

CBSE 10th Standard: ಮೇ 13 ರಂದು ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಮಹಾರಾಷ್ಟ್ರದ ಸೋಲಾಪುರದ ವಿದ್ಯಾರ್ಥಿ ಶಿವಂ ಹೆತ್ತವರು ಮಗನ ಫಲಿತಾಂಶ ಕಂಡು ಸಂತಸಗೊಂಡಿದ್ದಾರೆ. ಮಗ ಶಿವಂ ಪ್ರತಿಯೊಂದು ವಿಷಯದಲ್ಲೂ 35 ಅಂಕಗಳನ್ನು ಗಳಿಸಿ, ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವುದು ಇವರ ಸಂತೋಷಕ್ಕೆ ಮುಖ್ಯ ಕಾರಣ.
ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆದಿರುವ ಮಹಾರಾಷ್ಟ್ರದ ಸೋಲಾಪುರದ ಶಿವಂ ವಾಘ್ಮೋರೆ ಹತ್ತನೆಯ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದಿಲ್ಲ ಎಂದು ಪೋಷಕರು ಭಾವಿಸಿದ್ದರು. ಆದರೆ ವಿದ್ಯಾರ್ಥಿ ಶಿವಂ ಎಲ್ಲಾ ವಿಷಯಗಳಲ್ಲಿ 35 ಪ್ರತಿಶತ ಅಂಕ ಪಡೆದು ಉತ್ತೀರ್ಣನಾಗಿದ್ದು, ಹೆತ್ತವರಂತೂ ಮಗನ ಫಲಿತಾಂಶದಿಂದ ಖುಷಿ ಪಟ್ಟಿದ್ದಾರೆ. ಮೆರವಣಿಗೆ ಮಾಡುವ ಮೂಲಕ ತಮ್ಮ ಸಂಭ್ರಮವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.













