Home Crime Prajwal Revanna: ಪ್ರಜ್ವಲ್ ಬಂಧನ ಆಯ್ತು- ಮುಂದೆ SIT ಕೆಲಸವೇನು? ಯಾವೆಲ್ಲಾ ತನಿಖೆ ನಡೆಯುತ್ತೆ?

Prajwal Revanna: ಪ್ರಜ್ವಲ್ ಬಂಧನ ಆಯ್ತು- ಮುಂದೆ SIT ಕೆಲಸವೇನು? ಯಾವೆಲ್ಲಾ ತನಿಖೆ ನಡೆಯುತ್ತೆ?

Prajwal Revanna

Hindu neighbor gifts plot of land

Hindu neighbour gifts land to Muslim journalist

Prajwal Revanna: ಅಶ್ಲೀಲ ವಿಡಿಯೋ ಪ್ರಕರಣದ ಬಲೆಯಲ್ಲಿ ಸಿಲುಕಿ ಬರೋಬ್ಬರಿ 35 ದಿನಗಳ ಕಾಲ ಜರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಹಾಸನ(Hassan) ಜೆಡಿಎಸ್‌ ಸಂಸದ(JDS MP), ಅಶ್ಲೀಯ ವಿಡಿಯೋ ಪ್ರಕರಣ ಆರೋಪಿ ಪ್ರಜ್ವಲ್ ರೇವಣ್ಣ ನುಡಿದಂತೆ ನಡೆದಿದ್ದು, ಕೊನೆಗೂ ಬೆಂಗಳೂರಿಗೆ ವಾಪಸಾಗಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಂತೂ ಪ್ರಜ್ವಲ್ ಬಂಧನ ಆಯ್ತು. ಇನ್ಮುಂದೆ SIT ಕೆಲಸವೇನು? ಯಾವೆಲ್ಲಾ ತನಿಖೆ ನಡೆಯುತ್ತೆ?

ಇದನ್ನೂ ಓದಿ: D K Shivkumar: ನನ್ನ ಮತ್ತು ಸಿಎಂ ವಿರುದ್ಧ ಕೇರಳದಲ್ಲಿ ಅಘೋರಿಗಳಿಂದ ಶತ್ರು ಭೈರವಿ ಯಾಗ ನಡೆಯುತ್ತಿದೆ – ಡಿಕೆಶಿ ಸ್ಫೋಟಕ ಹೇಳಿಕೆ

ಸದ್ಯ ಪ್ರಜ್ವಲ್‌ ರೇವಣ್ಣ(Prajwal Revanna) ಅವರು ಮೇಲ್ನೋಟಕ್ಕೆ ಆರೋಗ್ಯವಾಗಿರುವಂತೆ ಕಂಡುಬಂದಿದ್ದಾರೆ. ಹಾಗಾಗಿ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಗಿದೆ. ಶುಕ್ರವಾರ ಬೆಳಗ್ಗಿನ ಜಾವ ಅವರನ್ನ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತದೆ. ವೈದ್ಯಕೀಯ ಪರೀಕ್ಷೆ ನಂತರ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ ಎಸ್‌ಐಟಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Egg Benifits: ಮೊಟ್ಟೆಯನ್ನು ಪ್ರತಿ ದಿನ ತಿಂದರೆ ಒಳ್ಳೆಯದೋ? ಕೆಟ್ಟದ್ದೋ? ಇಲ್ಲಿದೆ ನೋಡಿ ಹೆಲ್ತ್ ಟಿಪ್ಸ್

ಮೊದಲನೇ ಹಂತ:

ಪ್ರಜ್ವಲ್ ರೇವಣ್ಣಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಎಸ್‌ಐಟಿ ಅಧಿಕಾರಿಗಳು ಪ್ರಾಥಮಿಕ ಹಂತದ ಹೇಳಿಕೆ ಪಡೆದುಕೊಳ್ಳಲಿದ್ದಾರೆ. ಬಳಿಕ ಆರೋಪ ಹೊತ್ತಿರೋ ಪ್ರಜ್ವಲ್ ರೇವಣ್ಣರನ್ನ ಕೋರ್ಟ್ ಗೆ ಹಾಜರುಪಡಿಸಿ ವಶಕ್ಕೆ ಪಡೆಯುತ್ತಾರೆ. ಅನಂತರ ಎಸ್‌ಐಟಿಯಿಂದ ಮುಂದಿನ ವಿಚಾರಣೆ ಶುರುವಾಗಲಿದೆ. ಮೊದಲು ಆರೋಪಿ ಹೇಳಿಕೆ ಪಡೆದು ಬಳಿಕ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಿರುವ ಅಧಿಕಾರಿಗಳು. ವಿಚಾರಣೆ ವೇಳೆ ಪ್ರಜ್ವಲ್ ಉಲ್ಟಾ ಹೊಡೆಯೋ ಸಾಧ್ಯತೆಯೂ ಇದೆ. ‘ನಾನು ಅತ್ಯಾಚಾರ ಮಾಡಿಲ್ಲ’ ಅಂತಾ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸುವ ಸಾಧ್ಯತೆಯೂ ಇದೆ.

ಎರಡನೇ ಹಂತ:

ಸಂತ್ರಸ್ಥೆಯಿಂದ ಆರೋಪಿ ಗುರುತು ಪತ್ತೆ ಪ್ರಕ್ರಿಯೆ ನಡೆಯಲಿದೆ. ಈ ಹಂತದಲ್ಲಿ ಪ್ರಜ್ವಲ್ ಮತ್ತು ಸಂತ್ರಸ್ತೆಯನ್ನ ಎದುರುಬದರು ನಿಲ್ಲಿಸಲಿರುವ ಅಧಿಕಾರಿಗಳು. ಪ್ರಜ್ವಲ್ ರೇವಣ್ಣರನ್ನ ತೋರಿಸಿ ‘ಇವ್ರೇನಾ ಅಂತಾ?’ ಅಂತಾ ಕೇಳಬಹುದು. ಒಂದು ವೇಳೆ ಸಂತ್ರಸ್ತರು ಪ್ರಜ್ವಲ್ ರನ್ನ ಗುರುತಿಸಿದರೆ ಸಂಕಷ್ಟ ಶುರುವಾಗಲಿದೆ.

ಮೂರನೇ ಹಂತ:

ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟುಕೊಂಡು ಪ್ರಜ್ವರನ್ನ ವಿಚಾರಣೆ ನಡೆಸಲಿರುವ ಎಸ್‌ಐಟಿ ಅಧಿಕಾರಿಗಳು. ಈಗಾಗಲೇ ಸ್ಥಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಸಂತ್ರಸ್ತೆಯನ್ನ ಕರೆದೊಯ್ದು ಹೊಳೆನರಸೀಪುರ ಮನೆ ಸೇರಿದಂತೆ ಹಲವಡೆ ಸಂಪೂರ್ಣ ಸ್ಥಳ ಮಹಜರು ಮಾಡಿರುವ ಅಧಿಕಾರಿಗಳು. ಅಲ್ಲಿ ಸಿಕ್ಕಿರೋ ಒಂದಷ್ಟು ಎವಿಡೆನ್ಸ್ ಮುಂದಿಟ್ಟು ಪ್ರಶ್ನೆ ಮಾಡಬಹುದು.

ನಾಲ್ಕನೇ ಹಂತ:

ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಮೊಬೈಲ್ ವಶಕ್ಕೆ ಪಡೆಯಲಿದ್ದಾರೆ. ಈಗಾಗಲೇ ಪ್ರಜ್ವಲ್ ರೇವಣ್ಣರ ಮೊಬೈಲ್ನಿಂದಲೇ ವಿಡಿಯೋ ರೆಕಾರ್ಡ್ ಮಾಡಿರೋ ಮಾಹಿತಿಯಿದೆ. ಈ ಬಗ್ಗೆ ಮಾಹಿತಿ ಕೆದಕಲಿರುವ ಅಧಿಕಾರಿಗಳು. ವಿಡಿಯೋ ರೆಕಾರ್ಡ್ ಆದ ಮೊಬೈಲ್ ಎಲ್ಲಿಟ್ಟಿದ್ದಾರೆ ಎಂದು ಮಾಹಿತಿ ಪಡೆಯಲಿದ್ದಾರೆ. ಮೊಬೈಲ್ ಪ್ರೈಮ್ ಎವಿಡೆನ್ಸ್ ಆಗಿ ಪರಿಗಣನೆ ಮಾಡಲಿದ್ದಾರೆ. ಒಂದು ವೇಳೆ ಮೊಬೈಲ್ ಫಾರ್ಮೆಟ್ ಮಾಡಿದ್ರೆ ಎಫ್‌ಎಸ್‌ಎಲ್‌ಗೆ ಕಳುಹಿಸಿ ರಿಟ್ರೀವ್‌ಗೆ ಮಾಡಬಹುದು.

ಐದನೇ ಹಂತ:

ಪ್ರಜ್ವಲ್ ತಾನೇನೂ ಮಾಡಿಲ್ಲ, ಇದರಲ್ಲಿ ನನ್ನ ತಪ್ಪೇನೂ ಇಲ್ಲ ಅಂತಾ ಅಫಿಡವಿಟ್ ಸಲ್ಲಿಸಿದ್ರೆ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ? ಈಗಾಗಲೇ ಹಲವು ಮಹಿಳೆಯರ ಮೇಲೆ ಅತ್ಯಾಚಾರವೆಸಗಿರುವ ಆರೋಪ ಪ್ರಜ್ವಲ್ ರೇವಣ್ಣ ಮೇಲಿದೆ. ಆದರೆ ಇದೆಲ್ಲವೂ ಷಡ್ಯಂತ್ರ ಅಂತಾ ಹೇಳಿಕೆ ನೀಡಿರೋ ಪ್ರಜ್ವಲ್ ರೇವಣ್ಣ. ಹೀಗಾಗಿ ತಾನು ಅತ್ಯಾಚಾರ ಮಾಡಿಲ್ಲ ಅಂತಾ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆ ಇರುವ ಹಿನ್ನೆಲೆ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಗೆ ಮುಂದಾಗಬಹುದು.

ಇಷ್ಟೇ ಅಲ್ಲದೆ ಮದರ್ ಡಿವೈಸ್ ಎಲ್ಲಿದೆ? ಯಾರ ಬಳಿ ಇದೆ ಎಂಬ ಬಗ್ಗೆ ಮಾಹಿತಿ ಕೆದಕಲಿರುವ ಅಧಿಕಾರಿಗಳು. ಪ್ರಜ್ವಲ್ ರೇವಣ್ಣರ ಬಳಿ ಇದೆಯಾ? ಒಂದು ವೇಳೆ ವಿಡೀಯೋಗಳು ಸಿಕ್ಕಲ್ಲಿ ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗುತ್ತೆ. ಒಂದು ವೇಳೆ ಮದರ್ ಡಿವೈಸ್ ಸಿಗದೆ ಹೋದರೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣರ ವಾಯ್ಸ್ ಸ್ಯಾಂಪಲ್ ಪಡೆಯುವ ಸಾಧ್ಯತೆಯಿದೆ. ಏಕೆಂದರೆ ವಿಡಿಯೋದಲ್ಲಿ ಓರ್ವ ವ್ಯಕ್ತಿ ಮಾತಾಡಿರುವ ವಾಯ್ಸ್ ಇದೆ. ವಿಡಿಯೋದಲ್ಲಿರುವ ವಾಯ್ಸ್‌ಗೂ ಪ್ರಜ್ವಲ್ ವಾಯ್ಸ್‌ಗೂ ಮ್ಯಾಚ್ ಮಾಡಿ ನೋಡಲು ತೀರ್ಮಾನಿಸಿರುವ ಎಸ್‌ಐಟಿ. ಒಂದು ವೇಳೆ ವಾಯ್ಸ್ ಮ್ಯಾಚ್ ಆದ್ರೆ ಪ್ರಜ್ವಲ್ ರೇವಣ್ಣಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಇನ್ನು ವಿಡೀಯೋದಲ್ಲಿ ವ್ಯಕ್ತಿಯ ಖಾಸಗಿ ಅಂಗ ಕಾಣಿಸಿರೋದ್ರಿಂದ ಮೆಡಿಕಲ್ ಚೆಕ್ ಅಪ್ ಸಹ ಮಾಡಬಹುದು. ಆರೋಪಿಯ ಮೆಡಿಕಲ್ ಚೆಕ್ ಅಪ್ ಮಾಡಿಸಿ ಡಾಕ್ಟರ್ ಗಳ ಬಳಿ ಸರ್ಟಿಫೈ ಮಾಡಿಸಬಹುದು. ವಿಡಿಯೋದಲ್ಲಿ ಕಾಣಿಸುತ್ತಿರುವ ರೂಮ್ ಸೀಲ್ ಮಾಡಿ ಫೋಟೋ ತೆಗೆದು FSL ಗೆ tally ಮಾಡಲು ಕಳುಹಿಸಬಹುದು. ಏಕೆಂದ್ರೆ ಫೋಟೋಗ್ರಫಿ ವಿಭಾಗದಲ್ಲಿ ಫೋಟೋಸ್ಗಳನ್ನ ಟ್ಯಾಲಿ ಮಾಡಲಾಗುತ್ತೆ. ಸಂತ್ರಸ್ತೆಯ ಹೇಳಿಕೆ, ವಾಯ್ಸ್ ಸ್ಯಾಂಪಲ್, ರೂಮ್ ಫೋಟೋಸ್ ಮ್ಯಾಚ್ ಆದ್ರೆ ಪ್ರಜ್ವಲ್ ರೇವಣ್ಣ ಗೆ ಸಂಕಷ್ಟ.