Home Entertainment Breaking News | ನಾಯಕ ನಟ, ಅನ್ನಿಯನ್ ಖ್ಯಾತಿಯ ವಿಕ್ರಂ ಗೆ ಹೃದಯಾಘಾತ

Breaking News | ನಾಯಕ ನಟ, ಅನ್ನಿಯನ್ ಖ್ಯಾತಿಯ ವಿಕ್ರಂ ಗೆ ಹೃದಯಾಘಾತ

Hindu neighbor gifts plot of land

Hindu neighbour gifts land to Muslim journalist

ಚನ್ನೈ: ಖ್ಯಾತ ನಟ ಚಿಯನ್‌ ವಿಕ್ರಂಗೆ ಹೃದಯಾಘಾತವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅನ್ನಿಯನ್ ಖ್ಯಾತಿಯ, ಚಿಯಾನ್ ವಿಕ್ರಮ್ ಅವರಿಗೆ ಇಂದು- ಜುಲೈ 8 ರಂದು ಹೃದಯಾಘಾತವಾಗಿದ್ದು, ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಇನ್ನೂ ಹೆಚ್ಚಿನ ಮಾಹಿತಿಯನ್ನು ಕಾಯಲಾಗುತ್ತಿದೆ. ವಿಕ್ರಮ್ ತಮ್ಮ ಮುಂಬರುವ ಚಿತ್ರ ಪೊನ್ನಿಯಿನ್ ಸೆಲ್ವನ್ ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಬೇಕಾಗಿತ್ತು, ಇದು ಇಂದು ಸಂಜೆ 6 ಗಂಟೆಗೆ ಚೆನ್ನೈನಲ್ಲಿ ನಡೆಯಬೇಕಿತ್ತು. ಅಷ್ಟರಲ್ಲಿ ಅವರಿಗೆ ಹೃದಯಾಘಾತ ಉಂಟಾಗಿದೆ.

ಅವರಿಗೆ ಇಂದು ಗುರುವಾರ ಏಕಾಏಕಿ ಎದೆ ಹಿಡಿದುಕೊಂಡ ಅನುಭವವಾಯಿತು. ತಕ್ಷಣ ಅವರನ್ನು ಚೆನ್ನೈ ನ ಕಾವೇರಿ ಆಸ್ಪತ್ರೆಗೆ ಸೇರಿಸಲಾಯಿತು. ಅವರಿಗೆ 56 ವರ್ಷ ವಯಸ್ಸು ಆಗಿದ್ದು, ಆರೋಗ್ಯ ಲೇಟೆಸ್ಟ್ ಮಾಹಿತಿ ಇನ್ನೂ ಬರಬೇಕಿದೆ.

ವಿಕ್ರಮ್ ಅಥವಾ ಚಿಯಾನ್ ವಿಕ್ರಮ್ ಎಂದೇ ಪ್ರಖ್ಯಾತಿ ಹೊಂದಿರುವ ನಟನ ಮೂಲ ಹೆಸರು ಕೆನಡಿ ಜಾನ್ ವಿಕ್ಟರ್. ತಮಿಳು ಚಿತ್ರರಂಗದಲ್ಲಿ ನಟನೆ ಮಾಡಿ ವಿಕ್ರಮ್ ಏಳು ಫಿಲಂಫೇರ್ ಪ್ರಶಸ್ತಿ ಪಡೆದಿದ್ದು, ಗಾಯಕರಾಗಿ ಕೂಡಾ ಹೆಸರುವಾಸಿಯಾಗಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಮ್ ಹಲವು ಬಾರಿ ತಮಿಳುನಾಡು ಸರ್ಕಾರದ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 2011ರಲ್ಲಿ ಪೀಪಲ್ಸ್ ಯೂನಿವರ್ಸಿಟಿ ಆಫ್ ಮಿಲನ್ ಗೌರವ ಡಾಕ್ಟರೇಟ್ ಪಡೆದಿದ್ದಾರೆ.