Home Education KEA: ಎಂಜಿನಿಯರಿಂಗ್‌ ಆಪ್ಷನ್‌ ದಾಖಲು ಶುರು, ಲಿಂಕ್‌ ಬಿಡುಗಡೆ

KEA: ಎಂಜಿನಿಯರಿಂಗ್‌ ಆಪ್ಷನ್‌ ದಾಖಲು ಶುರು, ಲಿಂಕ್‌ ಬಿಡುಗಡೆ

Hindu neighbor gifts plot of land

Hindu neighbour gifts land to Muslim journalist

KEA: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ವೈದ್ಯಕೀಯ ಕೋರ್ಸ್‌ ಹೊರತುಪಡಿಸಿ, ಎಂಜಿನಿಯರಿಂಗ್‌, ಪಶು ವೈದ್ಯಕೀಯ, ಕೃಷಿ, ಬಿಪಿಟಿ, ಎಹೆಚ್‌ಎಸ್‌ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ದಾಖಲು ಮಾಡಲು ಲಿಂಕ್‌ ಬಿಡಲಾಗಿದೆ. ಜುಲೈ 15 ರವರೆಗೆ ಅವಕಾಶ ನೀಡಲಾಗಿದೆ.

ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಬಿಎಸ್‌ಸಿ ನರ್ಸಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‌ಗಳಿಗೆ ಸಂಬಂಧಿಸಿದ ಸೀಟ್ ಮ್ಯಾಟ್ರಿಕ್ಸ್ ಸಂಬಂಧಪಟ್ಟ ಇಲಾಖೆಗಳಿಂದ ಇನ್ನೂ ಬಂದಿಲ್ಲ. ಹಾಗಾಗಿ ಬಂದ ನಂತರ ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್‌ ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ನೀಡಿರುವ ಕುರಿತು ವರದಿಯಾಗಿದೆ.

ಜುಲೈ 19 ರಂದು ಅಣಕು ಫಲಿತಾಂಶ ಪ್ರಕಟ ಮಾಡಲಾಗುವುದು. ನಂತರ ಜು.22 ರವರೆಗೆ ಆದ್ಯತೆ ಬದಲು ಮಾಡಲು ಅವಕಾಶವಿದೆ. ಜುಲೈ 25 ರಂದು ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ ಮಾಡಲಾಗುತ್ತದೆ ಎಂದು ಹೇಳಿದರು.

ಅಭ್ಯರ್ಥಿಗಳು ಸೀಟ್ ಮ್ಯಾಟ್ರಿಕ್ಸ್ ನೋಡಿಕೊಂಡು ಇಚ್ಛೆ/ಆಯ್ಕೆಗಳನ್ನು ದಾಖಲಿಸುವಾಗ ಆದ್ಯತಾ ಕ್ರಮಗಳನ್ನು ಅನುಸರಿಸಬೇಕು. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಯುಜಿಸಿಇಟಿ-25 ಸೀಟು ಹಂಚಿಕೆಯ ಮಾಹಿತಿ ಪುಸ್ತಕದಲ್ಲಿ ನೀಡಿರುವ ಸೂಚನೆಗಳನ್ನು ಓದಿಕೊಳ್ಳಬೇಕು. ಅಲ್ಲದೆ, ಕೆಇಎ ವಿಕಸನ ಯೂಟ್ಯೂಬ್ ಚಾನಲ್‌ನಲ್ಲಿ ಇರುವ ವೀಡಿಯೊ ಕೂಡ ನೋಡಬಹುದು ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್‌ಗಳಿಗೆ ಪ್ರಾಕ್ಟಿಕಲ್ ರಾಂಕ್ ಪಡೆದಿರುವ ಅಭ್ಯರ್ಥಿಗಳು, ಪ್ರಾಕ್ಟಿಕಲ್ ಮತ್ತು ರೆಗ್ಯುಲರ್ ಸೀಟುಗಳಿಗೆ ಪ್ರತ್ಯೇಕವಾಗಿಯೇ ಆಪ್ಷನ್ಸ್ ದಾಖಲಿಸಬೇಕು ಎಂದು ತಿಳಿಸಿದರು.