Home Crime Puttur: ಅಂತರಾಜ್ಯ ಕಳ್ಳನ ಬಂಧನ ಮಾಡಿದ ಪೊಲೀಸರು

Puttur: ಅಂತರಾಜ್ಯ ಕಳ್ಳನ ಬಂಧನ ಮಾಡಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಎಂಬಲ್ಲಿ ಡಿ.20,2024 ರಂದು ಬೆಳಗ್ಗೆ ಸರಿಸುಮಾರು 10.00ಗಂಟೆಯಿಂದ 13.00 ಗಂಟೆಯ ನಡುವೆ ಮನೆಯವರು ಇಲ್ಲದೇ ಇರುವ ಸಮಯದಲ್ಲಿ ಮನೆಯ ಹಿಂಬಾಗಿಲನ್ನು ಕಾಲಿನಿಂದ ಒದ್ದು ಬಾಗಿಲು ಮುರಿದು ಮನೆಯ ಒಳಗಿದ್ದ ಗೋಡೇಜನ್ನು ಒಡೆದು, ಚಿನ್ನಾಭರಣವನ್ನು ಕಳವು ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಜಂಟಿ ಕಾರ್ಯಾಚರಣೆ ನಡೆಸಿ ಹಗಲು ಮನೆ ಕಳ್ಳತನ ನಡೆಸಿ ಯಾವುದೇ ಸುಳಿವು ನೀಡದೇ ಪರಾರಿಯಾಗುತ್ತಿದ್ದ ಆರೋಪಿಯನ್ನು ಅಪರಾಧ ಪತ್ತೆ ತಂಡ ದಿನಾಂಕ ಜ.10, 2025 ರಂದು ಬಂಧನ ಮಾಡಿದ್ದಾರೆ. ಜೊತೆಗೆ ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ಕಾರನ್ನು ಕೂಡಾ ಜಪ್ತಿ ಮಾಡಿದ್ದಾರೆ.

ಸೂರಜ್‌ ಕೆ. (36 ವರ್ಷ) ಎಂಬಾತನೇ ಬಂಧಿತ ಆರೋಪಿ.

ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ ಹಾಗೂ ಈ ಹಿಂದೆ ಕಡಬ ಠಾಣಾ ಸರಹದ್ದಿನ ಅಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ಸರಹದ್ದಿನ ಇರಾ ಹಾಗೂ ವಿಟ್ಲ ಪೊಲೀಸ್ ಠಾಣಾ ಸರಹದ್ದಿನ ಕೊಲ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ ಇದ್ದಿದು ಗ್ರಾಮದ ಅಳಕೆ ಮಜಲು ಕಡೆಗಳಲ್ಲಿ ಹಗಲು ಸಮಯ ಕಳವು ಮಾಡಿದ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಇದೊಂದು ವಿಶೇಷ ಪ್ರಕರಣ ಆಗಿದ್ದು ಆರೋಪಿಯು ಕಳ್ಳತನ ಮಾಡಿ ಯಾವುದೇ ಸುಳಿವು ಸಿಗದೆ ಪರಾರಿಯಾಗುತ್ತಿದ್ದು ಈ ಬಗ್ಗೆ, ವಿಶೇಷ ತಂಡ ರಚಿಸಿ ಆರೋಪಿ ಪತ್ತೆಗೆ ಕಾರ್ಯಾಚರಣೆಯನ್ನು ಪೊಲೀಸರು ಮಾಡಿದ್ದಾರೆ.