಾರೆ.

ಇತ್ತೀಚೆಗೆ ಪೊಲೀಸ್ ತಪಾಸಣೆ ವೇಳೆ ನಾಗಚೈತನ್ಯ ಅವರು ಕಾರು ಸಿಕ್ಕಿಬಿದ್ದಿತು. ಈ ವೇಳೆ ಕಾರಿನ ಗಾಜಿನಲ್ಲಿದ್ದ ಕಪ್ಪು ಸ್ಕ್ರೀನ್ ನನ್ನು ತೆಗೆಸಿದ ಪೊಲೀಸರು 700 ರೂಪಾಯಿ ದಂಡವನ್ನು ವಿಧಿಸಿದರು. ಈ ಸಂದರ್ಭದಲ್ಲಿ ನಾಗಚೈತನ್ಯ ಕಾರಿನಲ್ಲೇ ಇದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.