Home Crime Dakshina Kannada: ಉಳ್ಳಾಲ: ವ್ಯಕ್ತಿ ಕೊಲೆಗೆ ಯತ್ನ: ಆರೋಪಿಯ ಸೆರೆ

Dakshina Kannada: ಉಳ್ಳಾಲ: ವ್ಯಕ್ತಿ ಕೊಲೆಗೆ ಯತ್ನ: ಆರೋಪಿಯ ಸೆರೆ

Crime News Bangalore

Hindu neighbor gifts plot of land

Hindu neighbour gifts land to Muslim journalist

Ullala: ಉಳ್ಳಾಲ: ಕಳವು ಮಾಡಲಾದ ರಿಕ್ಷಾ ಬ್ಯಾಟರಿಗಳನ್ನು ವಾಪಸ್‌ ತಂದು ಇಡುವಂತೆ ಹೇಳಿದ್ದಕ್ಕೆ ಕೋಪಗೊಂಡ ರೌಡಿಶೀಟರ್‌ ಒಬ್ಬ ರಿಕ್ಷಾ ಗಾಜು ಒಡೆದು ಯುವಕನೊಬ್ಬನ ಮೇಲೆ ಕತ್ತಿ ಬೀಸಿ ಕೊಲೆಗೆ ಯತ್ನ ಮಾಡಿ, ಮನೆ ಮಹಿಳೆಯರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಹೈದರ್‌ ಆಲಿ ರಸ್ತೆಯ ಮುಕ್ಕಚ್ಚೇರಿ ಎಂಎಫ್‌ಸಿ ಕ್ಲಬ್‌ ಹತ್ತಿರ ನಡೆದಿದೆ.

ಉಳ್ಳಾಲ ಪೊಲೀಸರು ಆರೋಪಿ ರೌಡಿಶೀಟರ್‌ ಅರ್ಫಾನ್‌ನನ್ನು ಬಂಧನ ಮಾಡಿದ್ದಾರೆ. ಅಬ್ದುಲ್ಲಾ ಹಮೀದ್‌ ಎಂಬುವವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಹಮೀದ್‌ ಅವರ ರಿಕ್ಷಾದ ಗಾಜನ್ನು ಒಡೆದ ಆರೋಪಿ ಬಳಿಕ ಅಳಿಯ ಮೊಹಮ್ಮದ್‌ ಇರ್ಷಾದ್‌ ಅವರ ರಿಕ್ಷಾದ ಗಾಜನ್ನು ಒಡೆಯಲು ಬಂದಿದ್ದು, ಇಷ್ಟು ಮಾತ್ರವಲ್ಲದೇ ಹಮೀದ್‌ ಅವರ ಪುತ್ರ ಆದಿಲ್‌ ಅಹಮ್ಮದ್‌ ಎಂಬುವವರ ಮೇಲೆ ಕತ್ತಿಯಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನ ಮಾಡಿದ್ದಳು.

ಉಳ್ಳಾಲ ಠಾಣಾಧಿಕಾರಿ ವಿರೂಪಾಕ್ಷ ಸ್ವಾಮಿ ನೇತೃತ್ವದ ಪೊಲೀಸರ ತಂಡ ಇಬ್ಬರನ್ನು ಬಂಧನ ಮಾಡಿದ್ದಾರೆ.