Home Entertainment Actor Darshan: ದೇಶ ಸುತ್ತಾಟದ ನಂತರ ವಿದೇಶಕ್ಕೆ ಹಾರಲು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಟ ದರ್ಶನ್‌

Actor Darshan: ದೇಶ ಸುತ್ತಾಟದ ನಂತರ ವಿದೇಶಕ್ಕೆ ಹಾರಲು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಟ ದರ್ಶನ್‌

Actor Darshan

Hindu neighbor gifts plot of land

Hindu neighbour gifts land to Muslim journalist

Actor Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿಯೇ ರೋಪಿಯಾದಂತಹ ನಟ ದರ್ಶನ್ ಸದ್ಯ ತಮ್ಮ ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಯಾಗಿದ್ದು, ಇದರ ಶೂಟಿಂಗ್ ನಿಮಿತ್ತ ಜೂನ್ 21 ರಿಂದ 25 ರವರೆಗೆ ದುಬೈ ಹಾಗೂ ಯುರೋಪ್ ಗೆ ಹೋಗಲು ಕೋರ್ಟ್ ನಲ್ಲಿ ಅನುಮತಿ ಕೇಳಿದ್ದಾರೆ.

ಪ್ರಕರಣದಲ್ಲಿ 2ನೆ ಆರೋಪಿಯಾಗಿರುವ ದರ್ಶನ್ ಅವರಿಗೆ ಕೋರ್ಟ್ ವಿದೇಶಕ್ಕೆ ಹೋಗದಂತೆ ನಿರ್ಬಂಧ ಹೇರಿದ್ದು, ಅನಿವಾರ್ಯವಿದ್ದಲ್ಲಿ ಕೋರ್ಟ್ ಅನುಮತಿ ಬೇಕು ಅಂದಿದೆ. ಹಾಗಾಗಿ ಅನುಮತಿ ಕೋರಿರುವ ನಟನಿಗೆ ಕೋರ್ಟ್ ಏನು ಹೇಳುತ್ತದೆ ಎಂದು ಕಾದು ನೋಡಬೇಕಿದೆ. ಇದೆ ಸಿನಿಮಾದ ನಿಮಿತ್ತ ಸದ್ಯದಲ್ಲಿ ಇವರು ರಾಜಸ್ಥಾನ ಪ್ರಯಾಣವನ್ನು ಕೂಡ ಮುಗಿಸಿರುತ್ತಾರೆ.

ದರ್ಶನ್ ಪರವಾಗಿ ಅವರ ವಕೀಲ ಸುನಿಲ್ ಕುಮಾರ್ 57ನೇ ಸಿಸಿಹೆಚ್ ಕೋರ್ಟ್​ನಲ್ಲಿ ಮನವಿ ಮಾಡಿದ್ದು, ವಿದೇಶಗಳಲ್ಲಿ ಶೂಟಿಂಗ್ ಮಾಡುವ ಅಗತ್ಯವಿದೆ ಎಂದು ನಿರ್ಮಾಪಕರ ಕಡೆಯಿಂದ ಮನವಿ ಕೂಡ ಬಂದಿರುತ್ತದೆ. ಜೂನ್1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಬೇಕು ಎಂದು ದರ್ಶನ್ ಮನವಿ ಸಲ್ಲಿಸಿದ್ದು, ಸಿಆರ್​ಪಿಸಿ ಸೆಕ್ಷನ್ 439(1) (b) ಅಡಿಯಲ್ಲಿ ದರ್ಶನ್ ಈ ಬಗ್ಗೆ ಮನವಿ ಮಾಡಿರುತ್ತಾರೆ.ಕೋರ್ಟ್​ನಲ್ಲಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು (ಮೇ 28) ನಡೆಯಲಿದೆ.