Home Crime Raichur: ಪತಿಯನ್ನು ಫೋಟೋ ತೆಗಿತೀನಿ ನಿಲ್ಲು ಎಂದು ಹೇಳಿ ಸೇತುವೆಯಿಂದ ತಳ್ಳಿದ ಖತರ್ನಾಕ್‌ ಪತ್ನಿ

Raichur: ಪತಿಯನ್ನು ಫೋಟೋ ತೆಗಿತೀನಿ ನಿಲ್ಲು ಎಂದು ಹೇಳಿ ಸೇತುವೆಯಿಂದ ತಳ್ಳಿದ ಖತರ್ನಾಕ್‌ ಪತ್ನಿ

Crime

Hindu neighbor gifts plot of land

Hindu neighbour gifts land to Muslim journalist

Raichur: ಪತ್ನಿಯೇ ಪತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಯತ್ನ ಮಾಡಿದ ಘಟನೆ ರಾಯಚೂರಿನ ಗುರ್ಜಾಪುರ ಸೇತುವೆ ಕಂ ಬ್ಯಾರೇಜ್‌ ಬಳಿ ನಡೆದಿದೆ.

ಪತಿಯ ಜೊತೆ ಬೈಕಿನಲ್ಲಿ ಬಂದ ಪತ್ನಿ ಸೇತುವೆ ಮೇಲೆ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಮೊದಲು ತಾನೇ ನಿಂತು ಫೋಟೋ ತೆಗೆಸಿಕೊಂಡಿದ್ದಾಳೆ. ನಂತರ ಪತಿಯನ್ನು ಸೇತುವೆ ತುದಿಗೆ ನಿಲ್ಲಿಸಿ ಫೋಟೋ ತೆಗೆಯುತ್ತೇನೆ ಎಂದು ಹೇಳಿ ತಳ್ಳಿದ್ದಾಳೆ. ನದಿಯ ಮಧ್ಯೆ ಈಜಿಕೊಂಡೇ ಬಂದ ಪತಿ ಬಂಡೆಯೊಂದರ ಮೇಲೆ ಕುಳಿತಿದ್ದಾನೆ. ಆತನ ಕಿರುಚಾಟ ಕೇಳಿದ ಅಕ್ಕಪಕ್ಕದದಲ್ಲಿದ್ದವರು ಆಗಮಿಸಿ ರಕ್ಷಣೆ ಮಾಡಿರುವ ಘಟನೆ ನಡೆದಿದೆ.

ಪತಿ ಸುಮಾರು 2 ಗಂಟೆಗಳ ಕಾಲ ನದಿಯಲ್ಲಿಯೇ ಇದ್ದಿದ್ದು, ಸ್ಥಳೀಯರ ಹಗ್ಗ ನೀಡಿ ರಕ್ಷಣೆ ಮಾಡಿದ್ದಾರೆ. ರಾಯಚೂರು ಶಕ್ತಿನಗರದ ದಂಪತಿ ನಡುವೆ ಗಲಾಟೆಯಾಗಿದ್ದು, ಹಾಗಾಗಿ ಪತಿಯನ್ನು ಕೊಲೆ ಮಾಡಲು ಪ್ಲಾನ್‌ ಮಾಡಿದ್ದ ಪತ್ನಿ ಫೋಟೋ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎಂದು ವರದಿಯಾಗಿದೆ.