Home Entertainment Bellary Jail: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ಗೆ ಕಾಡಿದ ಬೆನ್ನುನೋವು; ಚಿಕಿತ್ಸೆಗೆ ಮನವಿ

Bellary Jail: ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್‌ಗೆ ಕಾಡಿದ ಬೆನ್ನುನೋವು; ಚಿಕಿತ್ಸೆಗೆ ಮನವಿ

Bellary Jail
Image Credit: Cini Josh

Hindu neighbor gifts plot of land

Hindu neighbour gifts land to Muslim journalist

Bellary Jail: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್‌ ಬಳ್ಳಾರಿ ಸೆಂಟ್ರಲ್‌ ಜೈಲು ಸೇರಿದ್ದು, ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ವರದಿಯಾಗಿದೆ. ನಟ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್‌ ಜೈಲಿನಲ್ಲಿ ಬೆನ್ನು ನೋವು, ಕೈ ನೋವು ಕಾಣಿಸಿಕೊಂಡಿದೆ. ಹಾಗಾಗಿ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಹಾಗೂ ನಿನ್ನೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಕೂಡಾ ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದು, ದರ್ಶನ್‌ಗೆ ಕಾಡುತ್ತಿರುವ ಬೆನ್ನು ನೋವು, ಕೈ ನೋವಿನಿಂದ ಬಳಲುತ್ತಿರುವುದಾಗಿ ಚಿಕಿತ್ಸೆಗೆಂದು ಡಿಐಜಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಡಿಐಜಿ ಅವರು ಪ್ರತಿಕ್ರಿಯೆ ನೀಡಿದಿರುವ ಬೆನ್ನುನೋವು, ಕೈ ನೋವು ಅಷ್ಟೇನು ದೊಡ್ಡ ಸಮಸ್ಯೆಯಲ್ಲ. ಅಂತಹ ಸಮಸ್ಯೆಯಿದ್ದರೆ ಜೈಲಿನ ವೈದ್ಯರೇ ಚಿಕಿತ್ಸೆ ನೀಡುತ್ತಾರೆ ಎಂದು ಹೇಳಿದ್ದಾರೆ.