Home Crime Suicide: ಬೇರೆ ಧರ್ಮವೆಂದು ಮದುವೆಗೆ ನಿರಾಕರಣೆ! ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

Suicide: ಬೇರೆ ಧರ್ಮವೆಂದು ಮದುವೆಗೆ ನಿರಾಕರಣೆ! ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

Hindu neighbor gifts plot of land

Hindu neighbour gifts land to Muslim journalist

Suicide: ಬೇರೆ ಬೇರೆ ಧರ್ಮದವರೆಂದು ಇಬ್ಬರ ಮದುಗೆ ಎರಡೂ ಕುಟುಂಬಗಳು ನಿರಾಕರಿಸಿದ್ದಕ್ಕೆ ಯುವಕ ಪ್ರೇಯಸಿಯ ದುಪಟ್ಟಾದಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 

ಕುರ್ದಿಖೇಡ ಗ್ರಾಮದ ಸಮ್ರೇಜ್ ಎಂದು ಈತ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಈತ ದಲಿತ ಸಮುದಾಯದ ಹುಡುಗಿಯೊಂದಿಗೆ ದೀರ್ಘಕಾಲದ ಸಂಬಂಧದಲ್ಲಿದ್ದ. ಅವರ ಅಂತರ್ಧರ್ಮೀಯ ಸಂಬಂಧವನ್ನು ಎರಡೂ ಕುಟುಂಬಗಳು ನಿರಾಕರಿಸಿದ್ದವು. ಹುಡುಗಿ ಇತ್ತೀಚೆಗೆ ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ವಿಷಯ ಉಲ್ಬಣಗೊಂಡಿತ್ತು.

ಆಕೆಯಿಂದ ದೂರ ಹೋಗಿರುವುದು ಮತ್ತು ಕುಟುಂಬದ ಒತ್ತಡದಿಂದ ಮನನೊಂದ ಸಮ್ರೇಜ್ ತಡರಾತ್ರಿ ಆಕೆಗೆ ಮನೆಯಿಂದ ಹೊರಬರಲು ಹೇಳಿದ್ದ, ಇಬ್ಬರೂ ಕಾಡಿನ ದಾರಿ ಹಿಡಿದರು. ಇಬ್ಬರೂ ಮಾತನಾಡುತ್ತಿರುವಾಗ ವಾಗ್ವಾದ ತೀವ್ರವಾಗಿ ಕೋಪದಲ್ಲಿ ಆತ ಪ್ರೇಯಸಿಯ ದುಪಟ್ಟಾವನ್ನು ಎಳೆದುಕೊಂಡು ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಶವವನ್ನು ನೋಡಿದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.