Home Crime Crime: ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರ!

Crime: ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರ!

Rape Case

Hindu neighbor gifts plot of land

Hindu neighbour gifts land to Muslim journalist

Crime: ಫಾರ್ಮ್​ಹೌಸ್​ನಲ್ಲಿ ಮಗಳ ಎದುರೇ ತಾಯಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ದೆಹಲಿಯ ಸ್ವರೂಪ್​ ನಗರದಲ್ಲಿ ನಡೆದಿದೆ.

ಫಾರ್ಮ್​ಹೌಸ್​ನ ಮೇಲ್ವಿಚಾರಕಿ ಮೇಲೆ ಪಕ್ಕದ ಮನೆಯವನು ಅತ್ಯಾಚಾರವೆಸಗಿದ್ದಾನೆ. ಬಿಹಾರದ ಮುಜಫರ್‌ಪುರ ಮೂಲದ 35 ವರ್ಷದ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಕಾದಿಪುರದ ತೋಟದ ಮನೆಯ ವರಾಂಡಾದಲ್ಲಿ ತಾನು ಮತ್ತು ತನ್ನ 11 ವರ್ಷದ ಮಗಳು ಮಲಗಿದ್ದಾಗ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಹಿಳೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಏಪ್ರಿಲ್ 20 ಮತ್ತು 21 ರ ಮಧ್ಯರಾತ್ರಿ 2 ರಿಂದ 2.30 ರ ಸುಮಾರಿಗೆ, ಅದೇ ಪ್ರದೇಶದಲ್ಲಿ ವಾಸಿಸುವ ಆರೋಪಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತೋಟದ ಮನೆಯ ಗೋಡೆಯನ್ನು ಹತ್ತಿ, ಮಹಿಳೆ ಆಕೆಯ ಮಗಳ ಜತೆ ಮಲಗಿದ್ದಾಗ ಕೈಕಾಲುಗಳನ್ನು ಕಟ್ಟಿ, ಬೆದರಿಸಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.