Home Education SSLC Result: 625ಕ್ಕೆ 624 ಅಂಕ, ಒಂದು ಮಾರ್ಕ್ ಕಡಿಮೆ ಆಗಿದ್ದಕ್ಕೆ ಮರು ಮೌಲ್ಯಮಾಪನ ಮೊರೆ...

SSLC Result: 625ಕ್ಕೆ 624 ಅಂಕ, ಒಂದು ಮಾರ್ಕ್ ಕಡಿಮೆ ಆಗಿದ್ದಕ್ಕೆ ಮರು ಮೌಲ್ಯಮಾಪನ ಮೊರೆ ಹೋದ ವಿದ್ಯಾರ್ಥಿನಿ !!

Hindu neighbor gifts plot of land

Hindu neighbour gifts land to Muslim journalist

SSLC Result : ರಾಜ್ಯದಲ್ಲಿ SSLC- 2024ರ ಫಲಿತಾಂಶ(SSLC-2024) ಹೊರಬಿದ್ದಿದೆ. ಉಡುಪಿ, ದ.ಕ ಜಿಲ್ಲೆ ಪ್ರತಿಸಲದಂತೆ ಈ ಸಲವೂ ಪ್ರಥಮ, ದ್ವಿತೀಯ ಸ್ಥಾನದಲ್ಲಿ ಮಿಂಚಿವೆ. ರಾಜ್ಯಕ್ಕೆ ಪ್ರಥಮ ಹಾಗೂ ರ್ಯಾಂಕ್ ಬಂದ ವಿದ್ಯಾರ್ಥಿಗಳು, ಪೋಷಕರು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಅಚ್ಚರಿ ಬೆಳವಣಿಗೆ ನಡೆದಿದೆ. ನಮಗೆ ಅಚ್ಚರಿ ಎನಿಸಿದರೂ ಇದು, ವಿದ್ಯಾರ್ಥಿನಿಗೆ ತನ್ನ ಪ್ರಯತ್ನದ ಫಲ ಪಡೆಯುವ ಶ್ರಮವಾಗಿದೆ ಎನ್ನಬಹುದು.

ಹೌದು, ಈ ಸಲದ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಬಾಗಲಕೋಟೆಯ ಅಂಕಿತಾ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ನಂತರದಲ್ಲಿ 624 ಅಂಕ ಪಡೆದು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರೆಲ್ಲರ ಜೊತೆ ಪೋಷಕರೂ ಸಂಭ್ರಮದಲ್ಲಿದ್ದಾರೆ. ಆದರೆ, ಈ ಪೈಕಿ 624 ಅಂಕ ಪಡೆದ ಬೆಂಗಳೂರಿನ ಮೇಧಾ ಶೆಟ್ಟಿ ಮಾತ್ರ ಸಂಭ್ರಮ ಪಡುತ್ತಿಲ್ಲ.

ಹೌದು,ಬೆಂಗಳೂರಿನ ಬನಶಂಕರಿಯಲ್ಲಿರುವ ಹೋಲಿ ಚೈಲ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮೇಧಾ ಶೆಟ್ಟಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 624 ಅಂಕಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಶಾಲಾ ಸಿಬ್ಬಂದಿ ಮತ್ತು ಮನೆಯವರು ವಿದ್ಯಾರ್ಥಿನಿಯ ಸಾಧನೆಗೆ ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದಾರೆ. ಆದರೆ ಮೇಧಾ ಮಾತ್ರ ಖುಷಿಯಲಿಲ್ಲ. ನನಗೆ ಅಂಕಗಳು ಕಡಿಮೆ ಆಯಿತು, ನಿರೀಕ್ಷೆ ಮಾಡಿದಷ್ಟು ಬಂದಿಲ್ಲ. ಅದೂ ಕೂಡ ಎಲ್ಲಾ ಸರಿ ಬರೆದರೂ 1 ಅಂಕವನ್ನು ನೀಡಿಲ್ಲ. ಸಂಸ್ಕೃತ ವಿಷಯದಲ್ಲಿ ಒಂದು ಅಂಕ ಕಡಿಮೆಯಾಗಿದ್ದು, ಮರು ಮೌಲ್ಯಮಾಪನದ ಮೊರೆ ಹೋಗುತ್ತಿದ್ದೇನೆ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಧಾ ಶೆಟ್ಟಿ ನಾನು ಮುಂದೆ ಮೆಡಿಕಲ್ ಮಾಡಬೇಕು ಅನ್ನೋ‌ ಆಸೆ ಇದೆ. ಆದರೆ, ನಾನು ನಿರೀಕ್ಷೆ ಮಾಡಿದಂತೆ ಒಂದು ಮಾರ್ಕ್ಸ್ ಕಡಿಮೆ‌‌ ಬಂದಿದೆ. ತಾನು ರಾಜ್ಯಕ್ಕೆ ಟಾಪರ್ ಆಗಬೇಕಿತ್ತು. ನನಗೆ 624 ಅಂಕಗಳು ಬರುವ ಮೂಲಕ ಒಂದು ಅಂಕ ಕಡಿಮೆಯಾಗಿ ದ್ವಿತೋಯ ರ್ಯಾಂಕ್ ಪಡೆದುಕೊಳ್ಳುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾಳೆ.