Home Education Puttur: ಮಕ್ಕಳು ಭವ್ಯ ಭಾರತದ ನಿರ್ಮಾಣದ ಕನಸುಗಳು: ಆಂಜನೆಯ ರೆಡ್ಡಿ

Puttur: ಮಕ್ಕಳು ಭವ್ಯ ಭಾರತದ ನಿರ್ಮಾಣದ ಕನಸುಗಳು: ಆಂಜನೆಯ ರೆಡ್ಡಿ

Hindu neighbor gifts plot of land

Hindu neighbour gifts land to Muslim journalist

Puttur: ಮಕ್ಕಳು ಕ್ರೀಡಾ ಸ್ಪೂರ್ತಿಯಿಂದ ಇರಲು ಶಾಲೆಯಲ್ಲಿ ನಡೆಯುವ ಚಟುವಟಿಕೆಗಳು ಕಾರಣವಾಗುತ್ತದೆ. ಸಂಘರ್ಷಗಳು,ಈರ್ಷೆಗಳು ನಮ್ಮ‌ ಮನಸ್ಸನ್ನು ,ದೇಹವನ್ನು ಕ್ಷೀಣಿಸುತ್ತದೆ. ಎಂದು ಪುತ್ತೂರು ಪೋಲಿಸ್ ಉಪ ನಿರೀಕ್ಷಕ ಆಂಜನೆಯ ರೆಡ್ಡಿ ನುಡಿದರು . ಅವರು ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ಆಯೋಜಿಸಲಾದ ಮಕ್ಕಳ ಕ್ರೀಡಾಕೂಟದ ವಂದನೆ ಸ್ವೀಕರಿಸಿ ಮಾತನಾಡುತ್ತಾ ಊರಿನ ಜನರ ಆರಾದನಾ ಕೇಂದ್ರವಾಗಿ ಈ ಶಾಲೆಯು ಇದೆ. ಈ ಊರಿನಿಂದ ಕಳ್ಳತನದ ದೂರುಗಳು ಬರುವುದಿಲ್ಲ ಅದಕ್ಕೆ ಕಾರಣ ಸಂಸ್ಕಾರಯುತ ಶಿಕ್ಷಣ ಈ ಶಾಲೆಯಲ್ಲಿ ದೊರಕಿರುವುದು. ಇಲ್ಲಿನ ಚಟುವಟಿಕೆಗಳು ಎಲ್ಲಾ ಶಾಲೆಗಳಿಗೂ ಮಾದರಿ, ಅರ್ಹತೆಯಿಂದಲೆ ಅತ್ಯುತ್ತಮ ಪಿಎಂಶ್ರೀ ಶಾಲೆಯೆಂದು ದೇಶಕ್ಕೆ ಅರ್ಪಣೆಯಾಗಿದೆ. ಇಲ್ಲಿನ ಮುಖ್ಯಗುರುಗಳಿಗೆ ಶಿಕ್ಷಕ ವೃಂದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. *ವೀರಮಂಗಲ ಶಾಲೆ ನಮ್ಮ‌ಇಲಾಖೆಗೆ ಹೆಮ್ಮೆ- ಚಕ್ರಪಾಣಿ* ವೀರಮಂಗಲ ಶಾಲೆಯ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳು ನಮ್ಮ‌ ಇಲಾಖೆಗೆ ಹೆಮ್ಮೆ ತಂದಿದೆ. ಬ್ಯಾಂಡ್, ಯೋಗ, ಕರಾಟೆ, ಯಕ್ಷಗಾನ, ಭರತನಾಟ್ಯ,ಸಂಗೀತ ಇತ್ಯಾದಿ ತಂಡಗಳು ತಯಾರಾಗಿರುವುದು ಅದರ ಹಿಂದಿನ ಶ್ರಮ ಶಿಕ್ಷಕ‌ ವರ್ಗದ ಬದ್ದತೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ ನುಡಿದರು. ಸಮಾರಂಭದ ಸಭಾಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಚಂದ್ರ ವಹಿಸಿದ್ದರು. ವೇದಿಕೆಯಲ್ಲಿ ನರಿಮೊಗರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ನವೀನ್ ಡಿ, ವೀರಮಂಗಲ ಶ್ರೀ ಮಹಾವಿಷ್ಣು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹರೀಶ್ ಆಚಾರ್ಯ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧ್ಯಕ್ಷ ಉಮೇಶ್ ಪೂಜಾರಿ,ವೈಷ್ಣವಿ ಮಹಿಳಾ ಮಂಡಲದ ಅಧ್ಯಕ್ಷೆ ಭವಾನಿ‌ ಕುಲಾಲ್, ಮಾಜಿ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಶೆಟ್ಟಿ, ಲಿಂಗಪ್ಪ ಗೌಡ ಆನಾಜೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ , ಹಿರಿಯ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಮಹಾಬಲ ಶೆಟ್ಟಿ, ಆನಂದ ಗೌಡ ಗುತ್ತು, ಮೇದಪ್ಪ ಗೌಡ ವೀರಮಂಗಲ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ವೀರಮಂಗಲ ಇವರು ಶುಭ ಹಾರೈಸಿದರು, ಎಸ್ ಡಿ ಎಂ ಸಿ ಸದಸ್ಯರು,ಊರವರು,ಶಿಕ್ಷಕ ವೃಂದ ಉಪಸ್ಥಿತರಿದ್ದರು. ದೈ ಶಿ ಶಿ ಹೇಮಾವತಿ ಸ್ವಾಗತಿಸಿದರು. ಶಿಕ್ಷಕಿ ಶೋಬಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯಗುರು ತಾರಾನಾಥ ಪಿ ವಂದಿಸಿದರು.