Home Education Education: ಕಾರ್ಕಳ ಜ್ಞಾನಸುಧಾ ವಾಣಿಜ್ಯ ವಿಭಾಗದಲ್ಲಿ, ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Education: ಕಾರ್ಕಳ ಜ್ಞಾನಸುಧಾ ವಾಣಿಜ್ಯ ವಿಭಾಗದಲ್ಲಿ, ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

Education: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ (Education) ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಕ್ರಮದ ಒಂದು ಭಾಗವಾಗಿ ಹಲವಾರು ವರ್ಷಗಳಿಂದ 5 ರಿಂದ 10ನೇ ತರಗತಿಯವರೆಗೆ ಪ್ರತೀ ತರಗತಿಗೆ 5 ವಿದ್ಯಾರ್ಥಿಗಳಂತೆ ಉಚಿತ ಶಿಕ್ಷಣವನ್ನು ಕಾರ್ಕಳ ತಾಲೂಕಿನ ಬಡ ಅರ್ಹ ಮಕ್ಕಳಿಗೆ ನೀಡಲಾಗುತ್ತಿದ್ದು, ಕಳೆದ ಶೈಕ್ಷಣಿಕ ವರ್ಷದಿಂದ ಈ ಉಚಿತ ಶಿಕ್ಷಣವನ್ನು ಕಾಲೇಜು ವಿಭಾಗದಲ್ಲಿ ವಾಣಿಜ್ಯ ವಿಭಾಗಕ್ಕೂ ವಿಸ್ತರಿಸಲಾಗಿದೆ.

ಪ್ರಸ್ತುತ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಎಕೌಂಟೆನ್ಸಿ ಮತ್ತು ಸ್ಟ್ಯಾಟಿಸ್ಟಿಕ್ಸ್ (EBAS) ಅಥವಾ ಇಕೋನಾಮಿಕ್ಸ್, ಬಿಸಿನೆಸ್ ಸ್ಟಡಿಸ್, ಎಕೌಂಟೆನ್ಸಿ ಮತ್ತು ಕಂಪ್ಯೂಟ‌ರ್ ಸೈನ್ಸ್ (EBAC) ಸಂಯೋಜನೆಯೊಂದಿಗೆ ಸಿ.ಎ.ಫೌಂಡೇಶನ್, CSEET ತರಗತಿಗಳು ನಡೆಯುತ್ತಿದೆ.

ಇದರೊಂದಿಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವೃತ್ತಿಶಿಕ್ಷಣ ತರಬೇತಿಯನ್ನು ನೀಡಲಾಗುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಕಾನೂನು ವಿದ್ಯಾಲಯಗಳ ಪ್ರವೇಶಕ್ಕಾಗಿ ನಡೆಯುವ ಕ್ಲಾಟ್ ಪರೀಕ್ಷಾ ತರಬೇತಿಯು ಪ್ರಾರಂಭಗೊಳ್ಳಲಿದೆ.

ಸದ್ಯ ಉಚಿತ ಶಿಕ್ಷಣ 2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ, ಹತ್ತನೇ ತರಗತಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7259500911, 8147454906