Home Crime Mumbai: ‘ಲಿವ್ ಇನ್ ರಿಲೇಷನ್‌ ಶಿಪ್’ ಗೂ ಆಗಿತ್ತು ಅಗ್ರಿಮೆಂಟ್- ಕಾಪಿ ತೋರಿಸಿ ಅತ್ಯಾಚಾರ ಪ್ರಕರಣದಲ್ಲಿ...

Mumbai: ‘ಲಿವ್ ಇನ್ ರಿಲೇಷನ್‌ ಶಿಪ್’ ಗೂ ಆಗಿತ್ತು ಅಗ್ರಿಮೆಂಟ್- ಕಾಪಿ ತೋರಿಸಿ ಅತ್ಯಾಚಾರ ಪ್ರಕರಣದಲ್ಲಿ ಬೇಲ್ ಪಡೆದ ವ್ಯಕ್ತಿ

Mumbai

Hindu neighbor gifts plot of land

Hindu neighbour gifts land to Muslim journalist

Mumbai: ಭಾರತದಲ್ಲಿ ಲಿವ್-ಇನ್ ರಿಲೇಷನ್ ಶಿಪ್(Leave-in Relationship)ನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಭಾರತೀಯರು ಲಿವ್-ಇನ್ ರಿಲೇಷನ್ ಶಿಪ್ ನ್ನು ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ಇದಕ್ಕಾಗಿ ಅಗ್ರಿಮೆಂಟ್ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಈ ಅಗ್ರಿಮೆಂಟೇ ಇಲ್ಲೊಬ್ಬ ವ್ಯಕ್ತಿಗೆ ವರವಾಗಿದೆ. ಯಸ್, ಲೀವಿಂಗ್ ರಿಲೇಷನ್ ಶಿಪ್ ಅಗ್ರಿಮೆಂಟ್ ತೋರಿಸಿ ಸರ್ಕಾರಿ ನೌರಕನೋರ್ವ ಅತ್ಯಾಚಾರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ. ಏನಿದು ಪ್ರಕರಣ ಇಲ್ಲಿದೆ ಡಿಟೇಲ್

ಮುಂಬೈನಲ್ಲಿ(Mumbai) ಮದುವೆಯಾಗುತ್ತೇನೆ ಎಂದು ದೈಹಿಕ ಸಂಬಂಧ ಬೆಳೆಸಿ ಬಳಿಕ ಮೋಸ ಮಾಡಿದ್ದಾನೆ ಎಂದು ಹೇಳಿ ಲೀವಿಂಗ್ ರಿಲೇಷನ್ ಶಿಪ್‌ ಪಾರ್ಟನರ್ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಆದರೆ ಆರೋಪಿ ಇದು ಅತ್ಯಾಚಾರ ಪ್ರಕರಣ ಅಲ್ಲ ಸಮ್ಮತಿಯ ಲೈಂಗಿಕ ಸಂಬಂಧ. ಇಬ್ಬರು ಪರಸ್ಪರ ಒಪ್ಪಿ ಲೀವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದು, ಈ ಲೀವಿಂಗ್ ರಿಲೇಷನ್‌ಶಿಪ್‌ಗೆ ಅಗ್ರಿಮೆಂಟ್ ಕೂಡ ಮಾಡಲಾಗಿದೆ ಎಂದು ಲೀವಿಂಗ್ ರಿಲೇಷನ್‌ ಶಿಪ್‌ನ ಅಗ್ರಿಮೆಂಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಅಲ್ಲದೆ ದೂರು ದಾಖಲಿಸಿದ ಮಹಿಳೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿ ಇರುವುದಕ್ಕೂ ಮೊದಲು ಒಪ್ಪಂದ ಮಾಡಿಕೊಂಡಿರುವುದಾಗಿ ಆರೋಪಿ ವ್ಯಕ್ತಿ ಕೋರ್ಟ್​ಗೆ ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನಲ್ಲಿ ಏನಿದೆ?
ತನ್ನ ಲೀವಿಂಗ್ ಪಾರ್ಟನರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಹಾಗೂ ಜೊತೆಯಾಗಿ ವಾಸಿಸುತ್ತಿದ್ದ ಸಮಯದಲ್ಲಿ ಹಲವು ಬಾರಿ ಅವರು ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಅಗ್ರಿಮೆಂಟ್ ನನಲ್ಲೆರುವ ಸಹಿ ನನ್ನದಲ್ಲ ಎಂದು ಹೇಳಿದ್ದಾರೆ.

