Home Education CBSE: 10, 12 ತರಗತಿ ಮಕ್ಕಳಿಗೆ 15% ಪಠ್ಯಕ್ರಮ ಕಡಿತ: CBSE ಸ್ಪಷ್ಟನೆ

CBSE: 10, 12 ತರಗತಿ ಮಕ್ಕಳಿಗೆ 15% ಪಠ್ಯಕ್ರಮ ಕಡಿತ: CBSE ಸ್ಪಷ್ಟನೆ

Hindu neighbor gifts plot of land

Hindu neighbour gifts land to Muslim journalist

CBSE: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) 10 ಮತ್ತು 12 ನೇ ತರಗತಿಗಳಿಗೆ 2025 ರ ಬೋರ್ಡ್ ಪರೀಕ್ಷೆಗಳಿಗೆ ಶೇಕಡ 15 ರಷ್ಟು ಪಠ್ಯಕ್ರಮ ಕಡಿತದ ವರದಿಗಳನ್ನು ನಿರಾಕರಿಸಿದ್ದು, ಬೋರ್ಡ್ ತೆರೆದ ಪುಸ್ತಕ ಪರೀಕ್ಷೆಗಳನ್ನು ಪರಿಚಯಿಸಲು ಯೋಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

2025 ರ ಬೋರ್ಡ್ ಪರೀಕ್ಷೆಗಳಿಗೆ CBSE 10 ಮತ್ತು 12 ನೇ ತರಗತಿಗಳ ಪಠ್ಯಕ್ರಮದಲ್ಲಿ ಶೇಕಡಾ 15 ರಷ್ಟು ಕಡಿತವನ್ನು ಘೋಷಿಸಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ನಂತರ ಈ ಸ್ಪಷ್ಟೀಕರಣವು ಬಂದಿದೆ. ಇಂದೋರ್‌ನಲ್ಲಿ ನಡೆದ ಶಾಲಾ ಪ್ರಾಂಶುಪಾಲರ ಶೃಂಗಸಭೆ ‘ಬ್ರಿಡ್ಜಿಂಗ್ ದಿ ಗ್ಯಾಪ್’ನಲ್ಲಿ ಮಾತನಾಡುತ್ತಿದ್ದ ಮಂಡಳಿಯ ಪ್ರಾದೇಶಿಕ ಅಧಿಕಾರಿ ವಿಕಾಸ್ ಕುಮಾರ್ ಅಗರವಾಲ್ ಅವರನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು.

ವರದಿ ನಿರಾಕರಿಸಿದ ಸಿಬಿಸ್ ಮಂಡಳಿಯು ಅಂತಹ ಯಾವುದೇ ಸೂಚನೆಯನ್ನು ನೀಡಿಲ್ಲ ಅಥವಾ ಮೌಲ್ಯಮಾಪನ ವ್ಯವಸ್ಥೆ ಅಥವಾ ಪರೀಕ್ಷಾ ನೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಮತ್ತು ಮಂಡಳಿಯ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ ಚಾನಲ್‌ಗಳ ಮೂಲಕ ಮಾತ್ರ ಪ್ರಕಟಿಸಲಾಗುತ್ತದೆ ಎಂದು CBSE ತಿಳಿಸಿದೆ. ಆದ್ದರಿಂದ, ಅಂತಹ ವರದಿಗಳು ಆಧಾರರಹಿತವೆಂದು ಪರಿಗಣಿಸಲಾಗಿದೆ.

“ ಒಂದು ವೇಳೆ ಯಾವುದೇ ಬದಲಾವಣೆ ಇದ್ದಲ್ಲಿ ಮಂಡಳಿಯ ನೀತಿ ನಿರ್ಧಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಅಧಿಕೃತ ಚಾನಲ್‌ಗಳ ಮೂಲಕ ಮಾತ್ರ ಪ್ರಕಟಿಸಲಾಗುತ್ತದೆ” ಎಂದು ತಿಳಿಸಿದೆ.

ಇನ್ನು 2024-2025 ಶೈಕ್ಷಣಿಕ ವರ್ಷಕ್ಕೆ ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ತಕ್ಷಣದ ಬದಲಾವಣೆಗಳಿಲ್ಲ ಎಂದು CBSE ದೃಢಪಡಿಸಿದೆ. 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಏಕ-ಅವಧಿಯ ಪರೀಕ್ಷೆಯ ಸ್ವರೂಪವು ಉಳಿಯುತ್ತದೆ. ಯಾವುದೇ ಬದಲಾವಣೆ ಇದ್ದರೂ 2025 ರ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ.