Home Crime Darshan: ದರ್ಶನ್ ಹೊಡೆದ ಈ ಮೂರು ಭೀಕರ ಏಟಿನಿಂದಲೇ ರೇಣುಕಾ ಸ್ವಾಮಿ ಸಾವು !! ಎಲ್ಲೆಲ್ಲಿಗೆ...

Darshan: ದರ್ಶನ್ ಹೊಡೆದ ಈ ಮೂರು ಭೀಕರ ಏಟಿನಿಂದಲೇ ರೇಣುಕಾ ಸ್ವಾಮಿ ಸಾವು !! ಎಲ್ಲೆಲ್ಲಿಗೆ ಬಿತ್ತು ಗೊತ್ತಾ ಏಟು? ಚಾರ್ಜ್ ಶೀಟ್ ನಲ್ಲಿ ಸತ್ಯ ಬಯಲು

Darshan

Hindu neighbor gifts plot of land

Hindu neighbour gifts land to Muslim journalist

Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಸಂದೇಶಗಳನ್ನು ಓದುತ್ತಲೇ ‘ಕಾಮಿಷ್ಟ’ ಎಂದು ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ನಟ ದರ್ಶನ್(Darshan) ಹಲ್ಲೆ ನಡೆಸಿದ್ದರು, ಅವರು ಹೊಡೆದ ಈ 3 ಏಟಿನಿಂದಲೇ ರೇಣುಕಾ ಸ್ವಾಮಿ ಸಾವೀಗೀಡಾಗಿದ್ದಾರೆ ಎಂಬ ಮಾಹಿತಿ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukswamy Murder Case) ಹಿನ್ನೆಲೆ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಿಂದ ಒಂದೊಂದಾಗಿ ವಿಷಯಗಳು ಹೊರಬರುತ್ತಿವೆ. ಇದೀಗ ರೇಣುಕಾಸ್ವಾಮಿ ಸಾವಿಗೆ ದರ್ಶನ್ ಅವರ ಹೊಡೆತವೇ ಕಾರಣವಾಯಿತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ

ಹೌದು, ರೇಣುಕಾಸ್ವಾಮಿಯನ್ನು ಅಪಹರಿಸಿ ಪಟ್ಟಣಗೆರೆ ಶೆಡ್ ಗೆ ಸಹಚರರ ಮೂಲಕ ದರ್ಶನ್ ಕರೆತಂದಿದ್ದರು. ಆಗ ಶೆಡ್‌ನಲ್ಲಿ ಮೃತನ ಮೊಬೈಲ್ ಕಸಿದುಕೊಂಡು ಆಶ್ಲೀಲ ಸಂದೇಶಗಳನ್ನು ಓದುತ್ತಲೇ ಮನಬಂದಂತೆ ದರ್ಶನ್ ಚಚ್ಚಿದ್ದರು. ಆತನ ಎದೆ ಹಾಗೂ ಮರ್ಮಾಂಗದ ಮೇಲೆ ದರ್ಶನ್ ಕಾಲಿಟ್ಟು ಕ್ರೌರ್ಯ ಮೆರೆದಿದ್ದರು. ರೇಣುಕಾ ಸ್ವಾಮಿಗೆ ನೈಲಾನ್ ಹಗ್ಗ, ಮರದ ರೆಂಬೆಗಳು ಹಾಗೂ ಲಾಠಿಯಿಂದ ಹೊಡೆದು, ಮಗ್ಗರ್ ನಿಂದ ವಿದ್ಯುತ್ ಶಾಕ್ ಕೊಟ್ಟು ಆರೋಪಿಗಳು ಹಿಂಸಿಸಿದರು ಎಂದು ಉಲ್ಲೇಖವಾಗಿದೆ.

ದರ್ಶನ್ ಕೊಟ್ಟ ಮೂರು ಹೊಡೆತದಿಂದ ಸಾವು:
ರೇಣುಕಾಸ್ವಾಮಿ ಹತ್ಯೆಯಾದ ದಿನ ದರ್ಶನ್ 45 ನಿಮಿಷಗಳ ಕಾಲ ಪಟ್ಟಣಗೆರೆ ಶೆಡ್‌ನಲ್ಲಿದ್ದರು. ದರ್ಶನ್ ಆ ಮೂರು ಹೊದೆತದಿಂದಲೇ ರೇಣುಕಾಸ್ವಾಮಿ ಸಾವನ್ನಪ್ಪಿದ್ದಾನೆ ಎಂದಿದೆ.

* ಮೊದಲ ಬಾರಿ 110 ಕೆಜಿಯ ದರ್ಶನ್ ನರಪೇತಲನಂತಿದ್ದ ರೇಣುಕಾಸ್ವಾಮಿ ಎದೆಗೆ ಶೂ ಕಾಲಿನಿಂದ ಒಂದೇ ಸಮನೆ ಒದ್ದಿದ್ದಾರೆ. ದರ್ಶನ್ ಮೊದಲ ಹೊಡೆತಕ್ಕೆ ರೇಣುಕಾಸ್ವಾಮಿಯ ಎದೆಯಲ್ಲಿನ ಮೂಳೆಗಳ ಮುರಿತವಾಗಿದೆ.
* ಎರಡನೇ ಬಾರಿ ದರ್ಶನ್, ರೇಣುಕಾಸ್ವಾಮಿಯನ್ನು ಸಿನಿಮೀಯ ಶೈಲಿಯಲ್ಲಿ ಎತ್ತಿ ಲಾರಿಗೆ ಬಿಸಾಕಿದ್ದಾರೆ. ಬಿಸಾಕಿದ ರಭಸಕ್ಕೆ ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿದೆ. ತಲೆ ಬುರುಡೆಗೆ ಏಟು ಬಿದ್ದು ರಕ್ತ ಹೆಪ್ಪುಗಟ್ಟಿದೆ.
* ಮೂರನೇ ಬಾರಿ ದರ್ಶನ್, ರೇಣುಕಾಸ್ವಾಮಿಗೆ ಅವನು ಪವಿತ್ರಾ ಗೌಡಗೆ ಕಳಿಸಿದ್ದ ಫೋಟೊವನ್ನು ತೋರಿಸಿದ್ದಾರೆ. ಇದೇ ಫೋಟೊ ಅಲ್ವೇನೊ ನೀನು ಕಳಿಸಿದ್ದು ನಿನ್ನ…..! ಎಂದು ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಮರ್ಮಾಂಗಕ್ಕೆ ಒದೆಯುತ್ತಿದ್ದಂತೆ ರೇಣುಕಾಸ್ವಾಮಿಗೆ ಪ್ರಜ್ಞೆ ತಪ್ಪಿಬಿದ್ದಿದ್ದಾನೆ.

ಇನ್ನು ದರ್ಶನ್ ಹಲ್ಲೆ ನಡೆಸಿದರಿಂದ ತಾವೂ ಪ್ರೇರಣೆಗೊಂಡ ಅವರ ಸಹಚರರು ಸಹ ರೇಣುಕಾಸ್ವಾಮಿ ಮೇಲೆ ಮುಗಿಬಿದ್ದರು. ಈ ಹೊಡೆತಗಳಿಂದ ಜರ್ಜರಿತನಾಗಿ ರೇಣುಕಾ ಸ್ವಾಮಿ ಕೊನೆಯುಸಿರೆಳೆದಿದ್ದಾನೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.