ವಕಿಲರ ವಾದ ಏನು?
‘46 ವರ್ಷದ ವ್ಯಕ್ತಿಯನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಇಬ್ಬರು ಲಿವ್-ಇನ್ ರಿಲೇಷನ್​ಶಿಪ್​ನಲ್ಲಿ ಇದ್ದರು. ಇದಕ್ಕೂ ಮುನ್ನ ಇಬ್ಬರು 7 ಶರತ್ತುಗಳನ್ನು ವಿಧಿಸಿಕೊಂಡು ಒಪ್ಪಂದ ಮಾಡಿಕೊಂಡು ದಾಖಲೆಗೆ ಸಹಿ ಹಾಕಿದ್ದಾರೆ. ಇಬ್ಬರೂ ರಿಲೇಷನ್​ಶಿಪ್​ನಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ಒಪ್ಪಂದವು ತೋರಿಸುತ್ತದೆ’ ಎಂದು ಆರೋಪಿ ಪರ ವಕೀಲ ಸುನಿಲ್ ಪಾಂಡೆ ಹೇಳಿದ್ದಾರೆ.

ಅಗ್ರಿಮೆಂಟ್ ನಲ್ಲಿ ಏನಿದೆ?
ಈಗ ನ್ಯಾಯಾಲಯಕ್ಕೆ 46 ವರ್ಷದ ವ್ಯಕ್ತಿ ಸಲ್ಲಿಕೆ ಮಾಡಿರುವ ಲೀವಿಂಗ್ ರಿಲೇಷನ್‌ ಶಿಪ್‌ ಅಗ್ರಿಮೆಂಟ್‌ನಲ್ಲಿ 7 ಮಹತ್ವದ ಅಂಶಗಳಿದ್ದು, ಅದಕ್ಕೆ ಇಬ್ಬರು ಫೋಟೋ ಸಹಿತ ಸಹಿ ಹಾಕಿದ್ದಾರೆ. ಈ ಒಪ್ಪಂದದ ಇವರಿಬ್ಬರು ಜೊತೆಯಾಗಿ ಆಗಸ್ಟ್ 1 2024 ರಿಂದ ಜೂನ್ 30, 2025 ರವರೆಗೆ ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ್ದಾರೆ.

ಈ ಅವಧಿಯಲ್ಲಿ ಇಬ್ಬರೂ ಕೂಡ ಪರಸ್ಪರ ಲೈಂಗಿಕ ಕಿರುಕುಳದ ಯಾವುದೇ ಪ್ರಕರಣವನ್ನು ದಾಖಲಿಸುವಂತಿಲ್ಲ ಹಾಗೂ ಜಗಳವಿಲ್ಲದೇ ಶಾಂತಿಯುತವಾಗಿ ಸಮಯ ಕಳೆಯಬೇಕು. ಮಹಿಳೆಯು ಪುರುಷನೊಂದಿಗೆ ಆತನ ಮನೆಯಲ್ಲೇ ವಾಸ ಮಾಡುತ್ತಾಳೆ ಹಾಗೂ ಮಹಿಳೆಯ ಸಂಬಂಧಿಕರು ಈ ಮನೆಗೆ ಬರುವಂತಿಲ್ಲ. ಈ ಸಮಯದಲ್ಲಿ ಆಕೆಗೆ ಅವನ ನಡವಳಿಕೆ ಸರಿ ಕಾಣಿಸದೇ ಹೋದರೆ ಒಂದು ತಿಂಗಳ ನೋಟಿಸ್ ನಂತರ ಯಾವಾಗ ಬೇಕಾದರೂ ಈ ಒಪ್ಪಂದದಿಂದ ಹೊರಬರಬಹುದು.

ಐದನೇ ಷರತ್ತಿನ ಪ್ರಕಾರ, ಮಹಿಳೆಯು ಲೀವಿಂಗ್‌ ಪಾರ್ಟನರ್ಗೆ ಯಾವುದೇ ಮಾನಸಿಕ ಸಂಕಟ, ಕಿರುಕುಳ ಕೊಡಬಾರದು. ಈ ಅವಧಿಯಲ್ಲಿ ಮಹಿಳೆ ಗರ್ಭಿಣಿಯಾದರೆ ಇದಕ್ಕೆ ಲೀವಿಂಗ್ ಪಾರ್ಟನರ್ ಜವಾಬ್ದಾರನಾಗುವುದಿಲ್ಲ, ಮಗು ಆಕೆಯದ್ದೇ ಜವಾಬ್ದಾರಿ. ಈ ಅವಧಿಯಲ್ಲಿ ಈ ಸಂಬಂಧದಿಂದ ಪುರುಷನಿಗೆ ಮಾನಸಿಕ ಆಘಾತ ಉಂಟಾದರೆ, ಇದರಿಂದ ಆತನ ಜೀವನ ಹಾಳಾದರೆ ಅದಕ್ಕೆ ಮಹಿಳೆಯೇ ಜವಾಬ್ದಾರಿ ಎಂದು ಅಂಗ್ರಿಮೆಂಟ್ ಮಾಡಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದವಿವಾದ ಆಲಿಸಿದ ಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ಆಗಸ್ಟ್ 29 ರಂದು ಆ ವ್ಯಕ್ತಿಗೆ ಜಾಮೀನು ನೀಡಿದೆ.