Home Crime Haveri: ತಾಯಿ ಜೀವಂತ ಇರುವಾಗಲೇ ʼಡೆತ್‌ ಸರ್ಟಿಫಿಕೇಟ್‌ʼ ಪಡೆದ ಪುತ್ರ; ಆಸ್ತಿಗಾಗಿ ಸುಳ್ಳು ಅರ್ಜಿ, ಮಗ...

Haveri: ತಾಯಿ ಜೀವಂತ ಇರುವಾಗಲೇ ʼಡೆತ್‌ ಸರ್ಟಿಫಿಕೇಟ್‌ʼ ಪಡೆದ ಪುತ್ರ; ಆಸ್ತಿಗಾಗಿ ಸುಳ್ಳು ಅರ್ಜಿ, ಮಗ ಅರೆಸ್ಟ್ ‌

Crime News Bangalore

Hindu neighbor gifts plot of land

Hindu neighbour gifts land to Muslim journalist

Haveri: ತಾಯಿ ಜೀವಂತ ಇರುವಾಗಲೇ ಪಾಪಿ ಪುತ್ರನೋರ್ವ ಆಸ್ತಿಗಾಗಿ ಸುಳ್ಳು ಅರ್ಜಿ ನೀಡಿ ತಾಯಿಯ ಡೆತ್‌ ಸರ್ಟಿಫಿಕೇಟ್‌ ಪಡೆದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ನಡೆದಿದೆ.

ಶೌಕತ್‌ ಅಲಿ (39) ಎಂಬಾತನೇ ಬಂಧಿತ ಆರೋಪಿ. ಮರಣ ಪ್ರಮಾಣಪತ್ರ ನೀಡಿದ ಪುರಸಭೆ ಅಧಿಕಾರಿಗೂ ನೋಟಿಸ್‌ ನೀಡಲಾಗಿದೆ.

ಶೌಕತ್‌ ಅಲಿ ತಂದೆ ಅವರು 2001 ರಲ್ಲಿ ಮೃತಪಟ್ಟಿದ್ದು, ಶೌಕತ್‌ ಅಲಿ ಅವರು ತಮ್ಮ ಪತ್ನಿ ಜೊತೆ 10 ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸ ಮಾಡುತ್ತಿದ್ದು, ಪುತ್ರ ಹಾಗೂ ಆತನ ತಾಯಿ ಹೂರಾಂಬಿ ಜಂಗ್ಲಿ ಸಾಬ್‌ ಎಂಬುವವರ ಹೆಸರಿನಲ್ಲಿ 2 ಎಕರೆ ಜಮೀನು ಜಂಟಿ ಖಾತೆಯಲ್ಲಿತ್ತು.

ಈತ ಆಸ್ತಿ ಕಬಳಿಸುವ ಉದ್ದೇಶದಿಂದ ಶೌಕತ್‌ ಮರಣ ಪ್ರಮಾಣ ಪತ್ರವನ್ನು ಪಡೆದಿದ್ದು, ಈ ವಿಷಯ ತಿಳಿದ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಶೌಕತ್‌ ಅಲಿಯನ್ನು ಪೊಲೀಸರು ಬಂಧನ ಮಾಡಿದ್ದು, ತನಿಖೆಗೊಳಪಡಿಸಿದ್ದಾರೆ.