Home Entertainment Actor Darshan: ಪರಪ್ಪನ ಅಗ್ರಹಾರಕ್ಕೆ ಅತ್ತ ತಮ್ಮನನ್ನು ನೋಡಲು ಬಂದ ಅಣ್ಣ : ಇತ್ತ...

Actor Darshan: ಪರಪ್ಪನ ಅಗ್ರಹಾರಕ್ಕೆ ಅತ್ತ ತಮ್ಮನನ್ನು ನೋಡಲು ಬಂದ ಅಣ್ಣ : ಇತ್ತ ಗಂಡನನ್ನು ನೋಡಲು ಬಂದ ಹೆಂಡ್ತಿ

Actor Darshan

Hindu neighbor gifts plot of land

Hindu neighbour gifts land to Muslim journalist

Actor Darshan: ಅತ್ಯಾಚಾರ ಅರೋಪದ ಹಿನ್ನೆಲೆ ಜೈಲು ಪಾಲಾಗಿರುವ ಪ್ರಜ್ವಲ್‌ ರೇವಣ್ಣನ್ನು ಭೇಟಿಯಾಗಲು ಪರಪ್ಪನ ಅಗ್ರಹಾರ ಜೈಲಿಗೆ ಇಂದು ಅವರ ಸಹೋದರ ಸೂರಜ್ ರೇವಣ್ಣ ಆಗಮಿಸಿದ್ದರು. ಅಣ್ಣನ ಕ್ಷೇಮ-ಕುಶಲವನ್ನು ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ದಿನಗಳ ಹಿಂದೆಯಷ್ಟೇ ಸೂರಜ್‌ ರೇವಣ್ಣ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅವರೂ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಜೈಲು ಪಾಲಾಗಿದ್ದರು.

ಇತ್ತ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ ನೋಡಲು ಅವರ ಪತ್ನಿ ವಿಜಯ ಲಕ್ಷ್ಮಿ ಇಂದು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರು. ಪತ್ನಿ ವಿಜಯಲಕ್ಷ್ಮಿ ಜೊತೆ ಮೂರು ಜನ ಕಾರಿನಲ್ಲಿ ಆಗಮಿಸಿದ್ದರು. ದರ್ಶನ್ ಭೇಟಿಗಾಗಿ ಚೆಕ್ ಪೋಸ್ಟ್ ಮುಖಾಂತರ ವಿಜಯಲಕ್ಷ್ಮಿ ಒಳಗೆ ಹೋಗಿದ್ದಾರೆ. ದರ್ಶನ್‌ ಜೈಲು ಪಾಲಾದ ಮೇಲೆ ಏಳನೇ ಬಾರಿ ಪತ್ನಿ ವಿಜಯಲಕ್ಷ್ಮಿ ಭೇಟಿಯಾದರು. ಕಳೆದ ಸೋಮವಾರ ದರ್ಶನ್ ಅವರನ್ನು ಅವರ ಕುಟುಂಬಸ್ಥರು ಭೇಟಿ ಮಾಡಿ ಹೋಗಿದ್ದರು.